ಕ್ಷತ್ರೀಯರು ಶ್ರೀಭವಾನಿಗೆ ಆಸ್ತಿ ಅಂತಸ್ಥು ಕೇಳಿಲ್ಲಾ:ಘೋರ್ಪಡೆ

ತಾಳಿಕೋಟೆ:ಏ.14: ಭಾರತ ದೇಶದಲ್ಲಿ ಆಧಿಕಾಲದಿಂದಲೂ ತಮ್ಮದೇ ಆದ ವ್ಯಕ್ತಿತ್ವ ಗೌರವದೊಂದಿಗೆ ಈ ಹಿಂದಿನಿಂದಲೂ ಸಾಗಿಬಂದ ಕ್ಷತ್ರೀಯರು ಶ್ರೀ ಭವಾನಿಗೆ ನನ್ನ ದೇಶ ರಕ್ಷಣೆಯಾಗಬೇಕು ಇದಕ್ಕೆ ಅಡೆತಡೆಬಂದರೆ ಅದನ್ನು ರಕ್ಷೀಸುವ ಹೊಣೆ ನಮ್ಮದೇ ಆಗಿರಬೇಕೆಂಬ ಫಣತೊಟ್ಟ ಕ್ಷತ್ರೀಯರು ಶ್ರೀ ಭವಾನಿಗೆ ಕೇಳಿರುವದು ದೇಶರಕ್ಷಣೆಯಾಗಬೇಕೆ ವಿನಃ ನಮಗೆ ಯಾವುದೇ ಆಸ್ತಿ ಅಂತಸ್ಥು ಬೇಕಿಲ್ಲಾವೆಂಬ ತಿರ್ಮಾನವೇ ಅವರದ್ದಾಗಿತ್ತೆಂದು ಹಿರಿಯ ಪತ್ರಕರ್ತರಾದ ಜಿ.ಟಿ.ಘೋರ್ಪಡೆ ಅವರು ನುಡಿದರು.
ಶನಿವಾರರಂದು ಸೋಮವಂಶ ಆರ್ಯ ಕ್ಷತ್ರೀಯ ಸಮಾಜ ಬಾಂದವರ ಕುಲದೇವತೆಯಾದ ಶ್ರೀ ನಿಮಿಷಾಂಭಾ ದೇವಿ ದೇವಸ್ಥಾನದ 68ನೇ ವಾರ್ಷಿಕೋತ್ಸವ ಅಂಗವಾಗಿ ಸಾಯಂಕಾಲ ಏರ್ಪಡಿಸಲಾದ ದೀಪೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವಿಕರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದ ಅವರು ಶ್ರೀ ನಿಮಿಷಾಂಭಾ ದೇವಿಯು ಸಾಮಾನ್ಯ ದೇವತೆ ಅಲ್ಲಾ ಈ ದೇವತೆಯು ಸಹ ಕ್ಷತ್ರೀಯರಿಗೆ ಆಶಿರ್ವಾದ ಮಾಡಿ ಅವರ ಏಳಿಗೆಗೆ ಆರಣೀಬೂತಳಾಗಿದ್ದಾಳೆಂದರು. ಅಂತಹ ದೇವಿಯ ಜಯಂತ್ಯೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಿಕೊಂಡು ಬಂದಂತಹ ಸಮಾಜ ಬಾಂದವರು ಇಂದು ಸಮಾಜದ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಪ್ರೋತ್ಸಾಹದನ ನೀಡಿ ಗೌರವಿಸಿರುವದು ಸಂತಸ ತಂದಿದೆ ಎಂದರು. ಇದೇ ಸಮಾಜದ ಘನಶಾಮ ಚವ್ಹಾಣ ಅವರು ಹುಟ್ಟು ಹಾಕಿದಂತಹ ಭಾಪೂಜಿ ವಿಧ್ಯಾ ಸಂಸ್ಥೆಯಲ್ಲಿ ಎಲ್ಲ ಕ್ಷತ್ರೀಯ ಸಮಾಜದ ಮಕ್ಕಳಿಗೆ ಶೇ.5 ರಷ್ಟು ಉಚಿತ ಶಿಕ್ಷಣ ನೀಡುವ ಕಾರ್ಯ ಮಾಡಲಿ ಎಂದು ಆಶಿಸಿದ ಅವರು ಕ್ಷತ್ರೀಯ ಸಮಾಜ ಬಾಂದವರಲ್ಲಿ ಎಲ್ಲ ಕಲೆಯುಳ್ಳ ಕಲಾ ಕಾರರಿದ್ದಾರೆ ಅವೆಲ್ಲವನ್ನು ಕರಗತ ಮಾಡಿಕೊಂಡು ನಮ್ಮ ಧರ್ಮಿಯರಿಗೆ ಕಲಿಸಿ ಅವರಿಗೆ ಪ್ರೋತ್ಸಾಹಿಸುವ ಕಾರ್ಯ ಮಾಡಿದರೆ ಉದ್ಯೋಗ ಅವಕಾಶಕ್ಕೆ ಅನುಕೂಲವಾಗಲಿದೆ ಎಂದ ಘೋರ್ಪಡೆ ಅವರು ಎಲ್ಲ ಮಕ್ಕಳಿಗೆ ಪಾಲಕರು ವಿದ್ಯೆ ಕಲಿಸುವಂತಹ ಕಾರ್ಯಕ್ಕೆ ಒತ್ತಡ ನೀಡಬೇಕು ಸರ್ಕಾರದ ಸಹಾಯ ಸೌಲತ್ತು ಪಡೆದುಕೊಳ್ಳಲು ಕ್ಷತ್ರೀಯರೆಲ್ಲರೂ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸುತ್ತಾ ಸಾಗಿದರೆ ಈ ಹಿಂದಿನಂತೆ ಎಲ್ಲದರಲ್ಲಿಯೂ ಯಶಸ್ಸು ಕಾಣಬಹುದಾಗಿದೆ ಎಂದರು.
ಇನ್ನೋರ್ವ ಅತಿಥಿ ಶಿಕ್ಷಕ ಎಸ್.ಎಸ್.ಗಡೇದ ಅವರು ಮಾತನಾಡಿ ಸೋಮವಂಶ ಆರ್ಯ ಕ್ಷತ್ರೀಯ ಸಮಾಜ ಬಾಂದವರ ಸೇವಾ ಕಾರ್ಯ ಮಹತ್ವದ ಕಾರ್ಯ ಇದಾಗಿದೆ ದೇವಿ ಭಕ್ತಿ ಎಲ್ಲರಲ್ಲಿ ಮೂಡಿಬರಲಿ ಎಂಬ ಉದ್ದೇಶದಿಂದ ಪ್ರತಿವರ್ಷ ಆಚರಿಸಿಕೊಂಡು ಬರಲಾಗುತ್ತಿರುವ ಶ್ರೀ ನಿಮಿಷಾಂಬಾ ದೇವಿಯ ಜಯಂತ್ಯೋತ್ಸವ ಭಕ್ತಿ ಭಾವದ್ದಾಗಿದೆ ಇಂತಹ ಉತ್ಸವ ಆಚರಣೆಯಿಂದ ಎಲ್ಲ ಮಕ್ಕಳಲ್ಲಿ ಆದ್ಯಾತ್ಮೀಕ ವಿಚಾರ ಬೆಳೆದುಬಂದು ಸನ್ಮಾರ್ಗಕ್ಕೆ ಸಾಗಲು ಅನುಕೂಲವಾಗಲಿದೆ ಎಂದು ಹೇಳಿದ ಗಡೇದ ಅವರು ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಪ್ರೋತ್ಸಾಹದನ ನೀಡುವದರೊಂದಿಗೆ ಅವರಿಗೆ ಉತ್ತೇಜನ ನೀಡಿರುವದು ಮಹಾ ಕಾರ್ಯ ಇದಾಗಿದೆ ಅಂತಹ ಕಾರ್ಯ ಮೇಲಿಂದ ಮೇಲೆ ಆದರೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದಂತಾಗಿ ಅವರಿಗೆ ಇನ್ನಷ್ಟು ವಿದ್ಯಾರ್ಜನೆ ಮಾಡಲು