
(ಸಂಜೆವಾಣಿ ವಾರ್ತೆ)
ಬಳ್ಳಾರಿ,ಮಾ.9: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಗರದಲ್ಲಿ ನಿನ್ನೆ ನಿಕ್ಷಯ ಮಿತ್ರದಡಿ ಕ್ಷಯರೋಗಿಗಳಿಗೆ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ಪೌಷ್ಟಿಕ ಆಹಾರ ಕಿಟ್ ವಿತರಣೆ ಮಾಡಿ, ರಾಜ್ಯಪಾಲರ ಆದೇಶದಂತೆ 10 ಜಿಲ್ಲೆಗಳನ್ನು ಗುರುತಿಸಿ, ಆಯಾ ಜಿಲ್ಲೆಗಳಲ್ಲಿ 10 ಫಲಾನುಭವಿಗಳನ್ನು ಆಯ್ದು ಪೌಷ್ಟಿಕ ಆಹಾರ ಕಿಟ್ ವಿತರಣೆ ಮಾಡಲಾಗಿದೆ ಎಂದರು.
ದಾನಿಗಳು ಸ್ವ-ಇಚ್ಛೆಯಿಂದ ಮುಂದೆ ಬಂದು ಕ್ಷಯರೋಗಿಗಳ್ನು ದತ್ತು ಪಡೆಯುವುದರ ಮೂಲಕ ಕ್ಷಯರೋಗ ಮುಕ್ತ ಮಾಡಲು ಕೈಜೋಡಿಸಬೇಕು. ಜಿಲ್ಲೆಯಲ್ಲಿ 589 ಕ್ಷಯರೋಗಿಗಳಿಗೆ ದಾನಿಗಳು ಪೌಷ್ಟಿಕ ಆಹಾರ ಕಿಟ್‍ಗಳನ್ನು ವಿತರಣೆ ಮಾಡಿದ್ದಾರೆಂದು ತಿಳಿಸಿದರು.