ಕ್ಷತ್ರಿಯ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮನವಿ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು.4: ನಗರದ ಎಸ್.ಎಸ್.ಕೆ ಕರ್ನಾಟಕ ರಾಜ್ಯಾದ್ಯಂತ ಜನಸಂಖ್ಯೆಯ ಶೇಕಡಾ 85% ರಷ್ಟು ಜನ ಕಡು ಬಡವರಾಗಿದ್ದು, ಸೋಡಾ, ಕೋಲ್ಡ ರಿಂಗ್ಸ್, ಸಾವಜಿ ಹೋಟೆಲ್, ವಾಚ್ ರಿಪೇರಿ, ಆಟೋ, ಗ್ಯಾರೇಜ್, ಟೇಲರ್, ಬೀದಿಬದಿಯ ವ್ಯಾಪಾರ, ಮೋಬೈಲ್ ರಿಪೇರಿ, ಹೀಗೆ ಹಲವಾರು ಚಿಕ್ಕಪುಟ್ಟ ಕಸುಬು, ದಿನಗೂಲಿ ಮಾಡುವ ಜನರಾಗಿದ್ದು ಕೆಲವೇ ಕೆಲವು ಬೆರಳೆಣಿಕೆ ಜನ ಉತ್ತಮ ಸ್ಥಿತಿಯಲ್ಲಿರುತ್ತಾರೆ. ಸರ್ಕಾರಿ ನೌಕರಿಯಲ್ಲಿಯು ಸಹ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಇರುತ್ತಾರೆ. ಈ ರೀತಿ ಬದುಕುತ್ತಿರುವ ನಮ್ಮ ಸಮುದಾಯಕ್ಕೆ ಅಭಿವೃದ್ಧಿಯ ಹಸ್ತವನ್ನು ತಮ್ಮ ಸರ್ಕಾರ ದಿಂದ ಆಪೇಕ್ಷಿಸುತ್ತವೆ. ದಯಾಳುಗಳಾದ ತಾವು ನಮ್ಮ ಸಮುದಾಯಕ್ಕೆ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪಿಸಿ ಕೊಡಬೇಕೆಂದು ಹಾಗೂ ಆ ಮಂಡಳಿಯಿಂದ ನಮ್ಮ ಮುಂದಿನ ಪೀಳಿಗೆಗೆ ಆಸರೆ ಆಗುತ್ತದೆ ಎಂದು ಅದ್ದರಿಂದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಸಮುದಾಯದಕ್ಕೆ ನಿಗಮ ಮಂಡಳಿ ಸ್ಥಾಪಿಸಬೇಕೆಂದು ತಾಲೂಕು ಎಸ್ ಎಸ್ ಕೆ ಸಂಘದ ಅಧ್ಯಕ್ಷ ವಿಶ್ಣುಕಾಂತ ಒತ್ತಾಯಿಸಿದರು.
  ಉಪಾಧ್ಯಕ್ಷ ಮನೋಜ್ ಮತ್ತು ಸಂಘದ ಪದಾಧಿಕಾರಿಗಳು ಹಾಗೂ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮುದಾಯದವರು ಇದ್ದರು.