ಕ್ಷಯರೋಗ, ಕರೋನಾ ಲಸಿಕೆ ಕುರಿತು ಜಾಗೃತಿ ಕಾರ್ಯಕ್ರಮ

ಗಂಗಾವತಿ, ಏ.8: ಕ್ಷಯ ಮುಕ್ತ ಸಮಾಜ ನಿರ್ಮಾಣಕ್ಕೆ ಸಮುದಾಯದ ಸಹಭಾಗಿತ್ವ ಅವಶ್ಯ ಎಂದು ಕ್ಷಯರೋಗ ಆರೋಗ್ಯ ಪರಿವೀಕ್ಷಕ ಮಲ್ಲಿಕಾರ್ಜುನ್ ಹೇಳಿದರು.
ತಾಲೂಕಿನ ವಡ್ಡರ ಓಣಿಯ ಅಂಗನವಾಡಿ ಕೇಂದ್ರದಲ್ಲಿ ಕ್ಷಯರೋಗ ಹಾಗೂ ಕರುನಾ ಲಸಿಕೆ ಕುರಿತು ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎರಡು ವಾರ ಮೇಲ್ಪಟ್ಟು ಕೆಮ್ಮು, ಸಾಯಂಕಾಲದ ವೇಳೆ ಜ್ವರ ಬರುವುದು, ಹಸಿವಾಗದೇ ಇರುವುದು, ದೇಹದ ತೂಕ ಕಡಿಮೆ ಇರುವುದು,ಕಂಕಳು ಮತ್ತು ಕುತ್ತಿಗೆಯಲ್ಲಿ ಗಡ್ಡೆಗಳ ಆಗಿರುವುದು ಲಕ್ಷಣಗಳು ಕಂಡು ಬಂದಾಗ ಸ್ಥಳೀಯ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.
ಈ ವೇಳೆ ರಾಘವೇಂದ್ರ ಜೋಶಿ, ಆರೋಗ್ಯ ಸಹಾಯಕಿ ಹನುಮಂತಿ,ಆಶಾ ಲಕ್ಷ್ಮೀದೇವಿ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಇದ್ದರು.