ಕ್ವಾರಂಟೈನ್ ನಲ್ಲಿ ವಿಪಕ್ಷಗಳು, ಜೆ.ಪಿ.ನಡ್ಡಾ ಗೇಲಿ

ನವದೆಹಲಿ, ಮೇ 30- ಕೊರೊನಾ ಎರಡನೇ ಅಲೆ ವಿರುದ್ಧ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಹೋರಾಟ ನಡೆಸುತ್ತಿದ್ದರೆ ವಿಪಕ್ಷಗಳು ಕ್ವಾರಂಟೈನ್ ನಲ್ಲಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಇಂದು ಗೇಲಿ ಮಾಡಿದ್ದಾರೆ.
ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಏಳನೇ ವರ್ಷಾಚರಣೆ ಪ್ರಯುಕ್ತ, ವರ್ಚುವಲ್ ಸಭ ಮೂಲಕ ಕಾರ್ಯಕರ್ತರನ್ನು ಉದ್ದೇಶಿಸಿ ಜೆ.ಪಿ.ನಡ್ಡಾ ಮಾತನಾಡಿದರು.
ಮಂತ್ರಿಗಳು, ಸಂಸದರು ಹಾಗೂ ಶಾಸಕರು ಕೊರೊನಾ ಮತ್ತು ಲಾಕ್ ಡೌನ್ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಕನಿಷ್ಠ ಎರಡು ಹಳ್ಳಿಗಳಲ್ಲಿ ಜನರ ಸೇವೆ ಸಲ್ಲಿಸಲಿದ್ದಾರೆ. ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಜನರಿಗೆ ಸೇವೆ ಸಲ್ಲಿಸುತ್ತಾರೆ. ಆದರೆ ವಿರೋಧ ಪಕ್ಷಗಳಂತೆ ವರ್ಚುವಲ್ ಸುದ್ದಿಗೋಷ್ಠಿಗೆ ಸೀಮಿತವಾಗಿ ರುವುದಿಲ್ಲ ಎಂದು ಹೇಳಿದರು.
ಈಗ ಕೋವಿಡ್‌ ಲಸಿಕೆ ಬಗ್ಗೆ ಮಾತನಾಡುತ್ತಿರುವ ವಿರೋಧ ಪಕ್ಷದವರು ಈ ಹಿಂದೆ ಲಸಿಕೆಗಳ ವಿರುದ್ಧ ಜನರಲ್ಲಿ ಅನುಮಾನ ಮೂಡಿಸಿದ್ದರು ಎಂದು ದೂರಿದರು.

ಕೋವಿಡ್‌ ಕಾರಣದಿಂದ ಬಿಜೆಪಿ ಕಾರ್ಯಕರ್ತರು ವಾರ್ಷಿಕೋತ್ಸವವನ್ನು ದೇಶದಾದ್ಯಂತ ‘ಸೇವಾ ದಿವಸ್‌’ ಆಗಿ ಆಚರಿಸುತ್ತಿದ್ದಾರೆ ಎಂದು ನಡ್ಡಾ ತಿಳಿಸಿದರು.