ಕ್ಷಯ ಮುಕ್ತ ಕಲಬುರಗಿ ಮಾಡಲು ವಿದ್ಯಾರ್ಥಿಗಳಿಗೆ ಕಾಳಗಿ ಕರೆ

ಕಲಬುರಗಿ,ಮಾ.19-ಕಲಬುರಗಿ ಜಿಲ್ಲೆಯನ್ನು ಕ್ಷಯ ಮುಕ್ತ ಜಿಲ್ಲೆಯನ್ನಾಗಿ ಮಾಡಲು ವಿದ್ಯಾರ್ಥಿಗಳು ಪಣ ತೊಡಬೇಕು ಎಂದು ಜಿಲ್ಲಾ ಹಿರಿಯ ಟಿಬಿ ಮೇಲ್ವಿಚಾರಕ ಸಂತೋಷ ಕಾಳಗಿ ಸಲಹೆ ಕರೆ ನಿಡಿದರು.
ಕ್ಷಯ ರೋಗಿಗಳು ಸೂಕ್ತ ಚಿಕಿತ್ಸೆಯಿಂದ ಗುಣ ಮುಖರಾದವರು ಸಮುದಾಯದ ಜೊತೆಗೆ ಕೈ ಜೋಡಿಸಿ ಅವರು ನಮ್ಮಂತೆ ಸೂಕ್ತ ಚಿಕಿತ್ಸೆ ಪಡೆದು ಬೇರೆಯ ಕ್ಷಯ ರೋಗಿಗಳಿಗೆ ಮಾದರಿ
ನಗರದ ಶರಬಯ್ಯ ಗಾದಾ ಬಾಲಕಿಯರ ಸಂಯುಕ್ತ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯ ರೋಗ ನಿರ್ಮೂಲನ ಕೇಂದ್ರ ಹಾಗೂ ಶರಬಯ್ಯ ಗಾದಾ ಬಾಲಕಿಯರ ಸಂಯುಕ್ತ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದ ಸಂಯುಕ್ತಶ್ರಾಯದಲ್ಲಿ ವಿಶ್ವ ಕ್ಷಯ ರೋಗ ದಿನ ಅಂಗವಾಗಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಲ್ಲಿ ಕ್ಷಯ ರೋಗದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಸಸಿಗೆ ನೀರು ಊಣಿಸುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಅಂಜನಾದೇವಿ ಬಿರಾದಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಡಿ.ಆರ್.ಟಿ.ಬಿ ಸಕ್ಷಮ ಟಿಸ್ ಅಪ್ತ ಸಮಾಲೋಚಕ ಮಂಜುನಾಥ ಕಂಬಾಳಿಮಠ ಅವರು ಪ್ರಸ್ಥಾವಿಕವಾಗಿ ಮಾತನಾಡುತ್ತ ಕ್ಷಯ ರೋಗ ಮುಕ್ತವಾಗಿಸಲು ಭಾರತ ಸರ್ಕಾರದ ಘೋಷಣೆ ಪ್ರತಿ ಒಂದು ಮನೆಯಲ್ಲಿ ಕ್ಷಯ ರೋಗಿ ತಪ್ಪದೆ ಡಾಟ್ಸ್ ಸೆಂಟರ್‌ಗೆ ಬಂದು ಉಚಿತ ಚಿಕಿತ್ಸೆ ಪಡೆಯಬೇಕು. ಹಾಗೆ ಇದೆ ತಿಂಗಳು 24 ರಂದು ವಿಶ್ವ ಕ್ಷಯ ರೋಗ ದಿನವನ್ನಾಗಿ ಆಚರಿಸಲಾಗುತ್ತದೆ. ಅದರ ಅಂಗವಾಗಿ ಎಲ್ಲಾ ಶಾಲಾ ಕಾಲೇಜುಗಳಲ್ಲಿ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅದರಲ್ಲಿ ಭಾಗವಹಿಸಿದವರಿಗೆ ಸೂಕ್ತ ನಗದು ರೂಪದಲ್ಲಿ ಕೊಡಲಾಗುತ್ತಿದೆ ಎಂದು ಹೇಳಿದರು ಹಾಗೆ ಪ್ರತಿ ಒಬ್ಬರು ಎರಡೂ ವಾರಕಿಂತ ಹೆಚ್ಚು ಕೆಮ್ಮು ರಾತ್ರಿ ವೇಳೆ, ಜ್ವರ, ತೂಕ ಕಡಿಮೆ ಅಗುವ ಲಕ್ಷಣ ಕಂಡು ಬಂದಲ್ಲಿ ತಪ್ಪದೆ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಚಿಕಿತ್ಸೆ ಪಡೆದು ಕ್ಷಯ ರೋಗ ನಿರ್ಮೂಲನೆ ಮಾಡಲು ಕೈ ಜೋಡಿಸಿ ಎಂದು ಹೇಳಿದರು.
ವೇದಿಕೆ ಮೇಲೆ ಪ್ರಮುಖರಾದ ಎಸ್ ಟಿ ಎಸ್ ಶರಣು ಸಿಂಗೆ , ಟಿ ಬಿ ಹೆಚ್ ವಿ ಸರೋಜ ಪಗ್ಲಾಪೂರ.ಪ್ರೋ ಬಿ ಎಸ್ ರುದ್ರಾಕ್ಷಿ , ಪ್ರೊ ವಾಸವಿ ಡಿ ವಿ, ಉಪಸ್ಥಿತರಿದ್ದರು.
ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಕ್ಷಯ ರೋಗ ಕುರಿತು ರಸಪ್ರಶ್ನೆ ಏರ್ಪಡಿಸಲಾಗಿತ್ತು ಇದರಲ್ಲಿ ಪ್ರಥಮ ,ದೃತೀಯ, ತೃತೀಯ ಬಹುಮಾನ ನಗದು ರೂಪದಲ್ಲಿ ನೀಡಲಾಯಿತು.
ಇದೆ ಸಂಧರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಪ್ರಶ್ನೆ ಕೇಳಿ ಉತ್ತರ ಪಡೆದುಕೊಂಡರು,ಮಂಜುನಾಥ ಸ್ವಾಗತಿಸಿದರು, ಪ್ರೋಬಿ ಎಸ್ ರುದ್ರಾಕ್ಷಿ ನಿರೂಪಿಸಿದರು. ಪ್ರೋ ವಾಸವಿ ಡಿ ವಿ, ವಂದಿಸಿದರು.ವಿದ್ಯಾರ್ಥಿಗಳು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.