ಬೀದರ ಮಾ.25: ನಮ್ಮ ದೇಶದ ಪ್ರಧಾನಿಯವರು 2025 ರೊಳಗೆ ಕ್ಷಯರೋಗ ಮುಕ್ತ ಭಾರತವನ್ನಾಗಿ ಮಾಡುವ ಗುರಿ ಹೊಂದಿದ್ದು, ಆರೋಗ್ಯ ಇಲಾಖೆಯು ಈ ನಿಟ್ಟಿನಲ್ಲಿ ಉತ್ತಮ ಸೇವೆ ಮಾಡುತ್ತಿದ್ದು ಇದಕ್ಕೆ ವಿವಿಧ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.
ಅವರು ಶುಕ್ರವಾರ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಛೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಬೀದರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಡಿಯಲ್ಲಿ ಆಯೋಜಿಸಿದ ವಿಶ್ವ ಕ್ಷಯರೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ 2022ನೇ ಸಾಲಿನಲ್ಲಿ 3050 ಕ್ಷಯರೋಗದ ಕೇಸುಗಳು ದಾಖಲಾಗಿದ್ದು ಇದರಲ್ಲಿ 2818 ಕೇಸುಗಳು ನಿವಾರಿಸುವ ಮೂಲಕ ಜಿಲ್ಲೆಯೂ ಶೇ. 92 ಪ್ರತಿಶತ ಉತ್ತಮ ಸೇವೆ ಸಲ್ಲಿಸಿದೆ. ಕರ್ನಾಟಕ ಎಲ್ಲಾ ಜಿಲ್ಲೆಯ ಆರೋಗ್ಯ ಇಲಾಖೆಗಳು ಸಹ ಗಣನೀಯ ಸೇವೆ ಸಲ್ಲಿಸುತ್ತಿವೆ ಇದಕ್ಕೆ ಪೂರಕವೆಂಬಂತೆÉ ರಾಷ್ಟ್ರೀಯ ಮಟ್ಟದಲ್ಲಿ ಕ್ಷಯರೋಗ ನಿರ್ಮೂಲನೆಯಲ್ಲಿ ಕರ್ನಾಟಕಕ್ಕೆ ದ್ವಿತೀಯ ಸ್ಥಾನ ದೊರೆತ್ತಿದೆ ಎಂದು ಹೇಳಿದರು. ಇಲ್ಲಿನ ಸಮಾಜ ಸೇವಕರು ಕ್ಷಯ ರೋಗಿಗಳಿಗೆ ದತ್ತು ತೆಗೆದುಕೊಳ್ಳುವ ಮೂಲಕ ಅವರ ವೈದ್ಯಕೀಯ ಹಾಗೂ ವೈದ್ಯಕೇತರ ಭತ್ಯೆಯನ್ನು ಭರಿಸಿ ಪರೋಕ್ಷವಾಗಿ ಕ್ಷಯರೋಗ ನಿರ್ಮೂಲನೆಗೆ ಸಹಕಾರ ನೀಡುತ್ತಿದ್ದಾರೆ. ಮುಂದೆಯು ಹೀಗೆಯೆ ಸಹಕಾರ ನೀಡಿದಲ್ಲಿ ಜಿಲ್ಲೆಯಲ್ಲಿ ಕ್ಷಯರೋಗ ನಿರ್ಮೂಲನೆ ಮಾಡಬಹುದು. ಈಗಾಗಲೇ ದಾನಿಗಳಿಂದ 40 ಲಕ್ಷ ರೂಪಾಯಿ ಕ್ಷಯ ರೋಗಿಗಳ ಖಾತೆಗೆ ಜಮೆಯಾಗಿವೆ ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ರತಿಕಾಂತ ಸ್ವಾಮಿ ಮಾತನಾಡಿ, ಜಿಲ್ಲೆಯ 14 ಗ್ರಾಮ ಪಂಚಾಯತಗಳನ್ನು ಗುರುತಿಸಲಾಗಿದ್ದು ಇವುಗಳನ್ನು ಕ್ಷಯರೋಗ ಮುಕ್ತ ಪಂಚಾಯತಗಳನ್ನು ಮಾಡುವ ಗುರಿ ಇದೆ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಜಿಲ್ಲೆಯನ್ನು ಕ್ಷಯರೋಗ ಮುಕ್ತ ಮಾಡಲಾಗುವುದು ಎಂದು ಹೇಳಿದರು. ನಮಗೆ ದೊರೆತ ಪ್ರಶಸ್ತಿಗಳು ಇನ್ನು ಹೆಚ್ಚಿನ ಜವಾಬ್ದಾರಿ ಹೊರೆÀಸುತ್ತವೆ. ಮುಂದಿನ ದಿನಗಳಲ್ಲಿ ಎಲ್ಲರು ಒಗ್ಗಟ್ಟಾಗಿ ದುಡಿಯಬೇಕು ಹಾಗೂ ರೋಗಿಗಳು ಸಹ ರೋಗ ಅಂಟಿದ್ದಾಗ ಭಯಪಡದೆ ಚಿಕಿತ್ಸೆ ಪಡೆದು ಗುಣಮುಖರಾಗಬೇಕೆಂದು ಹೇಳಿದರು.
