ಕ್ಷಯರೋಗ ಪ್ರಮಾಣ ಕಡಿಮೆ ಮಾಡುವಲ್ಲಿ ಆರೋಗ್ಯ ಇಲಾಖೆಯ ಪಾತ್ರ ಬಹುಮುಖ್ಯ:ಡಾ.ಶಂಕ್ರೆಪ್ಪಾ ಮೈಲಾರಿ

ಕಲಬುರಗಿ.ಮಾ.30:ಜಿಲ್ಲೆಯಲ್ಲಿ ಕ್ಷಯರೋಗದ ಪ್ರಮಾಣ ಕಡಿಮೆ ಮಾಡುವಲ್ಲಿ ಆರೋಗ್ಯ ಇಲಾಖೆಯ ಪಾತ್ರ ಬಹುಮುಖ್ಯವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ವಿಭಾಗೀಯ ಸಹ ನಿರ್ದೇಶಕರಾದ ಡಾ.ಶಂಕ್ರೆಪ್ಪಾ ಮೈಲಾರಿ ಅವರು ಹೇಳಿದರು.
ಗುರುವಾರದಂದು ಹಳೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾ ಆಡಳಿತ ಹಾಗೂ ಜಿಲ್ಲಾ ಪಂಚಾಯತ ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಘಟಕ ಕಲಬುರಗಿ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಕ್ಷಯರೋಗ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕ್ಷಯರೋಗ ಚಿಕಿತ್ಸೆ, ಆರಂಭಿಕ ಟಿಬಿ ಪತ್ತೆ ಟಿಬಿ ಚಿಕಿತ್ಸೆ ನೀಡಿದರೆ ಬಹುಬೇಗ ಕ್ಷಯರೋಗ ಗುಣಮುಖರಾಗಲು ಸಾಧ್ಯವಾಗುತ್ತದೆ. ಇದರಿಂದ ಕ್ಷಯರೋಗ ಮುಕ್ತ ಭಾರತ ಮಾಡಲು ಸಾಧ್ಯ ಎಂದು ಹೇಳಿದರು.
ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜನರಿಗೆ ರೋಗದ ಲಕ್ಷಣಗಳ ಬಗ್ಗೆ ಮಾಹಿತಿ ನೀಡುವುದು ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಮೇಲ್ವಿಚಾರಣೆ ಮಾಡುವುದರಿಂದ ರೋಗಿಗಳಿಗೆ ಉತ್ತಮ ಸೇವೆ ಸಿಗುವಂತೆ ಮಾಡಿ ಪ್ರಶಂಸೆಗೆ ಒಳಗಾಗಬೇಕು. ನಿಸ್ವಾರ್ಥದಿಂದ ಪ್ರಮಾಣಿಕವಾಗಿ ದುಡಿದಾಗ ಮಾತ್ರ ಪ್ರತಿಫಲ ಸಿಗುತ್ತದೆ ಎಂದರು ತಿಳಿಸಿದರು.
ಕ್ಷಯರೋಗ ಪ್ರಗತಿ ಸಾಧನೆಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕಿನಿಂದ ಉತ್ತಮ ತಾಲ್ಲೂಕು ಆರೋಗ್ಯ ಕೇಂದ್ರ ಆರೋಗ್ಯ ಅಧಿಕಾರಿಗಳು ಹಾಗೆ ವೈದ್ಯಾಧಿಕಾರಿಗಳು ಲ್ಯಾಬ್ ಟೆಕ್ನಿಶಿಯನ್ ಉತ್ತಮ ಎಸ್‍ಟಿಎಸ್, ಎಸ್‍ಟಿಎಲೆಸ್, ಟಿಬಿ. ಹೆಚ್.ಐವಿಗಳು, ಆಶಾ ಕಾರ್ಯಕರ್ತೆಯರಿಗೆ ನಿಕ್ಷಯ ಮಿತ್ರಕ್ಕೆ ಅತಿ ಹೆಚ್ಚು ಕ್ಷಯರೋಗಗಳನ್ನು ದತ್ತು ತೆಗೆದುಕೊಂಡು ಪೌಷ್ಟಿಕ ಆಹಾರದ ಕಿಟ್ ಪೌಡರ್‍ನಿಂದ ಸಂಘ ಸಂಸ್ಥೆಗಳು ಮಲ್ಟಿಸ್ಟೇಷಲಿಟ್ ಆಸ್ಪತ್ರೆ ಹೀಗೆ ಹಲವಾರು ಅತ್ಯುತ್ತಮ ಸೇವೆಗೈದವರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ಪತ್ರ, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು.
ಜಾಥಾಕ್ಕೆ ಚಾಲನೆ: ಇದಕ್ಕೂ ಮುನ್ನ ನಗರದ ಜಿಲ್ಲಾ ಸರಕಾರಿ ಆಸ್ಪತ್ರೆ ಜಿಮ್ಸ್ ಆವರಣದಲ್ಲಿ ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಜಾಥಾಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ವಿಭಾಗೀಯ ಸಹ ನಿರ್ದೇಶಕರಾದ ಡಾ.ಶಂಕ್ರೆಪ್ಪಾ ಮೈಲಾರಿ ಅವರು ಚಾಲನೆ ನೀಡಿದರು.
ಜಿಲ್ಲಾ ಸರಕಾರಿ ಆಸ್ಪತ್ರೆ ಜಿಮ್ಸ್ ಆವರಣದಿಂದ ಆರಂಭಗೊಂಡ ಈ ಜಾಥಾವು ಜಗತ್ ಸರ್ಕಲ್ ಮಾರ್ಗವಾಗಿ ಹಳೆ ಜಿಲ್ಲಾ ಪಂಚಾಯತ್ ಸಭಾಂಗಣಕ್ಕೆ ಬಂದು ಕೊನೆಗೊಂಡಿತು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಜಶೇಖರ ಮಾಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ವಿಭಾಗ ವಿಭಾಗೀಯ ಉಪ ನಿರ್ದೇಶಕ ಶರಣಬಸಪ್ಪಾ ಗಣಜಲ್‍ಖೇಡ, ವಿಶ್ವ ಆರೋಗ್ಯ ಸಂಸ್ಥೆ ಸಲಹೆಗಾರ ಡಾ.ಸಿದ್ದಾರ್ಥ ಸೇಲ್ವಂ, ಜಿಲ್ಲಾ ಕ್ಷಯರೋಗ್ಯ ನಿರ್ಮೂಲನಾ ಅಧಿಕಾರಿ ಡಾ.ಚಂದ್ರಕಾಂತ ನರಬೋಳಿ, ಆರ್.ಸಿ.ಎಚ್. ಅಧಿಕಾರಿ ಪ್ರಭುಲಿಂಗ, ಡಾ.ರಾಜಕುಮಾರ ಡಿ.ಎಲ್.ಓ, ಡಾ.ವಿವೇಕಾನಂದ, ಜಿಲ್ಲಾ ಆಸ್ಪತ್ರೆ ಜಿಲ್ಲಾ ಶಸ್ತ್ರÀಜ್ಞರು ಹಾಗೂ ಅಧೀಕ್ಷಕರಾದ ಅಂಬಾರಾಯ ರುದ್ರವಾಡಿ, ಮಂಜುನಾಥ ಕಂಬಾಳಿಮಠ, ಅಬ್ದುಲ್ ಜಬ್ಬಾರ್ ಅವರು ಉಪಸ್ಥಿತರಿದ್ದರು.