ಕ್ಷಯ ಮುಕ್ತ ಜಿಲ್ಲೆಗೆ ಎಲ್ಲರೂ ಕೈಜೋಡಿಸಿ

ಹಾವೇರಿ:ಮಾ.25: ಜಿಲ್ಲೆಯನ್ನು ಕ್ಷಯ ಮುಕ್ತಗೊಳಿಸಲು ಎಲ್ಲರೂ ಕೈಜೋಡಿಸಿ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ಅವರು ಕರೆ ನೀಡಿದರು.
ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು, ಇಂದು ವಿಶ್ವ ಕ್ಷಯರೋಗ ದಿನ ಆಚರಣೆ ಮಾಡುತ್ತಿದ್ದೇವೆ ನಮ್ಮ ದೇಶದಲ್ಲಿ ಈ ರೋಗಕ್ಕೆ ಪ್ರತಿಬಂಧ ಹೆರಬೇಕು. ಯಾವುದೇ ರೀತಿಯಲ್ಲಿ ಕ್ಷಯ ರೋಗವನ್ನು ಇಲ್ಲವಾಗಿಸಬೇಕು. ಕ್ಷಯರೋಗ ನಿರ್ಮೂಲನೆಗೆ ಯಾವ ರೀತಿ ಹೋರಾಟ ಮಾಡಬೇಕು ಎಂಬುದರ ಬಗ್ಗೆ ಸರಣಿ ಸಮೀಕ್ಷೆ ನಡೆಸಲಾಗಿದೆ ಎಂದರು.
ಜಿಲ್ಲೆಯ ಜನತೆಗೆ ಕ್ಷಯ ರೋಗದ ಬಗ್ಗೆ ಎಚ್ಚರಿಕೆ ಮೂಡಿಸಬೇಕು, 2025 ರ ವೇಳೆಗೆ ನಮ್ಮ ರಾಜ್ಯವನ್ನು ಕ್ಷಯ ಮುಕ್ತ ರಾಜ್ಯವನ್ನಾಗಿಸುವ ಸಂಕಲ್ಪ ಹೊಂದಿದ್ದೇವೆ. ಈ ರೋಗ ಮಾರಣಾಂತಿಕ ರೋಗವಲ್ಲ, ಜನರು ಸಕಾಲದಲ್ಲಿ ಚಿಕಿತ್ಸೆ ಪಡೆದರೆ ಸಂಪೂರ್ಣವಾಗಿ ಗುಣಮುಖವಾಗಬಹುದು ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಚ್.ಎಸ್.ರಾಘವೇಂದ್ರಸ್ವಾಮಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪಿ.ಆರ್.ಹಾವನೂರು, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ. ನೀಲೇಶ್ ಎಂ. ಎನ್, ಆಶಾಕಾರ್ಯಕರ್ತೆಯರು, ವಿಧ್ಯಾರ್ಥಿಗಳು ಇತರರು ಹಾಜರಿದ್ದರು.