ಕ್ಷಣವೇ ಸಾರ್ಥಕ ಬದುಕಿನ ಜೀವಾಳ


(ಸಂಜೆವಾಣಿ ವಾರ್ತೆ
ಬಳ್ಳಾರಿ, ಆ.30: ಮಾನವ ಸಾರ್ಥಕತೆ ಹೊಂದಲು,ಸಂಪತ್ತಿನ ಸಂಗ್ರಹ,ಅಧಿಕಾರ ಪ್ರಾಪ್ತಿಗಿಂತ ಶಿಕ್ಷಣವನ್ನು ಹೊಂದುವುದೇ ಶ್ರೇಷ್ಟ.ಶಿಕ್ಷಣದಿಂದ ಸಂಪತ್ತು, ಅಧಿಕಾರ,ಕೀರ್ತಿಯನ್ನು ಹೊಂದಬಹುದೆಂದು ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಎ,ಎಂ,ಪಿ,ವೀರಯ್ಯಸ್ವಾಮಿಯವರು ನುಡಿದರು.
ಬಳ್ಳಾರಿಯ ತಿಲಕ್ ನಗರದಲ್ಲಿಯ ಶ್ರೀ ಭವಾನಿ ಲಲಿತಕಲಾ ಮಹಾವಿದ್ಯಾಲಯದಲ್ಲಿ ,ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಸಂಸ್ಥಾಪಕರ ದಿನಾಚರಣೆ-ಚಿಗಟೇರಿ ಗೌರಮ್ಮ ನಾಗೇಂದ್ರಪ್ಪ ದತ್ತಿ ಕಾರ್ಯಕ್ರಮ ದಲ್ಲಿವಿಶೇಷ ಉಪನ್ಯಾಸ ನೀಡುತ್ತಾ,
ಬಡಮಕ್ಕಳ ಬದುಕಿಗೆ ಬೆಳಕಾದ ಶಿಕ್ಷಣ ಸಂತ ಸುತ್ತೂರು ರಾಜೇಂದ್ರ ಸ್ವಾಮಿಗಳನ್ನು ಕುರಿತು ಮಾತನಾಡುತ್ತಾ,ನಾಡಿನ ಮನೆ ಮನೆಯ,ಮನಮನಗಳಲ್ಲಿ ಅರಿವಿನ ಜ್ಯೋತಿಯನ್ನು ಬೆಳಗಲು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‍ನ್ನು, ವಿದ್ಯಾರ್ಥಿಗಳಿಗಾಗಿ ಉಚಿತ ವಸತಿ ಮತ್ತು ಪ್ರಸಾದ ನಿಲಯಗಳನ್ನು ಸುತ್ತೂರು ರಾಜೇಂದ್ರ ಶ್ರೀಗಳು ಸ್ಥಾಪನೆ ಮಾಡಿದರೆಂದರು.
ಅತಿಥಿಗಳಾಗಿ ಪಾಲ್ಗೊಂಡಿದ್ದ ಆರೋಗ್ಯ ಇಲಾಖೆಯ ನಿವೃತ್ತ ಉಪಕರಣ ತಂತ್ರಜ್ಞರಾದ ಜಿ,ಜಡಿಯಪ್ಪ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿವೃತ್ತ ಅಧಿಕಾರಿಗಳಾದ ಕೊಟ್ರಪ್ಪ ನವರು ಮಾತನಾಡುತ್ತ ಶಿಕ್ಷಣವೇ ಮಾನವನ ಜೀವನದ ಸಾರ್ಥಕತೆಯ ಜೀವಾಳವಾಗಿದೆ ಎಂದರು.
ಕು!!ನಿವೇದಿತಾ ವಚನ ಪ್ರಾರ್ಥನೆ ಮಾಡಿದರು.ಸಿ,ಕೊಟ್ರಪ್ಪ ಸ್ವಾಗತ ಕೋರಿದರು. ಪರಿಷತ್ತಿನ ಅಧ್ಯಕ್ಷರಾದ ಕೆ.ಬಿ.ಸಿದ್ಧಲಿಂಗಪ್ಪ ಪ್ರಾಸ್ತಾವಿಕ ನುಡಿಗಳೊಂದಿಗೆ ದತ್ತಿ ಧಾತೃಗಳನ್ನು ಪರಿಚಯಿಸಿ,ಶರಣು ಸಮರ್ಪಣೆ ಮಾಡಿದರು. ಅತಿಥಿಗಳಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಗುರುಮಿಟಕಲ್ಲಿನ ಖಜಾನೆ ಅಧಿಕಾರಿಗಳಾದ ನಾಗರಾಜ, ಚಿಗಟೇರಿ ಕುಟುಂಬದ ಬಂಧುಗಳು, ಚಿತ್ರಕಲಾ ಪ್ರಶಿಕ್ಷಣ ವಿದ್ಯಾರ್ಥಿಗಳು ಪಾಲ್ಗೂಂಡಿದ್ದರು. ಕಲಾ ಶಿಕ್ಷಕ ರಾಜಶೇಖರ ಕಾರ್ಯಕ್ರಮ ನಿರ್ವಹಣೆ ಮಾಡಿದರು.