ಕ್ಷತ್ರಿಯ ಸಮಾಜದ ಮಹಾರಾಜರ ಜಯಂತಿ ಆಚರಿಸುವಂತೆ ಮನವಿ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ:ಆ.08 ಶ್ರೀಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದ ಕುಲಪುರುಷ ಸಹಸ್ರಾರ್ಜುನ ಮಹಾರಾಜರ ಜಯಂತಿ ಸೇರಿದಂತೆ ಇತರೆ ಹತ್ತಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕ್ಷತ್ರಿಯ ಸಮಾಜದ ಮುಖಂಡರು ಸೋಮವಾರ ಮನವಿ ಸಲ್ಲಿಸಿದರು.
 ಪಟ್ಟಣದ ತಹಸೀಲ್  ಕಚೇರಿ ಬಳಿ ತಹಸೀಲ್ದಾರ್  ಚಂದ್ರಶೇಖರ್ ಶಂಬಣ್ಣ
 ಇವರಿಗೆ ಮನವಿ ಸಲ್ಲಿಸಿದ ಬಳಿಕ ಪುರಸಭೆ ಸದಸ್ಯ ದೀಪಕ್ ಕಠಾರೆ ಮಾತನಾಡಿ, ಕರ್ನಾಟಕ ರಾಜ್ಯಾಧ್ಯಂತ ಸುಮಾರು 16ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ನಮ್ಮ ಸಮಾಜಕ್ಕೆ ಸರ್ಕಾರದಿಂದ ಸಾಮಾಜಿಕವಾಗಿ, ಆರ್ಥಿಕವಾಗಿ ಶೈಕ್ಷಣಿಕವಾಗಿ ಮತ್ತು ಔದ್ಯೋಗಿಕವಾಗಿ ವಂಚಿತರಾಗಿದ್ದಾರೆ. ಶೇ.85ರಷ್ಟು ಸಮುದಾಯದವರು ಕಡುಬಡತನದಲ್ಲಿಯೇ ಜೀವನ ನಿರ್ವಹಿಸುತ್ತಿದ್ದಾರೆ. ಬೀದಿಬದಿಯ ವ್ಯಾಪಾರ ಸೇರಿದಂತೆ ಸಣ್ಣ ಪುಟ್ಟ ಹೋಟಲ್ ಸೇರಿದಂತೆ ಇತರೆ ನ್ಯಾಯಯುತ ದುಡುಮೆಯಲ್ಲಿ ತೊಡಗಿಕೊಂಡಿದ್ದು, ಕಷ್ಟಕರ ವಾತವರಣದಲ್ಲಿಯೇ ಇದ್ದಾರೆ ಎಂದರು.
ಸಮಾಜಕ್ಕೆ 2ಎ ಮೀಸಲಾತಿ ಸೌಲಭ್ಯ ಸರ್ಕಾರ ನಿಗಧಿ ಮಾಡಿದ್ದರೂ ಅದರಿಂದ ಯಾವುದೇ ಉಪಯೋಗವಾಗಿಯೇ ಇಲ್ಲ ಎಂದು ಸ್ಪಷ್ಟಪಡಿಸುತ್ತೇವೆ. ರಾಜ್ಯದಲ್ಲಿ ಅನೇಕ ಸೌಲಭ್ಯಗಳನ್ನು ಪ್ರತಿಯೊಂದು ಸಮಾಜಕ್ಕೆ ನೀಡುತ್ತಿರುವ ಕಾಳಜಿಯಿಮದಲೇ ಕೇಳುತ್ತಿರುವುದು ನಮ್ಮ ಸಮಾಜಕ್ಕೂ ಸೌಲಭ್ಯಗಳು ದೊರೆಯಲೆಂದು ಮನವಿಯಾಗಿದೆ ಎಂದು ಮುಖ್ಯಮಂತ್ರಿಯವರಿಗೆ ಒತ್ತಾಯಿಸಿದರು.
ಬಳಿಕ ವೈದ್ಯ ಹರೀಶ್ ಮಾತನಾಡಿ, ಶ್ರೀಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಅಭಿವೃದ್ಧಿ ನಿಗಮ ರಚಿಸಬೇಕು, ಮಹಾರಾಜರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮ ಎಂದು ಘೋಷಿಸಿ, ಹುಬ್ಬಳ್ಳಿ ಅತವಾ ಬೇರೆಡೆಯ ವಿಮಾನ ನಿಲ್ದಾಣಕ್ಕೆ ಶ್ರೀಸಹಸ್ರಾರ್ಜುನ ಹೆಸರನ್ನಿಡಬೇಕು, ರಾಜ್ಯದ ಪ್ರತಿ ತಾಲೂಕಿನಲ್ಲಿ ಮಹಾರಾಜರ ಪುತ್ಥಳಿ ಸ್ಥಾಪಿಸಿ, ಸರ್ಕಾರದ ನಾನಾ ಯೋಜನೆಗಳಾದ ಆಶ್ರಯ, ಗಂಗಾಕಲ್ಯಾಣ ಸೇರಿದಂತೆ ಇತರೆ ಸೌಲಭ್ಯಗಳನ್ನು ಕಲ್ಪಿಸಿಕೊಡಿ ಎಂದರು.
ಈ ವೇಳೆ ತಹಸೀಲ್ದಾರ್ ಚಂದ್ರಶೇಖರ್ ಶಂಭಣ್ಣ ಗಾಳಿ ಮನವಿಪತ್ರ ಸ್ವೀಕರಿಸಿದರು.
ಸಮುದಾಯದ ತಾಲೂಕು ಅಧ್ಯಕ್ಷ ರಂಗನಾಥಸಾ ಕಠಾರೆ, ಉಪಾಧ್ಯಕ್ಷರಾದ ಗೋವಿಂದ್‍ಸಾ ಕಾಟವಾ, ಕಾರ್ಯದರ್ಶಿ ಲಕ್ಷ್ಮಿಕಾಂತ್‍ಸಾ ಬಾವಿಕಟ್ಟಿ, ಸಹಕಾರ್ಯದರ್ಶಿ ಗಣಪತಿಸಾ ಹಬೀಬ, ಖಜಾಂಚಿ ರಾಜು ಮೇಘರಾಜ್, ಮೋಹನ್‍ಸಾ, ಡಿ.ಬಾಲಕೃಷ್ಣ, ಪರಶುರಾಮ್ ದಲ್‍ಬಂಜನ್, ಉಮಕಾಂತ್, ಅನಿಲ್ ಬಾವಿಕಟ್ಟಿ, ಯಲ್ಲಪ್ಪ, ರಾಜೇಂದ್ರಸಾ, ಪ್ರಮೋದ್ ಮೇಘರಾಜ್,  ಬಾಲಕೃಷ್ಣ ದಲ್‍ಬಂಜನ್, ರವಿಕುಮಾರ್, ವಸಂತ ಜಿತೂರಿ, ಚೇತನ್, ಮನೋಹರ ಮತ್ತಿತರರು ಇದ್ದರು.