ಕ್ಷಯರೋಗಿಗೆ ಪೌಷ್ಟಿಕ ಆಹಾರ ಪೌಡರ್ ವಿತರಣೆ

ಕಲಬುರಗಿ,ನ.21: ಕ್ಷಯರೋಗಿಗೆ ಪೌಷ್ಟಿಕ ಆಹಾರ ಪೌಡರ್ ವಿತರಣೆ ಹಾಗೂ ದತ್ತು ಪಡೆಯುವ ಕಾರ್ಯಕ್ರಮ ಜರುಗಿತು.
ಜೇವರ್ಗಿ ತಾಲ್ಲೂಕ ಆರೋಗ್ಯ ಇಲಾಖೆ ಕೇಂದ್ರದಲ್ಲಿಂದು , ಜಿಲ್ಲಾ ಆಡಳಿತ , ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ. ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕೇಂದ್ರ ಕಲಬುರಗಿ. ಹಾಗೂ ತಾಲ್ಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಜೇವರ್ಗಿ.ಇವರ ಸಂಯುಕ್ತಶ್ರಾಯದಲ್ಲಿ ಮೊದಲಿಗೆ ಕಾರ್ಯಕ್ರಮದಲ್ಲಿ ಸಸಿಗೆ ನೀರು ಏರೆಯುವ ಮೂಲಕ ಜಿಲ್ಲಾ ಕಾಲರ ನಿಯಂತ್ರಣ ಘಟಕ ಮತ್ತು ಉಸ್ತುವಾರಿ ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ|| ವಿವೇಕಾನಂದ ರೆಡ್ಡಿ ಚಾಲನೆ ನೀಡಿದರು. ನಂತರ ಅವರು ಮಾತನಾಡುತ್ತಾ ಕ್ಷಯರೋಗ ನಿರ್ಮೂಲನೆ ಮಾಡಲು ಸ್ವಯಂ ಪ್ರೇರಿತರಾಗಿ ಸಂಘ ಸಂಸ್ಥೆಗಳು ಟ್ರಸ್ಟ್ ಗಳು ಮುಂದೆ ಬಂದರೆ ನಿಕ್ಷಯ ಮಿತ್ರ ನೊಂದಾಯಿಸಿಕೊಂಡು ಕ್ಷಯ ಮುಕ್ತ ಮಾಡುವಲ್ಲಿ ಸಂಶಯವೆಯಿಲ್ಲ . ಅದರೆ ಈ ವಿಶೇಷ ಕಾರ್ಯಕ್ರಮದಲ್ಲಿ ಡಾ || ಸಿದ್ದು ಪಾಟೀಲ್ ಅವರು ಜೇವರ್ಗಿ ಮತ್ತು ಯಡ್ರಾಮಿ ತಾಲ್ಲೂಕು ಸೇರಿ 240 ಕ್ಷಯರೋಗಿಗೆ ದತ್ತು ಪಡೆದುಕೊಂಡಿದ್ದು ಶ್ಲಾಘನೀಯ ಅವರಿಗೆ ಜೊತೆಗೆ ಆರು ತಿಂಗಳ ಕಾಲ ಪೌಷ್ಟಿಕ ಆಹಾರ ಪೌಡರ್ ಹಾಗೆ ಅವರ ಆರೈಕೆ ಮಾಡುವುದರ ಜೊತೆಗೆ ಜವಬ್ದಾರಿ ಹೊತ್ತುಕೊಂಡು ಮತ್ತು ಕ್ಷಯರೋಗದಿಂದ ಬಳಲುತ್ತಿರುವವರಿಗೆ ಧೈರ್ಯ ತುಂಬುವ ಕೆಲಸ ಸರಿಯಾಗಿ ಚಿಕಿತ್ಸೆ ನೀಡುವುದರಿಂದ ಬಹು ಬೇಗ ಕ್ಷಯರೋಗಿ ಗುಣ ಮುಖವಾಗುದರಲ್ಲಿ ಸಂದೇಹವಿಲ್ಲ ಹಾಗೆ ಕ್ಷಯರೋಗಿಗಳು ಅರ್ಧದಲ್ಲೆ ಮಾತ್ರೆ ಸೇವನೆ ಬಿಡಬಾರದು ಸರಿಯಾಗಿ ಮನೆಯಲ್ಲಿ ಪೌಷ್ಟಿಕ ಆಹಾರ ಸೇವನೆ ಜೊತೆಗೆ ಪೌಷ್ಟಿಕ ಪೌಡರ್ ಸಹ ತೆಗೆದುಕೊಂಡು ಸಂಪೂರ್ಣವಾಗಿ ಬೇಗ ಗುಣ ಮುಖರಾಗಿ ಟಿಬಿ ಚಾಂಪಿಯನ್ ಆಗಬಹುದು ಹಾಗೆ ಅಕ್ಕ ಪಕ್ಕದ ಮನೆಯಲ್ಲಿ ಕ್ಷಯರೋಗ ಲಕ್ಷಣಗಳು ಕಂಡುಬಂದರೆ ಸಮೀಪದ ಆರೋಗ್ಯ ಕೇಂದ್ರದಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಎಂದು ಹೇಳಿದರು.
