ಕ್ವಿಂಟಲ್ ಗೆ 10 ಸಾ. ರೂ.ದರದಲ್ಲಿ ತೊಗರಿ ಖರೀದಿಗೆ ಆಗ್ರಹ

ಕಲಬುರಗಿ ಜ 11: ಪ್ರತಿ ಕ್ವಿಂಟಾಲ್ ತೊಗರಿಗೆ 10 ಸಾವಿರ ರೂ ಬೆಲೆ ನೀಡುವಂತೆ
ರೈತ ಕೃಷಿ ಕಾರ್ಮಿಕರ ಸಂಘಟನೆ ಆಗ್ರಹಿಸಿದೆ.ಇಂದು ವಿವಿಧ ಬೇಡಿಕೆಗಳ ಮನವಿಯನ್ನು ಸಂಘಟನೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ನೀಡಲಾಯಿತು.
ಜಿಲ್ಲೆಯಲ್ಲಿ ಬೆಳೆದ ಸಂಪೂರ್ಣ ತೊಗರಿಯನ್ನು ರಾಜ್ಯ ಸರ್ಕಾರವೇ ಖರೀದಿಸಬೇಕು.ಖರೀದಿಸಿದ ತೊಗರಿಗೆ ತಕ್ಷಣ ಹಣವನ್ನು ರಶೀದಿಯೊಂದಿಗೆ ನೀಡಬೇಕು. ಖರೀದಿಕೇಂದ್ರಗಳಲ್ಲಿ ಯಾವುದೇ ಅಕ್ರಮ ನಡೆಯದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು .ಪಾರದರ್ಶಕ ಖರೀದಿ ಪ್ರಕ್ರಿಯೆ ವ್ಯವಸ್ಥೆಗೊಳಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಈ ಸಂದರ್ಭದಲ್ಲಿ ರೈತ ಕೃಷಿ ಕಾರ್ಮಿಕರ ಸಂಘಟನೆ ಜಿಲ್ಲಾಧ್ಯಕ್ಷ ಗಣಪತರಾವ ಮಾನೆ ಹಾಗೂಇತರರಿದ್ದರು