ಕ್ಷಯರೋಗಿಗಳಿಗೆ ಉಚಿತ ಆಹಾರ ಕಿಟ್ ವಿತರಣೆ

ಕಲಬುರಗಿ:ಸೆ.7: ನಗರದಲ್ಲಿ ಜಿಲ್ಲಾಧಿಕಾರಿ ಕಛೇರಿಯ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕಲಬುರಗಿ ಜಿಲ್ಲಾ ಶಾಖೆಯ ಪ್ರಾಂಗಣದಲ್ಲಿ ನಿಕ್ಷಯ ಮಿತ್ರ ಯೋಜನೆ ಅಡಿಯಲ್ಲಿ ರಾಜಪಾಲರು ರಾಜ ಭವನ ಬೆಂಗಳೂರು ಇವರು ಕಲಬುರಗಿ ಜಿಲ್ಲೆಯ ನಗರದ 5 ನೇ ತಿಂಗಳ ಆಹಾರ ಕಿಟ್ 10 ಕ್ಷಯರೋಗಿಗೆ ದತ್ತು ತೆಗೆದುಕೊಂಡ ಸಂದರ್ಭ, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಜಿಲ್ಲಾ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕೇಂದ್ರ ಕಲಬುರಗಿ .ಇವರಗಳ ಸಂಯುಕ್ತಶ್ರಾಯದಲ್ಲಿ . ಕ್ಷಯರೋಗಿಗೆ ಉಚಿತ ಆಹಾರ ಕಿಟ್ ಗಳನ್ನು ಜಿಲ್ಲಾ ಕ್ಷಯರೋಗ ನಿರ್ಮೂಲಾ ಅಧಿಕಾರಿಗಳಾದ ಡಾ|| ಚಂದ್ರಕಾಂತ ನರಬೋಳಿ , ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಅಪ್ಪಾರಾವ ಅಕ್ಕೋಣಿ, ಉಪ ಸಭಾಪತಿ ಅರುಣಕುಮಾರ ಲೋಯಾ. ಅವರು ಕ್ಷಯರೋಗಿಗೆ ಉಚಿತ ಆಹಾರ ಕಿಟ್ ಗಳನ್ನು ವಿತರಿಸಲಾಯಿತು. ಇದೆ ಸಂದರ್ಭದಲ್ಲಿ ಪ್ರಮುಖರಾದ ಗೌರವ ಕಾರ್ಯದರ್ಶಿ ರವೀಂದ್ರ ಶಾಬಾದಿ , ಜಿಲ್ಲಾ ಡಿ ಆರ್ ಟಿಬಿ ಸಕ್ಷಮ್ ಮಂಜುನಾಥ ಕಂಬಾಳಿಮಠ, ಐ ಅರ್ ಸಿ ಎಸ್ ಸಮಿತಿ ಸದಸ್ಯರು ವಿಶ್ವನಾಥ ಕೊರವಾರ. ಡಿಇಓ ಸೋನಿಯಾ. ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ಇತರರು, ಉಪಸ್ಥಿತರಿದ್ದರು.