ಕ್ಷಯಮುಕ್ತ ಗ್ರಾಮ ನಿರ್ಮಾಣಕ್ಕೆ ಕೈ ಜೋಡಿಸಲು ವಿದ್ಯಾರ್ಥಿಗಳಿಗೆ ಅರಿವು ಮುಖ್ಯ: ಕಂಬಳಿಮಠ

ಯಡ್ರಾಮಿ ಜು : 31. ಭಾರತ ಸರ್ಕಾರದ ಆಶಯದಂತೆ 2025ರ ಹೊತ್ತಿಗೆ ಕ್ಷಯ ಮುಕ್ತ ಭಾರತ ನಿರ್ಮಾಣ ಮಾಡುವಲ್ಲಿ ಆರೋಗ್ಯ ಇಲಾಖೆ ಜೊತೆಗೆ ಪ್ರತಿ ಒಬ್ಬರು ಆರೋಗ್ಯದ ಬಗ್ಗೆ ಅರಿವು ಬಹಳ ಮುಖ್ಯವಾಗಿದೆ ನಮ್ಮೊಂದಿಗೆ ವಿದ್ಯಾರ್ಥಿಗಳು ಗ್ರಾಮದ ಜನರು ಕ್ಷಯರೋಗದ ಲಕ್ಷಣಗಳ ಬಗ್ಗೆ ಜಾಗೃತಿವಹಿಸಬೇಕಾಗಿದೆ ಅದರಂತೆ ವಿದ್ಯಾರ್ಥಿಗಳು ಅರಿವು ಮೂಡಿಸಲು ಕೈ ಜೋಡಿಸಬೇಕು ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರದ ಜಿಲ್ಲಾ ಡಿ ಅರ್ ಟಿ ಬಿ . ಟಿ ಐ ಎಸ್ ಎಸ್. ಸಮಾಲೋಚಕ ಮಂಜುನಾಥ ಕಂಬಳಿಮಠ ಹೇಳಿದರು.
ಶನಿವಾರ ಸರ್ಕಾರಿ ಪ್ರೌಢಶಾಲೆಯಲ್ಲಿ . ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕೇಂದ್ರ ಕಲಬುರಗಿ. ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಮಂದೇವಾಲ ಯಡ್ರಾಮಿ ತಾಲ್ಲೂಕ
. ಇವರ ಸಂಯುಕ್ತಾಶ್ರದಲ್ಲಿ. ಸಕ್ರಿಯ ಕ್ಷಯರೋಗ ಪತ್ತೆ ಹಚ್ಚುವಿಕೆ ಆಂದೋಲನ ಜುಲೈ 18ರಿಂದ ಅಗಸ್ಟ್ 15ರ ರವರೆಗೆ ಕಾರ್ಯಕ್ರಮದ ಅಂಗವಾಗಿ ಪ್ರೌಢಶಾಲೆ ಹಾಗೂ ಕಾಲೇಜಿನ ವಿದ್ಯಾರ್ಥಿಗಳಿಗೆ ಕ್ಷಯರೋಗದ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸುವುದು ಬಹಳ ಮುಖ್ಯ ವಿದ್ಯಾರ್ಥಿಗಳಿಗೆ .
ಕಾರ್ಯಕ್ರಮದಲ್ಲಿ.
ಅರೋಗ್ಯ ದ ಬಗ್ಗೆ ಅರಿವು ಮೂಡಿಸಬೇಕಾಗಿದೆ, ಒಬ್ಬ ವಿದ್ಯಾರ್ಥಿಗೆ ಯಶಸ್ಸಿನ ಗುರಿ ಎಷ್ಟು ಮುಖ್ಯವೊ ಅಷ್ಟೇ ಮುಖ್ಯ ನಮ್ಮ ಆರೋಗ್ಯ ರಕ್ಷಣೆ ಕೂಡ ಮುಖ್ಯ ಈ ಹಿನ್ನೆಲೆಯಲ್ಲಿ ಆರೋಗ್ಯದ ಕಡೆ ವಿದ್ಯಾರ್ಥಿಗಳು ಗಮನವಹಿಸಬೇಕು , ಕ್ಷಯರೋಗವು ಒಂದು ಸಾಂಕ್ರಾಮಿಕ ರೋಗ ಒಬ್ಬ ಸೋಂಕಿತ ವ್ಯಕ್ತಿ ಸರಿಯಾಗಿ ಮಾತ್ರೆ ತೆಗೆದುಕೊಳ್ಳದೆ ಇದ್ದರೆ ರೋಗನಿರೋಧಕ ಶಕ್ತಿ ಇಲ್ಲದ ಬೇರೆ ವ್ಯಕ್ತಿಗೆ ಹರಡುತ್ತದೆ ಅದರಿಂದ ವಿದ್ಯಾರ್ಥಿಗಳು ಸರಿಯಾದ ಮಾಹಿತಿ ಪಡೆದುಕೊಳ್ಳುಬೇಕು ಹಾಗೆ ಉತ್ತಮ ಆರೋಗ್ಯಾಕರ ಜೀವನ ನಡೆಸಲು ರೂಢಿಸಿಕೊಳ್ಳಬೇಕು ಎಂದು ಮಾಹಿತಿ ನಿಡಿದರು.

