ಕ್ಷಯರೋಗ ನಿರ್ಮೂಲನೆಗೆ ಬೀದಿ ನಾಟಕ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.03: ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಾಹಿತಿ ಶಿಕ್ಷಣ ಸಂವಹನ ವಿಭಾಗ ಹಾಗೂ ಚಿಗುರು ಕಲಾ ತಂಡ ಇಬ್ರಾಹಿಂಪುರ ಇವರು ಸಂಯುಕ್ತವಾಗಿ   ಇಲ್ಲಿನ ದೇವಿನಗರದಲ್ಲಿ  ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಕ್ಷಯ ರೋಗ ನಿರ್ಮೂಲನೆ ಕುರಿತು. ಜಾನಪದ ಸಂಗೀತ, ಬೀದಿ ನಾಟಕದ ಪ್ರದರ್ಶನದ ಮೂಲಕ ಅರುವು ಮೂಡಿಸಿತು.
ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರು ಆಶಾ ಕಾರ್ಯಕರ್ತರು ಸ್ವಸಹಾಯ ಗುಂಪಿನವರು ವಾರ್ಡಿನ ಜನರ ಇದ್ದರು.
ಕಾರ್ಯಕ್ರಮದಲ್ಲಿ ಕಲಾವಿದರಾದ ಹುಲಗಪ್ಪ ಎಸ್, ಎಂ. ಬಿ. ಆನಂದ, ವೈ.ತಾಯಪ್ಪ, ಎಚ್.‌ಜಿ. ಸುಂಕಪ್ಪ, ಧನಂಜಯ್, ದತ್ತಗಿರಿ  ಮುಂತಾದವರು ಪಾಲ್ಗೊಂಡಿದ್ದರು.