ಕ್ಷಯ ನಿವಾರಣೆಯಾಗುವಂತಹ ರೋಗವಾಗಿದೆ ಹೆದರಿಕೆ ಸಲ್ಲ- ಕೆ.ರಾಜಶೇಖ

ಸಂಡೂರು :ಏ:24::ತಾಲೂಕಿನಾದ್ಯಂತ ಇರುವ ಎಲ್ಲಾ ರೀತಿಯ ಸಾರ್ವಜನಿಕರನ್ನು ಪರೀಕ್ಷೆ ಮತ್ತು ಪತ್ತೆ ಮಾಡಿ ಸೂಕ್ತ ಚಿಕಿತ್ಸೆಯನ್ನು ನೀಡುವ ಮೂಲಕ ಕ್ಷಯ ರೋಗ ನಿವಾರಣೆಯನ್ನು ಮಾಡಬಹುದು ಎಂದು ಜಿಲ್ಲಾ ಕ್ಷಯರೋಗ ಅಸ್ಪತ್ರೆಯ ಪಿಲ್ಡ್ ಅಫಿಸರ್ ರಾಜಶೇಖರ್.ಕೆ. ತಿಳಿಸಿದರು.
ಅವರು ಇಂದು ತಾಲೂಕಿನ ತೋರಣಗಲ್ಲು ಗ್ರಾಮದ ದರೋಜಿ ಕೆರೆ ಹತ್ತಿರದ ಉದ್ಯೋಗ ಖಾತ್ರಿ ಕೆಲಸ ಗಾರರು ಮಾಡುತ್ತಿರುವ ಕೆಲಸದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿ ಕ್ಷಯರೋಗ ಎಂದಾಕ್ಷಣ ಬಹಳಷ್ಟು ಜನರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ, ಅದರೆ ಯಾರೂ ಸಹ ಭಯಪಡುವ ಅಗತ್ಯ ಇಲ್ಲ, ಪ್ರತಿಯೊಬ್ಬರಿಗೂ ಉಚಿತವಾಗಿ ಸರ್ಕಾರ ಚಿಕಿತ್ಸೆ ನೀಡುತ್ತಿದೆ, ಇದು ಬ್ಯಾಕ್ಟೀರಿಯಾದಿಂದ ಹರಡುತ್ತದೆ, ಒಬ್ಬರಿಂದ ಒಬ್ಬರಿಗೆ ಕೆಮ್ಮುವ ಸಂದರ್ಭದಲ್ಲಿ ಹರಡುತ್ತದೆ, ಸರಿಯಾದ ಔಷಧಿಯನ್ನು ಪಡೆದುಕೊಂಡಾ ರೋಗಮುಕ್ತವಾಗಬಹುದು, ಅದ್ದರಿಂದ ಯಾರೂ ಸಹ ಭಯ ಪಡೆದೆ ತಕ್ಷಣ ಲಕ್ಷಣಗಳು ಕಂಡುಬಂದಾಗ ಹತ್ತಿರದ ಅಸ್ಪತ್ರೆಗೆ ಬೇಟಿ ನೀಡಿ ಪರೀಕ್ಷೆ ಮಾಡಿಸಿಕೊಳ್ಳುವುದು ಅತಿ ಅಗತ್ಯವಾಗಿದೆ, ಈ ರೋಗವನ್ನು ಪೂರ್ಣ ಪ್ರಮಾಣದಿಂದ ದೇಶದಿಂದಲೇ ಹೊಡೆದೊಡಿಸುವಂತಹ ಕಾರ್ಯ ಮಾಡಲಾಗುತ್ತಿದ್ದು ಪ್ರತಿಯೊಬ್ಬರೂ ಕೈಜೋಡಿಸಿ ಎಂದರು.
ಚಿಕಿತ್ಸೆಯ ಸಂದರ್ಭದಲ್ಲಿ ಪ್ರತಿ ರೋಗಿಗಳಿಗೆ 500 ರೂಪಾಯಿ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಡಿ.ವೈ.ಎಫ್.ಐ. ತಾಲೂಕು ಕಾರ್ಯದರ್ಶಿ ಸ್ವಾಮಿ.ಹೆಚ್. ಉದ್ಯೋಗ ಖಾತ್ರಿ ಕಾರ್ಮಿಕರು ಪರೀಕ್ಷೆ ಮಾಡಿಸಿಕೊಂಡು ತಮ್ಮ ಅನುಭವ ಹಂಚಿಕೊಂಡರು, ಅದರಲ್ಲಿ ಪ್ರಮುಖವಾಗಿ ಅರ್ಪಿತ, ಹೊನ್ನೂರಮ್ಮ, ರಾಜಮ್ಮ, ಭುವನಮ್ಮ, ಅಂಬಮ್ಮ, ಸಣ್ಣ ದುರುಗಮ್ಮ, ಗಂಗಾರಾಮಪ್ಪ, ಭಾಷಾ, ದುರುಗಣ್ಣ, ವೆಬಕುಮಾರಿ ಹಸೇನ್ ಬಿ. ಇತರರು ಉಪಸ್ಥಿತರಿದ್ದರು.