ಕ್ಷಯರೋಗ ಮುಕ್ತ ಭಾರತಕ್ಕೆ ಡಿಹೆಚ್‌ಓ

ಮಾನ್ವಿ.ಮಾ.೨೫- ೨೦೨೫ರ ಒಳಗೆ ಈಡೀ ದೇಶವನ್ನು ಕ್ಷಯರೋಗ ಮುಕ್ತ ಭಾರತ ದೇಶವನ್ನಾಗಿ ಮಾಡುವುದು ನಮ್ಮ ಆರೋಗ್ಯ ಇಲಾಖೆಯ ಹಾಗೂ ಸರಕಾರದ ಮುಖ್ಯ ಉದ್ದೇಶವಾಗಿದೆ ಎಂದು ತಾಲೂಕ ಸಾರ್ವಜನಿಕ ಆಸ್ಪತ್ರೆ ಮಾನವಿ ತಾಲೂಕ ವೈದ್ಯಾಧಿಕಾರಿ ಡಾ.ಚಂದ್ರಶೇಖರಯ್ಯ ಸ್ವಾಮಿ ಹೇಳಿದರು.
ಅವರಿಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾ ಪಂಚಾಯಿತ ಜಿಲ್ಲಾಡಳಿತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಕ್ಷಯರೋಗ ವಿಭಾಗ ಕ್ಷಯರೋಗ ಘಟಕ ಮಾನ್ವಿ ಮತ್ತು ಸಿರವಾರ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಕ್ಷಯರೋಗ ದಿನಾಚರಣೆ ಕಾರ್ಯಕ್ರಮದಲ್ಲಿ ದೀಪ ಬೆಳಗಿಸುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಂಪೂರ್ಣ ಭಾರತ ದೇಶವನ್ನು ೨೦೨೫ರ ಒಳಗೆ ಕ್ಷಯರೋಗ ಮುಕ್ತ ಭಾರತ ಮಾಡುವುದು ಇಲಾಖೆಯ ಹಾಗೂ ಸರಕಾರದ ಉದ್ದೇಶವಾಗಿದೆ ಅದಕ್ಕಾಗಿ ಕ್ಷಯರೋಗಿಗಳನ್ನು ತ್ವರಿತ ಗತಿಯಲ್ಲಿ ಪತ್ತೆ ಹಚ್ಚಿ ಬೇಗನೆ ಚಿಕಿತ್ಸೆಗೆ ಒಳಪಡಿಸಿ ಅವರನ್ನು ಸಂಪೂರ್ಣವಾಗಿ ಗುಣಮುಖರನ್ನಾಗಿ ಮಾಡುವುದು ನಮ್ಮ ಇಲಾಖೆಯ ಪ್ರಮುಖ ಉದ್ದೇಶವಾಗಿದೆ ಹೀಗಾಗಿ ಸಾರ್ವಜನಿಕರ ಸಹಕಾರವು ಅಗತ್ಯವಾಗಿದೆ ಸಾರ್ವಜನಿಕರು ತಮ್ಮ ಕಾಲೋನಿಗಳಲ್ಲಿ ಅಥವಾ ಅಕ್ಕ-ಪಕ್ಕದಲ್ಲಿ ಯಾರಾದರೂ ಕ್ಷಯ ರೋಗ ವ್ಯಕ್ತಿ ಕಂಡುಬಂದಲ್ಲಿ ಅವರನ್ನು ಆಸ್ಪತ್ರೆಗೆ ಹೋಗುವಂತೆ ಮನವರಿಕೆ ಮಾಡಬೇಕು ಆ ಮೂಲಕ ತಾವೂ ಕ್ಷಯ ರೋಗ ಮುಕ್ತ ಭಾರತ ನಿರ್ಮಾಣಕ್ಕೆ ಸಹಕಾರ ನೀಡಬೇಕೆಂದು ಹೇಳಿದರು.
ನಂತರ ಆರೋಗ್ಯ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ವೈಧ್ಯಾಧಿಕಾರಿಗಳಾದ ಕುಮಾರಿ ಡಾಕ್ಟರ ಭಾರ್ಗವಿ ಡಾಕ್ಟರ ರಾಜೇಂದ್ರ ಡಾಕ್ಟರ ಜಮೀರ್ ಪಾಷ್ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಬಾಬು ಚಿನ್ನ, ಶ್ರೀದೇವಿ, ಪ್ರಯೋಗಶಾಲಾ ತಂತ್ರಜ್ಞಾರಾದ ಮನ್ವರ ಹಲಿ, ಕಿರಿಯ ಆರೋಗ್ಯ ಸಹಾಯಕ ಪ್ರದೀಪ್, ಹಾಗೂ ಇತರ ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರಿಗೆ ಸನ್ಮಾನ ಮಾಡಲಾಯಿತು.
ಇದೇ ವೇಳೆ ತಾಲೂಕ ಕ್ಷಯರೋಗ ಮೇಲ್ವೀಚಾರಕ ಪ್ರೇಮ್ ಪ್ರಸಾದ್ ಹಾಗೂ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ಮಾತನಾಡಿದರು.
ಈ ಸಂದರ್ಭದಲ್ಲಿ ಕ್ಷಯರೋಗ ಘಟಕದ ಮೇಲ್ವಿಚಾರಕರಾದ ಶಿವರಾಜ, ರಾಮಣ್ಣ, ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು