ಕ್ವಾರಂಟೈನ್ ನಿಯಮ ಕಠಿಣ ಭಾರತದ ಆಕ್ರೋಶ

ಬ್ರಿಸ್ಬೇನ್,ಜ.೧೩- ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯಕ್ಕಾಗಿ ಕಠಿಣ ಕ್ವಾರಂಟೈನ್ ನಿಯಮಾವಳಿಗಳನ್ನು ರೂಪಿಸಿರುವ ಬಗ್ಗೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಅಂತಿಮ ಪಂದ್ಯದಲ್ಲಿ ಪಾಲ್ಗೊಳ್ಳಲು ಭಾರತ ತಂಡದ ಆಟಗಾರರು ಕ್ವೀನ್ಸ್‌ಲ್ಯಾಂಡ್‌ಗೆ ಬಂದಿಳಿದಿದ್ದಾರೆ. ಆದರೆ, ಆಟಗಾರರಿಗೆ ಹೊಟೇಲ್‌ನಲ್ಲಿ ಕಠಿಣ ಕ್ವಾರಂಟೈನ್‌ನ್ನು ಜಾರಿಗೊಳಿಸಲಾಗಿದೆ.
ತಂಡ ಇಲ್ಲಿಗೆ ಆಗಮಿಸುತ್ತಿದ್ದಂತೆ ರೂಮ್‌ಗಳ ಸೇವೆ, ಹೌಸ್‌ಕೀಪಿಂಗ್, ಜಿಮ್ ಸಂಪರ್ಕ, ಈಜುಕೊಳದ ಸೌಲಭ್ಯ ಒದಗಿಸದೆ ಸ್ಥಳೀಯ ಕೋವಿಡ್ ನಿಯಮಾವಳಿಗಳನ್ನು ಅನುಸರಿಸಲಾಗಿದೆ ಎಂದು ಭಾರತೀಯ ಕ್ರಿಕೆಟ್ ತಂಡದ ಮೂಲಗಳು ತಿಳಿಸಿವೆ.
ಈ ವಿಷಯವನ್ನು ಭಾರತ ತಂಡ ಬಿಸಿಸಿಐ ಜತೆ ಪ್ರಸ್ತಾಪಿಸಿಲ್ಲ. ಆದರೆ, ಕ್ರಿಕೆಟ್ ಆಸ್ಟ್ರೇಲಿಯಾ ಕೆಲವೊಂದು ನಿಯಮಗಳನ್ನು ಸಡಿಲಿಕೆ ಮಾಡಲು ಅನುಮತಿ ನೀಡುವ ಬಗ್ಗೆ ಚರ್ಚೆ ನಡೆಸಲಾಗಿದೆ.
ಕೊಠಡಿ ಸೇವೆ. ಜಿಮ್ ವ್ಯವಸ್ಥೆಗೆ ಅವಕಾಶ ಕಲ್ಪಿಸುವುದಾಗಿ ಭರವಸೆ ನೀಡಿದೆ. ಹೋಟೆಲ್‌ನಲ್ಲಿ ತಮಗೆ ನಿಗದಿ ಮಾಡಿರುವ ಕೊಠಡಿಗಳನ್ನು ವೀಕ್ಷಿಸಿಲ್ಲ. ಆಟಗಾರರ ಕೊಠಡಿಗೆ ಸಂಪರ್ಕ
ಕಲ್ಪಿಸಲಾಗಿದ್ದು, ಆದರೆ, ಹೋಟೆಲ್‌ನಲ್ಲಿ ಲಿಫ್ಟ್ ಸೌಲಭ್ಯವನ್ನು ಬಳಸುವಂತಿಲ್ಲ ಎಂದು ಮೂಲಗಳು ತಿಳಿಸಿವೆ.
ಎಲ್ಲ ಮಹಡಿಗಳಿಗೆ ತಲುಪಲು ಲಿಫ್ಟ್‌ಗಳನ್ನು ಬಳಸಲು ಅವಕಾಶ ಕಲ್ಪಿಸುವುದಾಗಿ ಬಿಸಿಸಿಐ ಆಟಗಾರರಿಗೆ ಭರವಸೆ ನೀಡಿದೆ. ಆದರೆ, ಈಜುಕೊಳ ಬಳಕೆಗೆ ಅವಕಾಶ ನೀಡುವ ಸಾಧ್ಯತೆ ಇಲ್ಲ.
ಕ್ವೀನ್ಸ್‌ಲ್ಯಾಂಡ್‌ನಲ್ಲಿ ೨೬ ಕೋವಿಡ್ ಪ್ರಕರಣಗಳು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತ ಕಟ್ಟುನಿಟ್ಟಾಗಿ ಕ್ವಾರಂಟೈನ್ ನಿಯಮಗಳನ್ನು ಅನುಸರಿಸುತ್ತಿದೆ.