ಕ್ಷಯರೋಗಿಗಳಿಗೆ ಪೌಷ್ಟಿಕಆಹಾರ ವಿತರಣೆ

ಕಲಬುರಗಿ ಡಿ. 20 ಕ್ಷಯ ರೋಗಿಗಳಿಗೆ ಆರೋಗ್ಯವಂತ ಜೀವನ ನಡೆಸಲು ಪೌಷ್ಟಿಕಯುಕ್ತ ಆಹಾರ ಸೇವನೆ ಬಹಳ ಮುಖ್ಯ. ಈ ಕಾರಣಕ್ಕಾಗಿಯೇ ಜಿ99 ಹಾಗೂ ಜಿ55 ಸಂಘಟನೆಗಳಿಂದ ಪೌಷ್ಟಿಕ ಆಹಾರ ವಿತರಣೆ ಮಾಡಲು ಆರಂಭಿಸಲಾಗಿದೆ ಎಂದು ಮಹಾದಾಸೋಹಿ ಶರಣಬಸವೇಶ್ವರ ಟ್ರಸ್ಟ್ ಅಧ್ಯಕ್ಷ ಶರಣು ಪಪ್ಪಾ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರ ಮತು ಶರಣಬಸವೇಶ್ವರ ಟ್ರಸ್ಟ್, ಸಕ್ಷಮ್ ಪ್ರವಾಹ,ಟಾಟಾ ಇನ್‍ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ ಆಶ್ರಯದಲ್ಲಿ ನಗರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಿಡ್ನಿ ತೊಂದರೆಯಿಂದ ಬಳಲುತ್ತಿರುವವರಿಗಾಗಿ ಉಚಿತ ಡಯಾಲಿಸಿಸ್ ಕೇಂದ್ರ ತೆರೆಯಲು ಉದ್ದೇಶಿಸಲಾಗಿದೆ. ಬಡವರಿಗೆ ಉಚಿತವಾಗಿ ಹಾಗೂ ಎಪಿಎಲ್ ಪಡಿತರ ಚೀಟಿ ಇದ್ದವರಿಗೆ 500 ರೂ.ವೆಚ್ಚದಲ್ಲಿ ಈ ಡಯಾಲಿಸಿಸ್ ಕೇಂದ್ರ ಸೇವೆ ನೀಡಲಿದೆ. ಮೂರು ತಿಂಗಳಲ್ಲಿ ಸೆಂಟರ್ ಏಷಿಯನ್ ಮಾಲ್‍ನಲ್ಲಿ ಪ್ರಾರಂಭಿಸುತ್ತಿದ್ದೇವೆ ಎಂದರು.
ಮುಖ್ಯ ಅತಿಥಿಗಳಗಿದ್ದ ವಿಶ್ವ ಆರೋಗ್ಯ ಸಂಸ್ಥೆಯ ವಲಯ ಸಲಹೆಗಾರ ಸತೀಶ್ ಘಾಟ್ಗೆ ಮಾತನಾಡಿದರು. ಡಾ.ವಿವೇಕಾನಂದ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಉಪಾಧ್ಯಕ್ಷ ಆನಂದ ದಂಡೋತಿ, ನಿರ್ದೇಶಕ ಶಿವರಾಜ ಖುಬಾ, ಕಾರ್ಯದರ್ಶಿ ಶರಣಗೌಡ ಪಾಟೀಲ, ಖಜಾಂಚಿ ಸಿದ್ಧೇಶ್ವರ ಅನಂತಪ್ಪ, ಅಬ್ದುಲ್ ಶಫಿ ಅಹ್ಮದ್, ಡಿಪಿಎಸ್ ಸುರೇಶ ದೊಡ್ಡಮನಿ. ಡಾ.ಶರಣಬಸಪ್ಪ ಸಜ್ಜನ ಶೆಟ್ಟಿ, ಶರಣ ಸಿಂಗೆ, ಸರೋಜ ಪಗ್ಲಾಪುರ,ಮಾಧುರಿ , ರಾಜಕುಮಾರ, ಸಂತೋಷಕುಮಾರ್ . ಧರ್ಮ
ರಕ್ಷಕ್. ಜಿಲ್ಲಾ ಡಿ ಆರ್ ಟಿಬಿ ಸಮಾಲೋಚಕ ಸಕ್ಷಮ್ ಪ್ರವಾಹ ಕಾರ್ಯಕ್ರಮ
ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ ( ಟಿ,ಐ,ಎಸ್,ಎಸ್ )
ಮಂಜುನಾಥ ಕಂಬಳಿಮಠ .ಕಾರ್ಯಕ್ರಮದಲ್ಲಿ ಸರ್ವರನ್ನು ಸ್ವಾಗತಿಸಿ ನಿರೂಪಿಸಿದರು. ಬಸವರಾಜ ಅವಂಟಿ ವಂದಿಸಿದರು.