ಕ್ಷಯರೋಗ ಪತ್ತೆ ಆಂದೋಲನಕ್ಕೆ ಚಾಲನೆ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು.19: ನಗರದ ತಾಲೂಕು ಆರೋಗ್ಯ ಕೇಂದ್ರ ಕಛೇರಿಯ ಆವರಣದಲ್ಲಿ ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ  ಕೇಂದ್ರದಲ್ಲಿ ಎಸಿಎಫ್ ಕ್ಷಯರೋಗ ಪತ್ತೆ ಆಂದೋಲನ ಕಾರ್ಯಕ್ರಮಕ್ಕೆ ತಾಲೂಕು ಆರೋಗ್ಯ ಅಧಿಕಾರಿ ಡಾ.ಈರಣ್ಣ ಚಾಲನೆ ನೀಡಿದರು.
ನಂತರ ಮಾತನಾಡಿ ಕ್ಷಯರೋಗವು ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ಸಾಯಂಕಾಲ ಜ್ವರ ಬರುವುದು, ತೂಕ ಕಡಿಮೆಯಾಗುವುದು, ಹಸಿವಾಗದಿರುವುದು ಎದೆನೋವು ಬರೋದು, ಕೆಮ್ಮಿದಾಗ ಕಫದಲ್ಲಿ ರಕ್ತ ಬರುವುದು, ರಾತ್ರಿ ಅತಿಬೇವರು ಬರುವಂತ ಲಕ್ಷಣಗಳು ಕಂಡು ಬಂದಲ್ಲಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ  ಕಫ ಪರೀಕ್ಷೆ ಮಾಡಿಸಿ ನಂತರ ಎಕ್ಸರೇ ಮೂಲಕ ಪತ್ತೆ ಹಚ್ಚಲಾಗುತ್ತದೆ ಸಾರ್ವಜನಿಕರು ಸಹಕರಿಸಬೇಕೆಂದು ತಿಳಿಸಿದರು.
 ಜಿಲ್ಲಾ ಕ್ಷಯರೋಗ ನಿರ್ಮೂಲನ ಹಿರಿಯ ಆರೋಗ್ಯ ನಿರೀಕ್ಷಣ ಅಧಿಕಾರಿ ಪಂಪಾಪತಿ, ತಾಲೂಕು ಹಿರಿಯ ಚಿಕಿತ್ಸಾ ಮೇಲ್ವಿಚಾರಕ ವೀರಣ್ಣ, ಲ್ಯಾಬ್ ಮೇಲ್ವಿಚಾರಕ ಅಂದಾನಪ್ಪ ಸಿಬ್ಬಂದಿಯಾದ ಆನಂದ ಅಬ್ಬಿಗೇರಿ, ಪ್ರಹ್ಲಾದ್, ನಿಂಗರಾಜ್, ರಾಚೋಟಿ ಅಯ್ಯಾ, ರಾಘವೇಂದ್ರ, ಶ್ರೀನಿವಾಸ, ಪ್ರಹ್ಲಾದ್, ಪವನ್, ಹುಲುಗಪ್ಪ ಇದ್ದರು.

Attachments area