ಗುರುಪಾದಪ್ಪ ನಾಗಪಾರಪಳ್ಳಿ ಫೌಂಡೇಶನ್ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಮಾತನಾಡಿ, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ನಮ್ಮೆಲರ ಬಾಳಲ್ಲಿ ದೇವರು ಇದ್ದಂತೆ ಅವರು ಕಳೆದ ಕೋವಿಂಡ ಸಂಧರ್ಭದಲ್ಲಿ ತಮ್ಮ ಜೀವದ ಹಂಗನ್ನು ತೊರೆದು ನಮ್ಮ ಜೀವ ಉಳಿಸಿದ್ದಾರೆ ಅದೆ ಮಾದರಿಯಾದ ಕ್ಷಯ ರೋಗದಿಂದಲೂ ಸಹ ಅವರು ನಮ್ಮನ್ನು ಕಾಪಾಡುವ ಭರವಸೆ ಇದೆ ಎಂದರು.
ದೇಶದಲ್ಲಿ ಪ್ರತಿ ಒಂದೂವರೆ ನಿಮಿಷಕ್ಕೆ ಒಬ್ಬ ಕ್ಷಯ ರೋಗಿ ಸಾವನ್ನಪ್ಪುತ್ತಿದ್ದಾನೆ. ಆರೋಗ್ಯ ಇಲಾಖೆ ಇದರ ನಿಯಂತ್ರಣಕ್ಕೆ ಪ್ರಯತ್ನ ಮಾಡುತ್ತಿದ್ದು ನಾವು ಸಹ ಆರೋಗ್ಯ ಇಲಾಖೆಗೆ ಸಹಕಾರ ನೀಡಿದಲ್ಲಿ ಈ ರೋಗಕ್ಕೆ ಕಡಿವಾಣ ಹಾಕಲು ಸಾಧ್ಯ ಇದೆ ಎಂದರು.
ಬ್ರಿಮ್ಸ್ ನೂಡಲ್ ಅಧಿಕಾರಿ ಡಾ. ಮಹೇಶ ತೊಂಡಾರೆ ಕ್ಷಯರೋಗ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಕ್ಷಯರೋಗದ ರೋಗಿಗಳಿಗೆ ದತ್ತು ಪಡೆದ ಧಾನಿಗಳಾದ ನಾಗಪಾರಪಳ್ಳಿ ಫೌಂಡೇಶನ್ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ಗ್ರಾಮ ಪಂಚಾಯತ ಸದಸ್ಯ ದೇವೆಂದ್ರ ಹುಲಸೂರ, ಸಮಾಜ ಸೇವಕರಾದ ಶಿವಯ್ಯ ಸ್ವಾಮಿ, ಮೋಹನ ಗಾದ ಹಾಗೂ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನೆ ಕಾರ್ಯಕ್ರಮದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮತ್ತು ಇತರರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮ ಚಾಲನೆಗೂ ಮುನ್ನ ಕ್ಷಯರೋಗ ನಿರ್ಮೂಲನೆ ಕುರಿತು ಹಲವಾರು ಘೋಷವಾಕ್ಯಗಳೊಂದಿಗೆ ಜನರಲ್ಲಿ ಜಾಗೃತಿ ಮೂಢಿಸುತ್ತಾ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ವೈದ್ಯರು ಮತ್ತು ಸಿಬ್ಬಂದಿಗಳನ್ನೊಳಗೊಂಡ ಈ ಜಾಥವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯಿಂದ ಆರಂಭವಾಗಿ ನಗರದ ವಿವಿಧ ಬೀದಿಗಳಲ್ಲಿ ಸಂಚರಿಸಿ ಮತ್ತೆ ಆರೋಗ್ಯ ಇಲಾಖೆ ಕಚೇರಿಗೆ ಬಂದು ತಲುಪಿತು.
ಈ ಸಂದರ್ಭದಲ್ಲಿ ಬೀದರ ಬ್ರಿಮ್ಸ್ ನಿರ್ದೇಶಕ ಡಾ. ಶಿವಕುಮಾರ ಶೆಟ್ಟಕಾರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಮಹೇಶ ಬಿರಾದಾರ, ಸ್ವಾಶಕೋಶ ಶಾಸ್ತ್ರಜ್ಞ ಡಾ. ಯೊಗೇಶ ಕಾಮಶೆಟ್ಟಿ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಶರಣಯ್ಯ ಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.