ಸಂಜೆವಾಣಿ ವಾರ್ತೆ
ಸಂಡೂರು :ಏ:22: ಸಂಡೂರು ತಾಲೂಕಿನ ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕ್ಷಯರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವವರ ರೋಗಿಗಳ ದಾಖಲೆ ಕಾರ್ಡ್ ಗಳ ಪರಿಶೀಲನಾ ಕಾರ್ಯ ನಡೆಯಿತು, ತೋರಣಗಲ್ಲು ವ್ಯಾಪ್ತಿಯಲ್ಲಿ ಒಟ್ಟು 35 ಕ್ಷಯರೋಗಿಗಳು ಇದ್ದು ಇದರಲ್ಲಿ 25 ಶ್ವಾಸಕೋಶದ ಕ್ಷಯರೋಗಿಗಳಾಗಿದ್ದು ಉಳಿದ 10 ಜನ ಶ್ವಾಸಕೋಶೇತರಕ್ಷಯರೋಗಿಗಳಾಗಿದ್ದು, ಒಟ್ಟು 35 ಜನರು ಕ್ಷಯರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ, 35 ರೋಗಿಗಳಿಗೂ ನಿಕ್ಷಯ ಮಿತ್ರರಿಲ್ಲ, ಅವರಿಗೆ ಪೌಷ್ಟಿಕ ಆಹಾರವೂ ಇಲ್ಲ, 35 ಜನರಲ್ಲಿ 12 ಜನರ ಬ್ಯಾಂಕ್ ಖಾತೆ ಸಹಾ ಹೊಂದಾಣಿಕೆಯಾಗದೇ ಇಲಾಖೆಯ ಸಹಾಯ ಧನವೂ ಅವರಿಗೆ ಜಮೆಯಾಗಿಲ್ಲ, 12 ಜನರಿಗೆ ಬ್ಯಾಂಕ್ ಖಾತೆಯ ದಾಖಲೆಗಳನ್ನು ಸರಿ ಮಾಡಿಸಿ ಕೊಂಡು ಬರಲು ಸೂಚಿಸಲಾಗಿದೆ, ರೋಗ ಬೇಗ ಗುಣಮುಖವಾಗಲು ಎಲ್ಲಾ ಕ್ಷಯರೋಗಿಗಳಿಗೆ ಪೌಷ್ಟಿಕಾಹಾರ ದೊರೆಯಬೇಕು, ದಯವಿಟ್ಟು ಸಮುದಾಯ ಮುಂದೆ ಬಂದು ನಿಕ್ಷಯ್ ಮಿತ್ರರಾಗಿ ನೊಂದಣಿ ಮಾಡಿಕೊಂಡು ಎಲ್ಲರಿಗೂ ಪೌಷ್ಟಿಕಾಹಾರ ಒದಗಿಸಿ ಕ್ಷಯರೋಗಿಗಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕಿದೆ, ಪ್ರತಿ ಸಭೆ, ಜಾಗೃತಿ ಕಾರ್ಯಕ್ರಮಗಳಲ್ಲಿ ಸಮುದಾಯಕ್ಕೆ ಮನವಿ ಮಾಡುತ್ತಲೇ ಇದ್ದೇವೆ, ಹೃದಯವಂತ ಸಮುದಾಯ ಮುಂದೆ ಬರಬೇಕಿದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ತಿಳಿಸಿದರು,
ಈ ಸಂದರ್ಭದಲ್ಲಿ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದ ತಾಲೂಕಿನ ಮೇಲ್ವಿಚಾರಕ ಗೋಪಾಲ್, ಫಾರ್ಮಸಿ ಅಧಿಕಾರಿ ಮಂಜುನಾಥ್, ಕೆ.ಹೆಚ್.ಪಿ.ಟಿ ಸಂಯೋಜಕ ರಾಜಶೇಖರ್ ಉಪಸ್ಥಿತರಿದ್ದರು,