ನವದೆಹಲಿ,ಮಾ.೩೧-ಕೋವಿಡ್ ಸಾಂಕ್ರಾಮಿಕ ರೋಗದಿಂದ ಪಾಠ ಕಲಿತಿರುವ ಕೇಂದ್ರ ಸರ್ಕಾರ , ಕ್ಷಯ ರೋಗ- ಟಿಬಿ ರೋಗ ಪ್ರಕರಣಗಳನ್ನು ದಾಖಲಿಸಲು ಮತ್ತು ಅದರ ನಿಯಂತ್ರಣಕ್ಕೆ ತನ್ನದೇ ಆದ ವ್ಯವಸ್ಥೆ ಅನುಸರಿಸಲು ನಿರ್ಧರಿಸಿದೆ..
ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದ ಪ್ರಕಣಗಳಿಗಿಂತ ಹೆಚ್ಚಿನ ಸಾವಿನ ಸಂಖ್ಯೆ ವರದಿ ಮಾಡಿದೆ. ಅದರೆ ವಾಸ್ತವವಾಗಿ ಸಂಖ್ಯೆ ಕಡಿಮೆ ಇದೆ. ಹೀಗಿದ್ದರೂ ಎಚ್ಚರಿಕೆ ವಹಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ವಿಶ್ವ ಆರೋಗ್ಯ ಸಂಸ್ಥೆ ಅಂದಾಜುಗಳು ಮಾಡೆಲಿಂಗ್ ಅಧ್ಯಯನ ಆಧರಿಸಿವೆ ಆದರೆ ಟಿಬಿ ವರದಿ ನಿಕ್ಷಯ್ ಪೋರ್ಟಲ್‌ನಲ್ಲಿ ದಾಖಲಾದ ನಿಜವಾದ ಸಂಖ್ಯೆ ಆಧರಿಸಿದೆ ಮತ್ತು ಆದ್ದರಿಂದ ಹೆಚ್ಚು ವಿಶ್ವಾಸಾರ್ಹವಾಗಿದೆ” ಹೀಗಾಗಿ ವಿಶ್ವ ಅರೋಗ್ಯ ಸಂಸ್ಥೆಯ ಮಾಹಿತಿಯನ್ನು ಪಾಲಿಸುತ್ತಿಲ್ಲ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.
೨೦೨೧ ರಲ್ಲಿ ಭಾರತದಲ್ಲಿ ೨೯.೫ ಲಕ್ಷ ಜನರು ಟಿಬಿ ರೋಗನಿರ್ಣಯ ಮಾಡಿದ್ದಾರೆ ಮತ್ತು ೪.೯ ಲಕ್ಷ ಜನರು ಈ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದೆ.
ಕೇಂದ್ರ ಸರ್ಕಾರ ಕಲೆ ಹಾಕಿರುವ ೨೦೨೨ ರ ಅಂಕಿ ಅಂಶಗಳಲ್ಲಿ ೨೭.೭ ಲಕ್ಷ ರೋಗನಿರ್ಣಯ ಮತ್ತು ೩.೨ ಲಕ್ಷ ಸಾವನ್ನಪ್ಪಿದೆ ಎಂದು ತೋರಿಸುತ್ತದೆ. ಇದು ವಿಶ್ವ ಅರೋಗ್ಯ ಸಂಸ್ಥೆ ಅಂಕಿಅಂಶಕ್ಕಿಂತ ಕಡಿಮೆಯಾಗಿದೆ ಮತ್ತು ರೋಗದ ಅಧಿಸೂಚನೆಯಲ್ಲಿ ಗಮನಾರ್ಹ ಸುಧಾರಣೆಯ ಹೊರತಾಗಿಯೂ,” ಅವರು ಹೇಳಿದ್ದಾರೆ.
ದೇಶವನ್ನು ಕ್ಷಯ ಮುಕ್ತ ಭಾರತ ಮಾಡುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳು ಮುಂದುವರಿದಿವೆ. ಈ ನಿಟ್ಟಿನಲ್ಲಿ ದೇಶಾದ್ಯಂತ ಆರೋಗ್ಯ ಇಲಾಖೆಯ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.