ಕ್ಷಯರೋಗ ಬಗ್ಗೆ ಎಚ್ಚರ ಇರಲಿ

(ಸಂಜೆವಾಣಿ ವಾರ್ತೆ)
ಹುಮನಾಬಾದ್:ಜು.22: ಕ್ಷಯರೋಗದ ಬಗ್ಗೆ ಭಯಪಡದೇ ಎಚ್ಚರಿಕೆಯಿಂದ ಇರಬೇಕು. ಈ ರೋಗದ ಲಕ್ಷಣ ಇರುವವರು ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆದರೆ ಸಂಪೂರ್ಣ ಗುಣವಾಗಬಹುದು ಎಂದರು. ಸಾರ್ವಜನಿಕ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ. ಬಸವಂತರಾಯ ಗುಮ್ಮೇದ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಹುಮನಾಬಾದ್ ಸಾರ್ವಜನಿಕ ಆಸ್ಪತ್ರೆ ವತಿಯಿಂದ ಪಟ್ಟಣದಲ್ಲಿ ಆಯೋಜಿಸಿದ್ದ ಕ್ಷಯರೋಗ ಪತ್ತೆ ಅಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ
ಉಚಿತ. ಕಫ ಪರೀಕ್ಷೆ ಚಿಕಿತ್ಸೆ ದೊರೆಯುತ್ತದೆ ಎಂದರು.
ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ನಾಗನಾಥ ಹುಲಸೂರೆ ಮಾತನಾಡಿ, ಜಿಲ್ಲೆಯಲ್ಲಿ ಆಗಸ್ಟ್ 2ರ ವರೆಗೆ ಕ್ಷಯರೋಗ ಪತ್ತೆ ಅಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸತತವಾಗಿ 2 ವಾರ ಕೆಮ್ಮು, ಜ್ವರ,
ಹಸಿವಾಗದಿರುವುದು ಸೇರಿದಂತೆ ಇತರ ಲಕ್ಷಣಗಳಿದ್ದರೆ ತಕ್ಷಣ ಕಫ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಭೀಮಾಶಂಕರ ಜಮಾದಾರ,ಡಾ.ಅಬ್ದುಲ್ ಸುಭಾನ, ಗೀತಾ ರೆಡ್ಡಿ, ಶಿವಕುಮಾರ ಕಿವಡೆ, ಶರಣಬಸವ ಸೇರಿದಂತೆ ಇತರರು ಇದ್ದರು.