ಕ್ಷಯ ರೋಗದ ಕುರಿತು ಭಯ, ಆತಂಕ ಬೇಡ

ಬೀದರ್,ಮಾ.24-ಜನರು ಕ್ಷಯರೋಗದ ಕುರಿತು ಭಯ, ಆತಂಕ ಪಡದೆ, ಪ್ರತಿಯೊಬ್ಬರು ಕ್ಷಯರೋಗದ ಕುರಿತು ಹೆಚ್ಚಿನ ಮಾಹಿತಿ/ ಅರಿವು ಪಡೆದುಕೊಂಡು ದೇಶವನ್ನು “ಕ್ಷಯರೋಗ ಮುಕ್ತ ಭಾರತ” ಮಾಡಬೇಕು” ಎಂದು ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ (ಎಫ್‍ಪಿಎಐ) ಸಂಸ್ಥೆಯ ಅಧ್ಯಕ್ಷÀ ಡಾ.ನಾಗೇಶ ಪಾಟೀಲ್ ಕರೆ ನೀಡಿದರು.
ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ (ಎಫ್‍ಪಿಎಐ) ಬೀದರ ಶಾಖೆ ಹಾಗೂ ಸಿದ್ದಾರ್ಥ ಪದವಿ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಸಿದ್ದಾರ್ಥ ಕಾಲೇಜಿನ ಸಭಾಂಗಣದಲ್ಲಿ “ವಿಶ್ವ ಕ್ಷಯ ರೋಗ ದಿನ”Àದ ಅಂಗವಾಗಿ ಹಮ್ಮಿಕೊಂಡಿದ್ದ ಕ್ಷಯ ರೋಗದ ಕುರಿತು ಅರಿವು/ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳುತ್ತಿರುವ ಎಲ್ಲ ಕಾರ್ಯಕ್ರಮಗಳಲ್ಲಿ ಕ್ಷಯರೋಗದ ಕುರಿತು ಅರಿವು ಮೂಡಿಸಲಾಗುತ್ತಿದೆ. ಯುವಜನರೇ ಭಾರತದ ಶಕ್ತಿ. ಯುವಜನರು ಶಿಕ್ಷಣದ ಜೊತೆಗೆ ಆರೋಗ್ಯದ ಕುರಿತು ಹೆಚ್ಚಿನ ಜ್ಞಾನ ಪಡೆದುಕೊಳ್ಳಬೆಕು. ಕ್ಷಯರೋಗದ ಕುರಿತು ಭಯ, ಆತಂಕ ಪಡದೆ, ಪ್ರತಿಯೊಬ್ಬರು ಕ್ಷಯರೋಗದ ಕುರಿತು ಹೆಚ್ಚಿನ ಮಾಹಿತಿ/ ಅರಿವು ಪಡೆದುಕೊಂಡು ದೇಶವನ್ನು “ಕ್ಷಯರೋಗ ಮುಕ್ತ ಭಾರತ” ಮಾಡಬೇಕು” ಎಂದು ಕರೆ ನೀಡಿದರು.
ಸಂಸ್ಥೆಯ ಶಾಖಾ ವ್ಯವಸ್ಥಾಪಕÀ ಶ್ರೀನಿವಾಸ ಬಿರಾದಾರ ಅವರು ಮಾತನಾಡಿ, “ಕ್ಷಯ ರೋಗವು ಒಬ್ಬರಿಂದ ಒಬ್ಬರಿಗೆ ಹರಡುವ ರೋಗವಾಗಿದ್ದು, ಇದು ಹೆಚ್ಚಾಗಿ ಹರಡುತ್ತಿದೆ. ಆದ್ದರಿಂದ ಕ್ಷಯರೋಗ ಮುಕ್ತ ದೇಶವನ್ನಾಗಿ ಮಾಡುವುದು ಎಲ್ಲರ ಕರ್ತವ್ಯವಾಗಿದೆ. ಕ್ಷಯರೋಗವು ಮೈಕೋ ಬ್ಯಾಕ್ಟೀರಿಯಂ ಟ್ಯೂಬರ್ ಕ್ಯೂಲೋಸಿಸ್ ಎಂಬ ರೋಗಾಣುವಿನಿಂದ ಬರುವ ಒಂದು ಸೋಂಕು ರೋಗ. ಇದು ಒಬ್ಬ ಕ್ಷಯರೋಗಿ ಕೆಮ್ಮಿದಾಗ ಹಾಗೂ ಸೀನಿದಾಗ ಕ್ಷಯರೋಗದ ಕ್ರಿಮಿಗಳು ಗಾಳಿಯ ಮೂಲಕ ಆರೋಗ್ಯವಂತ ವ್ಯಕ್ತಿಗಳಿಗೆ ಕ್ಷಯದ ಸೋಂಕನ್ನು ಉಂಟು ಮಾಡುತ್ತವೆ. ಕ್ಷಯ ರೋಗವಿರುವ ಒಬ್ಬ ವ್ಯಕ್ತಿ ಚಿಕಿತ್ಸೆ ಪಡೆಯದೆ ಇದ್ದರೆ ಒಂದು ವರ್ಷದಲ್ಲಿ ಕನಿಷ್ಟ 10-15 ಜನರಿಗೆ ಕ್ಷಯದ ಸೋಂಕನ್ನು ಹರಡಬಹುದಾಗಿದೆ. ಕ್ಷಯ ರೋಗಕ್ಕೆ ಸಂಪೂರ್ಣ ಚಿಕಿತ್ಸೆ ಇದ್ದು, ಚಿಕಿತ್ಸೆಯಿಂದ ರೋಗಿಯು ಕ್ಷಯರೋಗದಿಂದ ಗುಣಮುಖರಾಗುತ್ತಾರೆ. ಆದ್ದರಿಂದ ಎಲ್ಲರೂ ಕ್ಷಯರೋಗ ನಿಯಂತ್ರಣ ಮಾಡಲು ಜನರಲ್ಲಿ ಅರಿವು-ಜಾಗೃತಿ ಮೂಡಿಸೋಣ ಎಂದರು.
ಸಿದ್ದಾರ್ಥ ಪದವಿ ಕಾಲೇಜಿನ ಪ್ರಾಚಾರ್ಯ ಗೋಪಾಲ ಬಡಿಗೇರ್ ಅವರು ಮಾತನಾಡಿ”ವಿದ್ಯಾರ್ಥಿಗಳು ಆಧುನಿಕ ಜೀವನ ಶೈಲಿಗೆ ಒಳಗಾಗದೇ, ಪ್ರತಿಯೊಬ್ಬರು ಒಳ್ಳೆಯ ಜೀವನ ಶೈಲಿಯನ್ನು ರೂಢಿಸಿಕೊಂಡು, ಅರಿವು/ ಮಾಹಿತಿ ಪಡೆದುಕೊಂಡು ಕ್ಷಯರೋಗ ನಿಯಂತ್ರಣ ಮಾಡುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ. ಇದರಲ್ಲಿ ಯುವಜನರ ಪಾತ್ರ ಬಹುಮುಖ್ಯವಾಗಿದೆ” ಎಂದು ತಿಳಿಸಿದರು.
ಕಾಲೇಜಿನ ಉಪ ಪ್ರಾಚಾರ್ಯರಾದ ಜಗದೇವಪ್ಪಾ ಚೆಕ್ಕಿ ಈ ಸಂದರ್ಭದಲ್ಲಿ ಮಾತನಾಡಿದರು.
ಕಾಲೇಜಿನ ಉಪನ್ಯಾಸಕರಾದ ಬಸವರಾಜ ಸ್ವಾಮಿ ಇವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ಉಪನ್ಯಾಸಕರಾದ ಗಿರೀಶ ಮೀಸೆ ಇವರು ಸ್ವಾಗತ ಕೋರಿದರು.
ಈPಂI ಸಂಸ್ಥೆಯ ಕಾರ್ಯಕ್ರಮ ಅಧಿಕಾರಿ ವಿಜಯಲಕ್ಷ್ಮಿ ಹುಡುಗೆ ಇವರು ವಂದಿಸಿದರು.