ಕ್ವಾರಂಟೈನ್ ಕೇಂದ್ರ : ನೌಕರರಿಗೆ ವೇತಕ್ಕೆ ಒತ್ತಾಯಿಸಿ ಧರಣಿ

ಲಿಂಗಸುಗೂರು.ನ.೧೦- ವಸತಿ ನಿಲಯಗಳ ಕ್ವಾರಂಟೈನ್ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಣೆಯ ವೇತನ ಪಾವತಿಸಲು ಒತ್ತಾಯಿಸಿ ಹೊತಗೂಲಿ ನೌಕರರು ಸಮಾಜ ಕಲ್ಯಾಣ ತಾಲೂಕು ಕಚೇರಿಯಲ್ಲಿ ಧರಣಿ ನಡೆಸಿದರು.
ತಾಲೂಕಿನ ಒಟ್ಟು ೧೫ ವಸತಿ ನಿಲಯಗಳಲ್ಲಿ ಕ್ವಾರಂಟೈನ್ ಕೇಂದ್ರ ತೆರೆಯಲಾಗಿತ್ತು. ಇವುಗಳಲ್ಲಿ ೩೦ಕ್ಕೂ ಹೆಚ್ಚು ಹೊರಗುತ್ತಿಗೆ ನೌಕರರು ಕರ್ತವ್ಯ ನಿರ್ವಹಿಸಿದ್ದಾರೆ. ಮೂರು ತಿಂಗಳಿಂದ ವೇತನ ಪಾವತಿಸದೆ ಅಧಿಕಾರಿಗಳು ವಿಳಂಬ ಧೋರಣೆ ತೋರುತ್ತಿದ್ದಾರೆ. ಇದರಿಂದ ಕುಟುಂಬ ನಿರ್ವಹಣೆಗೆ ತೀವ್ರ ತೊಂದರೆಯಾಗಿದೆ. ಕೂಡಲೇ ಬಾಕಿ ಉಳಿದ ವೇತನ ಪಾವತಿಸಬೇಕೆಂದು ಒತ್ತಾಯಿಸಿದರು.
ನೌಕರರ ಮನವಿ ಆಲಿಸಿದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರವಿಕುಮಾರ, ಒಂದು ತಿಂಗಳ ವೇತನ ಮಂಗಳವಾರ ನೀಡಲಾಗುವುದು. ಆದರೆ ರಜೆ ಸಂದರ್ಭದಲ್ಲಿ ವೇತನ ಪಾವತಿಸಲು ಮೇಲಾಧಿಕಾರಿಗಳಿಂದ ಆದೇಶ ಬಂದಿರುವುದಿಲ್ಲ. ಮೇಲಾಧಿಕಾರಿಗಳ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದರು.
ನೌಕರರಾದ ದೇವೇಂದ್ರಪ್ಪ, ಚಿನ್ನಪ್ಪ, ಪ್ರಶಾಂತ, ತಿಮ್ಮಣ್ಣ, ಕಮಲಬಾಯಿ, ಲಕ್ಷ್ಮಿ, ದೇವಮ್ಮ, ರೇಣುಕಾ, ಶೋಭಾ, ನಿಲ್ಲಮ್ಮ, ರೀಯಾನಬೇಗಂ ಸೇರಿದಂತೆ ಇದ್ದರು.