ಕ್ವಾರಂಟೈನ್‍ಗಾಗಿ ಪಾಲಿ ಭಾಷಾ ಸಂಸ್ಥೆಯ ಹಾಸ್ಟೆಲ್ ಕಟ್ಟಡ ಅಧಿಗ್ರಹಣ

ಕಲಬುರಗಿ,ಏ.03:ಕಲಬುರಗಿ ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೋರೋನಾ ಶಂಕಿತ ವ್ಯಕ್ತಿಗಳ ಕ್ವಾರಂಟೈನ್ ಕೇಂದ್ರಕ್ಕಾಗಿ ಕಲಬುರಗಿ ನಗರದ ಬುದ್ಧ ವಿಹಾರ ಹತ್ತಿರದ ಪಾಲಿ ಭಾಷಾ ಸಂಸ್ಥೆಯ ಹಾಸ್ಟೇಲ್ ಕಟ್ಟಡವನ್ನು ಜಿಲ್ಲಾಡತವು ಅಧಿಗ್ರಹಣ ಮಾಡಿಕೊಂಡಿದೆ. ಈ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳು ಈ ಹಾಸ್ಟೇಲ್ ಕಟ್ಟಡವನ್ನು ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಹಸ್ತಾಂತರಿಸಬೇಕೆಂದು ಕಲಬುರಗಿ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳಾದ ವಿ.ವಿ. ಜ್ಯೋತ್ಸ್ನಾ ಅವರು ಆದೇಶ ಹೊರಡಿಸಿದ್ದಾರೆ.
ಸಾಂಕ್ರಾಮಿಕ ಕಾಯ್ದೆ 1897, ಕರ್ನಾಟಕ ಕೋವಿಡ್-19 ರೆಗ್ಯುಲೇಶನ್ ಉಪ ಕಲಂ (24) 2020 ನಿಯಮ 12ರಲ್ಲಿ ಹಾಗೂ Disaster Management Act 2005, ಕಲಂ 25, 26 ಮತ್ತು 30 ರಡಿ ಸಿ.ಆರ್.ಪಿ.ಸಿ. ಕಾಯ್ದೆ 1973 ರ ಕಲಂ 133ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕಲಬುರಗಿ ಜಿಲ್ಲಾಧಿಕಾರಿಗಳು ಈ ಆದೇಶ ಹೊರಡಿಸಿದ್ದಾರೆ.