ಪ್ರಾಥಮಿಕ ಆರೋಗ್ಯ ಕೇಂದ್ರದ ಆಯುಷ್ಯ ವೈಧ್ಯಾಧಿಕಾರಿಗಳು ಮಂದೇವಾಲ ಡಾ|| ರಶ್ಮಿ ಅವರು ಮಾತನಾಡುತ್ತಾ , ವಿದ್ಯಾರ್ಥಿಗಳಿಗೆ ಕ್ಷಯರೋಗ ಲಕ್ಷಣಗಳ ಬಗ್ಗೆ ವಿವರಿಸುತ್ತ ಕ್ಷಯರೋಗಿಗಳು ಸೂಕ್ತ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರೆ, ಹಾಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ತೆಗೆದುಕೊಳ್ಳದೆ ಇದ್ದರೆ. ಒಬ್ಬ ಕ್ಷಯರೋಗಿ ಚಿಕಿತ್ಸೆ ಪಡೆಯದೇ ಇದ್ದರೆ ಒಂದು ವರ್ಷದಲ್ಲಿ ಹತ್ತು ರಿಂದ ಹದಿನೈದು ಜನರಿಗೆ ಹರಡಿಸಬಲ್ಲ, ಹಾಗೆ ಇದರ ಲಕ್ಷಣಗಳು ಎರಡು ವಾರಗಳಿಗೂ ಮೇಲ್ಪಟ್ಟು ಕೆಮ್ಮು, ಸಂಜೆ ವೇಳೆ ಜ್ವರ ಬರುವುದು, ಎದೆ ನೋವು, ತೂಕ ಕಡಿಮೆಯಾಗುವುದು, ಹಸಿವಾಗದಿರುವುದು,ಕಫದ ಜೊತೆ ರಕ್ತ ಬೀಳುವುದು. ಈ ಲಕ್ಷಣಗಳು ಕಂಡು ಬಂದಲ್ಲಿ ಸಮೀಪದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆಯ ಸಲಹೆ ಪಡೆದು. ಹಾಗೆ ಲ್ಯಾಬೋರೇಟರಿಯಲ್ಲಿ ಕಫದ ಮಾದರಿ ಪರೀಕ್ಷೆ ಕೇಂದ್ರ ಮಾಡಿಸಲು ಉಚಿತವಾಗಿದೆ ಎಂದು ತಿಳಿಸಿದರು. ಕ್ಷಯರೋಗಿ ಎಂದು ಧೃಡಪಟ್ಟಲ್ಲಿ ಅವರಿಗೆ ಪೂರ್ಣ ಪ್ರಮಾಣದ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ. ಹಾಗೆ ಕ್ಷಯರೋಗಿಗೆ ಪ್ರತಿ ತಿಂಗಳು ನಿಕ್ಷಯ ಪೆÇೀಷಣಾ ಯೋಜನೆಯಡಿ 500 ರೂ.ಗಳ ಸಹಾಯಧನ ನೆರೆ ಅವರ ಬ್ಯಾಂಕ್ ಅಕೌಂಟ್ ಗೆ ನೀಡಲಾಗುತ್ತದೆ, ಎಂದು ಹೇಳಿದರು.
ತಾಲ್ಲೂಕ ಹಿರಿಯ ಕ್ಷಯರೋಗ ಮೇಲ್ವಿಚಾರಕ ಆನಂದ ದೊಡ್ಡಮನಿ
ಪ್ರಾಥಮಿಕ ಆರೋಗ್ಯ ಕೇಂದ್ರದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ರೇಣುಕಾ ಡಿಗ್ಗಿ ವೇದಿಕೆ ಮೇಲೆ ಮಾತನಾಡಿದರು.
ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಮಲ್ಲಿಕಾರ್ಜುನ ಚನ್ನಾ ಅವರು ಅಧ್ಯಕ್ಷತೆ ವಹಿಸಿದ್ದರು.

ವೇದಿಕೆ ಮೇಲೆ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಚಂದ್ರಕಲಾ ಹಚ್ಚಾಡ , ಶಿಕ್ಷಕಾರದ ರಮೇಶ್ ಕುಂಬಾರ, ಹಂಸ ಎಂ, ಸೌಭಾಗ್ಯಲಕ್ಷ್ಮಿ , ಮಲ್ಲಪ್ಪ ಭಂಟನೂರ, ಶಿಲ್ಪ, ಉಪಸ್ಥಿತರಿದ್ದರು. ವಿಧ್ಯಾರ್ಥಿಗಳಿಗೆ ಕ್ಷಯರೋಗದ ಭಿತ್ತಿ ಪತ್ರ ಹಾಗೆ ಸ್ಲೋಗಾನ್ ಟಿಬಿ ಹಾರೇಗಾ ದೇಶ್ ಜೀತೇಗಾ, ಟಿಬಿ ಸೊಲುತ್ತೆ ದೇಶ ಗೆಲ್ಲುತ್ತೆ ಎಂಬ ಘೋಷಣೆ ಕೂಗಲಾಯಿತು.
ಶಿಕ್ಷಕರಾದ ರಮೇಶ್ ಕುಂಬಾರ ಕಾರ್ಯಕ್ರಮ ನಿರೂಪಿಸಿದರು, ಸುಜಾತಾ ಸ್ವಾಗತಿಸಿದರು, ಸೌಭಾಗ್ಯಲಕ್ಷ್ಮೀ ವಂದಿಸಿದರು.
ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು , ಶಿಕ್ಷಕರು ಕಾರ್ಯಕ್ರಮ ಯಶಸ್ವಿಗೊಳಿಸಿದ್ದರು.