ಕ್ಷಯರೋಗ ನಿರ್ಮೂಲನೆ ಜಾಗೃತಿ ಅಗತ್ಯ-ಮಧುರಾಜ

ದೇವದುರ್ಗ.ಮಾ.೨೫-ಕ್ಷಯರೋಗ ನಿರ್ಮೂಲನೆ ಜಾಗೃತಿ ಬಹಳ ಅಗತ್ಯವಿದೆ ಎಂದು ತಹಶೀಲ್ದಾರ ಮಧುರಾಜ ಯಾಳಗಿ ಹೇಳಿದರು.
ಪಟ್ಟಣದ ಜಹಿರುದ್ಧೀನ್ ವೃತ್ತದಲ್ಲಿ ಟಿ.ಬಿ. ಸೋಲಿಸಿ ಕರ್ನಾಟಕ ಗೆಲ್ಲಿಸಿ ಅಭಿಯಾನ ವಿಶ್ವ ಕ್ಷಯರೋಗ ದಿನ ಅಂಗವಾಗಿ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕ್ಷಯರೋಗ ಭಯ ಪಡುವ ಅಗತ್ಯವಿಲ್ಲ, ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆದುಕೊಂಡು ಗಣಮುಖರಾಗಬೇಕು. ಆರು ತಿಂಗಳ ಕಾಲ ಮಾತ್ರೆಗಳು ನುಂಗುವ ಮೂಲಕ ಕ್ಷಯರೋಗಿಗಳು ರೋಗಮುಕ್ತರಾಗಿ ಎಲ್ಲರಂತೆ ಕಾಣಬೇಕು ಎಂದು ಹೇಳಿದರು.
ಸರಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಈಗಾಗಲೇ ಬಹುತೇಕ ರೋಗಿಗಳು ಉತ್ತಮ ಚಿಕಿತ್ಸೆಯಿಂದ ಗುಣಮುಖರಾಗಿದ್ದಾರೆ ಎಂದು ಹೇಳಿದರು. ಕ್ಷಯರೋಗ ಕಂಡುಬಂದಲ್ಲಿ ಯಾವುದೇ ಕಾರಣಕ್ಕೆ ಭಯ ಭೀತರಾಗದೇ ವೈದ್ಯರ ಸಲಹೆ ಚಿಕಿತ್ಸೆ ಪಡೆದುಕೊಳ್ಳಬೇಕು. ಆಶಾ ಕಾರ್‍ಯಕರ್ತೆಯರು ಹೆಚ್ಚಿನ ಆಸಕ್ತಿ ವಹಿಸುವ ಮೂಲಕ ಕ್ಷಯರೋಗಿಗಳಲ್ಲಿ ಆತ್ಮಸ್ಥೈಯ ಹೆಚ್ಚಿಸಿದ್ದಾರೆ ಎಂದರು. ವಿಶ್ವ ಕ್ಷಯರೋಗ ದಿನಾಚರಣೆ ಹಿನ್ನೆಲೆ ಜಹಿರುದ್ಧೀನ್ ವೃತ್ತದಿಂದ ಕೆಇಬಿ, ಶಾಂತಿನಗರ, ಮಿನಿವಿಧಾನಸೌಧ, ಸಾರ್ವಜನಿಕ ಕ್ಲಬ್ ಆವರಣದ ಮುಖಾಂತರ ಸರಕಾರಿ ಆಸ್ಪತ್ರೆವರೆಗೆ ಜಾಗೃತಿ ಅಭಿಯಾನ ಜಾಥಾ ನಡೆಸಲಾಯಿತು.
ಇದೇ ಸಂದರ್ಭದಲ್ಲಿ ತಾಲೂಕ ಆರೋಗ್ಯಧಿಕಾರಿ ಡಾ.ಬನದೇಶ್ವರ, ಡಾ. ಹುಲಿಮನಿ, ಡಾ. ನಾಗೇಶ ಶಾವಿ, ಕ್ಷಯರೋಗ ಮೇಲ್ವಿಚಾರಕ ರವಿಶುಕ್ಲ, ಶಿವಪ್ಪ, ಬಸವರಾಜ ಬ್ಯಾಗವಾಟ, ಚನ್ನಬಸವ ಸ್ವಾಮಿ, ನಾಗರಾಜ ವರ್ಮ, ಓಂಕಾರ, ಭೀಮಶಪ್ಪ, ಮಹೇಶ ಪ್ರಭು, ವೀರೇಶ, ರಾಘವೇಂದ್ರ, ರೇಖಾ, ನಿರ್ಮಲ, ನೇತ್ರಾವತಿ ಹಾಗೂ ಆರೋಗ್ಯ ಮತ್ತು ಆಶಾ ಕಾರ್‍ಯಕರ್ತೆಯರು ಇದ್ದರು.