ವೇದಿಕೆ ಮೇಲೆ. ತಾಲ್ಲೂಕು ಆರೋಗ್ಯ ಅಧಿಕಾರಿ ಡಾ|| ಸಿದ್ದು ಪಾಟೀಲ್. ನಮ್ಮ ಭಾಗದ ಜನರ ಆರೋಗ್ಯ ಬಹಳ ಮುಖ್ಯ ಅದರಲ್ಲಿ ಕ್ಷಯರೋಗಿಗಳು ಯಾರು ಧೈರ್ಯಗೆಡಬರದು ನನಗೆ ಟಿಬಿ ಜಡ್ಡು ಬಂದಿದೆ ಅಂತ ಸಣ್ಣವರು ಇರಲಿ ದೊಡ್ಡವರು ಇರಲಿ ಯಾರು ಅಂಜದೆ ಟಿಬಿ ಲಕ್ಷಣಗಳು ಇದ್ದವರು ಟೆಸ್ಟ್ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.
ಅಧ್ಯಕ್ಷತೆವಹಿಸಿ ಮಾತನಾಡುತ್ತಾ ಜೇವರ್ಗಿ ವೈದ್ಯಾಧಿಕಾರಿ ಎಂ ಡಿ ಜನರಲ್ ಮೇಡಿಷನ್ ಡಾ. ಶಿವಶಂಕರ್ ಅವರು ಕ್ಷಯರೋಗದಿಂದ ಬಳಲುತ್ತಿರುವವರಿಗೆ ಇಲಾಖೆಯಿಂದ ವಿಶೇಷವಾಗಿ ಕಳಾಜಿ ವಹಿಸುವುದರ ಜೊತೆಗೆ ಪ್ರತಿ ಆರು ತಿಂಗಳ ಕಾಲ ಮಾತ್ರೆಗಳ ವ್ಯವಸ್ಥೆ ನಮ್ಮ ಇಲಾಖೆ ಸಿಬ್ಬಂದಿ ವರ್ಗದವರು ಕ್ಷಯರೋಗಿಯ ಕಾಳಜಿ ಮತ್ತು ಉಪಚಾರ ಮಾಡುತ್ತಾ ಬರುತ್ತಿದೆವೆ. ಸರಿಯಾದ ಸಮಯಕ್ಕೆ ಮಾತ್ರೆ ಸೇವಿಸುವುದರಿಂದ ಬಹು ಬೇಗ ಗುಣಮುಖವಾಗಿ ಹೊಸ ಜೀವನ ನಡೆಸಬಹುದು ಎಂದು ಹೇಳುತ್ತ ಹಾಗೆ ಕ್ಷಯರೋಗ ಪೌಷ್ಟಿಕ ಪೌಡರ್ ಸರಿಯಾಗಿ ಸೇವನೆ ಮಾಡಬೇಕು
ಕ್ಷಯರೋಗಿಗಳು ಉತ್ತಮ ಜೀವನ ನಡೆಸಬಹುದು ಎಂದು ಹೇಳಿದರು. ವೇದಿಕೆ ಮೇಲೆ ಪ್ರಮುಖರಾದ , ಎ ಆರ್ ಟಿ ಮೆಡಿಕಲ್ ಆಫೀಸರ್ ಡಾ|| ಸಂಜಯಕುಮಾರ ಅಳ್ಳೋಳಿ, ಜಿಲ್ಲಾ ಡಿ ಆರ್ ಟಿಬಿ ಸಕ್ಷಮ್ ಟಿಸ್ ಸಮಾಲೋಚಕ ಮಂಜುನಾಥ ಕಂಬಾಳಿಮಠ, ಎಸ್ ಟಿ ಎಸ್ . ಮಹಮ್ಮದ್ ಮಜ್ರುದ್ದೀನ್ , ಅನಂದ ದೊಡ್ಡಮನಿ, ಎಸ್ ಟಿ ಎಲ್ ಎಸ್ ವಿಶ್ವರಾಜ , ಸಿಸಿಟಿ ಆರೋಗ್ಯ ನೀರಿಕ್ಷಾಣಧಿಕಾರಿ ಶಿವಲಿಂಗ ಶೆಳ್ಳಗಿ. ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಆರೋಗ್ಯ ಇಲಾಖೆ ಸಿಬ್ಬಂದಿ ಆರೋಗ್ಯ ನೀರಿಕ್ಷಾಣಧಿಕಾರಿ ಯೂನಸ್ , ಅಲ್ತಫ್‌. ಅರುಣ್ ಇದ್ದರು. ಕಾರ್ಯಕ್ರಮದಲ್ಲಿ ಕ್ಷಯರೋಗಿಗಳು ಇತರರು ಭಾಗವಹಿಸಿದರು. ನಿರೂಪಣೆ ಮಂಜುನಾಥ ಕಂಬಳಿಮಠ, ಸ್ವಾಗತವನ್ನು ಮಹಮ್ಮದ್ ಮಜರುದ್ದಿನ್ , ಆನಂದ ದೊಡ್ಡಮನಿ ವಂದಿಸಿದರು.