ಕ್ಷಮೆಯಾಚಿಸಿದರೆ ಸದಸ್ಯರ ಅಮಾನತು ತೆರವು: ಜೋಶಿ

ನವದೆಹಲಿ, ಜು.27- ಸದನದಲ್ಲಿ ನಾಮಫಲ ಕಗಳನ್ನು ಪ್ರದರ್ಶಿಸುವುದಿಲ್ಲ ಹಾಗೂ ಕ್ಷಮೆಯಾಚಿಸಿದರೆ ಅಮಾನತುಗೊಂಡಿರುವ ಸದಸ್ಯರ ಅಮಾನತು ತೆರವುಗೊಳಿಸಬಹುದು ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.
ದೆಹಲಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಗೆ ತುತ್ತಾಗಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಚೇತರಿಸಿಕೊಂಡು ಕಚೇರಿಗೆ ಆಗಮಿಸಿದ್ದಾರೆ.
ಬೆಲೆ ಏರಿಕೆ ಕುರಿತು ಸದನದಲ್ಲಿ ಚರ್ಚೆ ನಡೆಸಲು ಸರ್ಕಾರ ಸಿದ್ಧವಿದೆ ಎಂದು ತಿಳಿಸಿದರು.
ವಿಪಕ್ಷಗಳು ಬಯಸಿದರೆ ತಕ್ಷಣವೇ ವಿಚಾರಣೆ ನಡೆಸಲು ಸಿದ್ಧವಿರುವುದಾಗಿ ಜೋಶಿ ಸ್ಪಷ್ಟಪಡಿಸಿದರು.
ಸದನದ ಒಳಗಡೆ ಬೆಲೆ ಏರಿಕೆ ಕುರಿತು ಚರ್ಚೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿ ಸತತ 50 ತಾಸುಗಳ ಕಾಲ ಪ್ರತಿಭಟನೆ ನಡೆಸಿ ಕಲಾಪಕ್ಕೆ ಅಡ್ಡಿಪಡಿಸಿದ್ದರಿಂದ 20 ಮಂದಿ ಸದಸ್ಯರನ್ನು ರಾಜ್ಯಸಭೆಯಿಂದ ಅಮಾನತು ಮಾಡಲಾಗಿದೆ.
ನಾಲ್ವರು ಸಂಸದರನ್ನು ಲೋಕಸಭೆಯಿಂದ ಅಮಾನತು ಮಾಡಲಾಗಿದೆ.
ಈ ಮಧ್ಯೆ ರಾಜ್ಯಸಭಾ ಉಪಸಭಾಪತಿ ಎಂ.ವೆಂಕಯ್ಯನಾಯ್ಡು ಪ್ರತಿಕ್ರಿಯೆ ನೀಡಿ,
ಅಮಾನತುಗೊಂಡಿರುವ ಎಲ್ಲ ಸದಸ್ಯರು ‘ತಮ್ಮ ದುರ್ನಡತೆಯ ಗಂಭೀರತೆಯನ್ನು ಅರಿತು’ ವಿಷಾದ ವ್ಯಕ್ತಪಡಿಸಿದರೆ ಮಾತ್ರ ಅಮಾನತು ಹಿಂತೆಗೆದುಕೊಳ್ಳುವಿಕೆ ಪರಿಗಣಿಸಬಹುದು ಎಂದು ತಿಳಿಸಿದ್ದಾರೆ.