ಅನುಕೂಲವಾಗಲಿದೆ ಅಲ್ಲದೇ ಪ್ರೋತ್ಸಾಹವು ಕೂಡಾ ನೀಡಿದಂತಾಗಲಿದೆ ಎಂದು ಹೇಳಿದ ಅವರು ಸೋಮವಂಶ ಆರ್ಯ ಕ್ಷತ್ರೀಯ ಸಮಾಜ ಬಾಂದವರು ಏರ್ಪಡಿಸಿರುವ ದೀಪೋತ್ಸವ ಕಾರ್ಯಕ್ರಮ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಇನ್ನೋರ್ವ ಸಾನಿದ್ಯ ವಹಿಸಿದ ಶ್ರೀಧರ ಗ್ರಾಮಪೊರೊಹಿತ ಅವರು ಮಾತನಾಡಿ ಛತ್ರಪತಿ ಶಿವಾಜಿ ಮಹಾರಾಜರು ಶ್ರೀ ದೇವಿಯ ಭಕ್ತಿಯಿಂದಲೇ ಸ್ವರಾಜ್ಯವನ್ನು ಸ್ಥಾಪನೆ ಮಾಡಿದರು ಶ್ರೀ ದೇವಿಯ ಭಕ್ತಿಯಿಂದ ಅವರ ಇಡೀ ಸಂಸ್ಥಾನವೇ ಝಗ ಝಗಿಸುತ್ತಿತ್ತು ಅಂತಹ ದೇವಿಯ ಆರಾಧನೆಯನ್ನು ಪ್ರತಿವರ್ಷ ಮಾಡುತ್ತಾ ಸಾಗಿದ ಸೋಮವಂಶ ಆರ್ಯ ಕ್ಷತ್ರೀಯ ಸಮಾಜಬಾಂದವರ ಸೇವಾ ಕಾರ್ಯ ಮೆಚ್ಚುವಂತಹದ್ದಾಗಿದೆ ಈ ಎಲ್ಲ ಸಮಾಜದ ಜನಾಂಗಕ್ಕೆ ಶ್ರೀದೇವಿಯ ವಲುಮೆಯಾಗಿದ್ದು ಸನ್ಮಾರ್ಗದ ಹಾದಿ ಎಲ್ಲರಿಗೂ ದೊರೆಯಲಿದೆ ಎಂದರು.
ಅಧ್ಯಕ್ಷತೆ ವಹಿಸಿದ ನಿವೃತ್ತ ಭೂದಾಖಲೆಗಳ ಇಲಾಖೆ ಅಧಿಕಾರಿ ಬಿ.ಜಿ.ಚಿತಾಪೂರ ಅವರು ಸಮಾಜದ ಏಳಿಗೆ ಕುರಿತು ಮಾತನಾಡಿದರು.
ಸಮಾಜದ ಉಪಾಧ್ಯಕ್ಷರಾದ ರಮೇಶ ಚವ್ಹಾಣ, ಕಾರ್ಯದರ್ಶಿ ಪ್ರದೀಪ ಭುಸಾರೆ, ಖಜಾಂಚಿ ಪ್ರಕಾಶ ಉಭಾಳೆ, ಶ್ರೀ ನಿಮಿಷಾಂಭಾ ದೇವಿ ಮಹಿಳಾ ಮಂಡಳದ ಶ್ರೀಮತಿ ಸೀಮಾ ಚವ್ಹಾಣ, ಮಾರುತಿ ಚವ್ಹಾಣ, ತುಳಸಿರಾಮ ಚವ್ಹಾಣ, ಘನಶಾಮ ಚವ್ಹಾಣ, ಕಾಶಿನಾಥ ಚಿತಾಪೂರ, ಮಾರುತಿ ಘಾಯಕವಾಡ, ಮೋಹನ ಚವ್ಹಾಣ, ರಾಘವೇಂದ್ರ ಚವ್ಹಾಣ, ಅರವಿಂದ ಚವ್ಹಾಣ, ಸತೀಶ ಚವ್ಹಾಣ, ಶ್ರೀಮತಿ ಅಕ್ಕಮಹಾದೇವಿ ಚವ್ಹಾಣ ಅವರನ್ನೋಳಗೊಂಡು ಸಮಾಜದ ಸರ್ವ ಸದಸ್ಯರು, ಹಾಗೂ ಮಹಿಳಾ ಮಂಡಳದ ಸದಸ್ಯನಿಯರು ಪಾಲ್ಗೊಂಡಿದ್ದರು.
ಕಾರ್ಯಕ್ರಮದ ನಂತರ ಮನರಂಜನಾ ಕಾರ್ಯಕ್ರಮಗಳು ಜರುಗಿದವು.