
ಕಲಬುರಗಿ,ಮಾ 14: ನಗರದ ಶ್ರೀ ಸೋಮವಂಶ ಸಹಸ್ರಾರ್ಜುನ ಕ್ಷತ್ರೀಯ ಸಮಾಜ ಮಹಿಳಾ ಮಂಡಳದ ವತಿಯಿಂದ ಸೋಮವಾರ ಸಂಜೆ ಅಂತರರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸೀಮಾವತಿ ಭಟ್ ಮತ್ತು ಡಾ.ರೋಷನಿ ಅಮಿತ ಶಹಾ ಅವರು ಆಗಮಿಸಿದರು. ವೇದಿಕೆಯಲ್ಲಿ ಮಹಿಳಾಮಂಡಳದ ಅಧ್ಯಕ್ಷರಾದ ಲಲಿತಾ ಚವ್ಹಾಣ,ಉಪಾಧ್ಯಕ್ಷರಾದ ಸರಿತಾ ಮೇಂಗಜಿ,ಕಾರ್ಯರ್ಶಿ ಸುನಂದಾ ಪವಾರ,ಸಹಕಾರ್ಯದರ್ಶಿ ಸುಮಿತಾ ಚವ್ಹಾಣ,ಖಜಾಂಚಿ ವಿಜಯಲಕ್ಷ್ಮೀ ಕಮಲಾಪುರೆ,ಶೋಭಾ ರಾಮಪವಾರ ಅವರು ಉಪಸ್ಥಿತರಿದ್ದರು.ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಸಮಾಜದ ಭಾರತಿಬಾಯಿ ದೀಪಕ ಚವ್ಹಾಣ ಅವರಿಗೆ ಸನ್ಮಾನಿಸಲಾಯಿತು.ಐಶ್ವರ್ಯಾ ಮಗ್ಜಿಕೊಂಡಿ ಹಾಗೂ ಪವನ ಚವ್ಹಾಣ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಸೀಮಾವತಿ ಭಟ್ ಮತ್ತು ಡಾ.ರೋಷನಿ ಅಮಿತ ಶಹಾ ಮತ್ತು ಮಹಿಳಾ ಮಂಡಳದ ಸದಸ್ಯರಾದ ಪ್ರಭಾವತಿ ಆರಾಧಿ ಅವರು ಮಹಿಳೆಯರ ಕುರಿತಾಗಿ ಮಾತನಾಡಿದರು.ಸುನಂದಾ ಪವಾರ ಅವರು ಪ್ರಾರ್ಥನಾಗೀತೆ ಹಾಡಿದರು.ರವೀಂದ್ರಕುಮಾರ ಅವರು ಸ್ವಾಗತಿಸಿದರು.ಡಾ.ಯಶವಂತರಾವ ಮೇಂಗಜಿ ಅವರು ಅತಿಥಿಗಳ ಪರಿಚಯ ಮಾಡಿದರು.ಸುನಂದಾ ಪವಾರ ಅವರು ವಂದನಾರ್ಪಣೆ ಮಾಡಿದರು ಎಂದು ಸಮಾಜದ ಸದಸ್ಯರಾದ ರವೀಂದ್ರಕುಮಾರ ಮೇಂಗಜಿ ಅವರು ತಿಳಿಸಿದ್ದಾರೆ.