ಕ್ಲೋಸ್ ಡೌನ್ ;ಮಾರುಕಟ್ಟೆಯಲ್ಲಿ ಬ್ಯೂಜಿಯಾದ ಸಾರ್ವಜನಿಕರು

ಜಗಳೂರು.ಮೇ.೪; ದಿನದಿಂದ ದಿನಕ್ಕೆ ಜಗಳೂರು ಪಟ್ಟಣದಲ್ಲಿ ಹೆಚ್ಚಾಗುತ್ತಿರುವ ಕೋರೋನ ರೋಗವನ್ನು ತಡೆಗಟ್ಟುವ ಸಲುವಾಗಿ ರಾಜ್ಯ ಸರ್ಕಾರ ಲಾಕ್ ಡೌನ್ ಮೊರೆಹೋಗಿದ್ದು ಮೇ 12 ರವರಗೆ 14 ದಿನಗಳ ಕಾಲ ಮುಂಜಾನೆ ಬೆಳಿಗ್ಗೆ 10 ರಿಂದ 6:00 ವರೆಗೆ ವಿಸ್ತರಿಸಿದೆ.ಸಾರ್ವಜನಿಕರಿಗೆ ದಿನನಿತ್ಯ ಅವಶ್ಯಕ ವಸ್ತುಗಳನ್ನು ಕೊಳ್ಳಲು ಮುಂಜಾನೆ 6 ರಿಂದ 10ರವರೆಗೆ ಸಮಯವಕಾಶ ನೀಡಿದ್ದರಿಂದ ಸಾರ್ವಜನಿಕರು ತರಕಾರಿ ಹಾಗೂ ದಿನಸಿ ಕೊಳ್ಳಲು ಮಾರುಕಟ್ಟೆಗೆ ಆಗಮಿಸಿ ತಮಗೆ ಬೇಕಾದ ವಸ್ತುಗಳನ್ನು ಕೊಂಡರುವ್ಯಾಪಾರಸ್ಥರ ಗೋಳು ಒಂದು ಕಡೆಯಾದರೆ 
ಈ ರೋಗವನ್ನು ತಡೆಗಟ್ಟಲು ಪೋಲಿಸ್ ಅಧಿಕಾರಿಗಳು ಮತ್ತು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳು ಹರಸಾಹಸ -:ಸರ್ಕಾರ ಹೊರಡಿಸಿರುವ ಲಾಕ್ಡೌನ್ ನಿಂದ ವ್ಯಾಪಾರ ವಹಿವಾಟು ದುಸ್ತರವಾಗಿದ್ದು ಬೆಳಿಗ್ಗೆ ವಸ್ತುಗಳನ್ನು ತಂದು ಹೊಂದಿಸುವಲ್ಲಿ ಬೆಳಿಗ್ಗೆ  7 ರಿಂದ 8 ಗಂಟೆ ಆಗುತ್ತದೆ ಗ್ರಾಹಕರು ಬಂದು ವ್ಯಾಪಾರ ಮಾಡುವಲ್ಲಿಗೆ 9:30 ಆಗುವು
ದರೊಳಗೆ ಪೊಲೀಸರು ನಮ್ಮೆಲ್ಲರನ್ನು ಕ್ಲೋಸ್ ಮಾಡುವಂತೆ ತಿಳಿಸುತ್ತಾರೆ ಇದರಿಂದ ವ್ಯಾಪಾರ ಕಡಿಮೆಯಾಗುತ್ತದೆ ಸಮಯವಕಾಶ ಕಡಿಮೆಯಾಗಿದ್ದರಿಂದ ನಮಗೆ ತೊಂದರೆ ಆಗಿದೆ ಎಂದು ತರಕಾರಿ ವ್ಯಾಪಾರಸ್ತರ ಗೋಳು ಇದಾಗಿದೆ 
ಮಧ್ಯದ ಅಂಗಡಿಯಲ್ಲಿ ನಿಲ್ಲದ ಕ್ಯೂ-:
ಮಧ್ಯ ದಿನಾಲು ಸಿಗುತ್ತೆ ಎಂಬ ವಿಚಾರದಿಂದ ಗೊಂದಲಕ್ಕೀಡಾಗದ ಮದ್ಯಪ್ರಿಯರು ಮುಂಜಾನೆ ತಮಗಿಷ್ಟವಾದ ಮದ್ಯದಂಗಡಿಗಳಿಗೆ ತೆರಳಿ ಮಧ್ಯ ಖರೀದಿಸುವುದರಿಂದ ಮದ್ಯದಂಗಡಿಗಳ ಮುಂದೆ ಯಾವುದೇ ಜನಸಂದಣಿ ಕಂಡಿರಲಿಲ್ಲ ಪೊಲೀಸರಆದೇಶದಂತೆ ಮುಂಜಾನೆ 6 ರಿಂದ ಬೆಳಿಗ್ಗೆ 10 ಗಂಟೆಯವರೆಗೆ ಮದ್ಯದಂಗಡಿಗಳನ್ನು ಪ್ರಾರಂಭಿಸಿ ತಮ್ಮ ವ್ಯಾಪಾರವನ್ನ ನಡೆಸಿದರು. ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಮುಂಜಾಗೃತ ಕ್ರಮವಾಗಿ ಸರ್ಕಾರ ಅವಶ್ಯ ವಸ್ತುಗಳಾದ ಕಿರಣಿ ತರಕಾರಿ ಸೇರಿದಂತೆ ಇನ್ನಿತರ ವಸ್ತುಗಳಿಗೆ ಬೆಳಿಗ್ಗೆ 6 ರಿಂದ  ಮಧ್ಯಾಹ್ನ 12 ಗಂಟೆಯವರೆಗೆ ವಿನಾಯ್ತಿ ನೀಡಿದ್ದಾರೆ ಇದನ್ನು ಕೆಲವೊಂದು ಕಿರಣಿ ಅಂಗಡಿಗಳಲ್ಲಿ ಹಾಗೂ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುವುದಾಗಿ ಮಾಹಿತಿ ತಿಳಿದುಬಂದಿದೆ. ಕಿರಾಣಿ ವ್ಯಾಪಾರಸ್ಥರು ದಿನಸಿ ಪದಾರ್ಥಗಳು ಮತ್ತು ಗುಟ್ಕಾ ಸಿಗರೇಟ್ ತಂಬಾಕು ಗಳಿಗೆ ದರಗಳನ್ನು ದುಪ್ಪಟ್ಟು ಹಣ ಪಡೆಯುವ ಬಗ್ಗೆ ಸಾರ್ವಜನಿಕರು ಆರೋಪ ಮಾಡುತ್ತಿದ್ದಾರೆ ಈ ಲಾಕ್ಡೌನ್ ಸಂದರ್ಭದಲ್ಲಿ ಅಗತ್ಯ ವಸ್ತುಗಳು ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಹಾಗೂ ಅಂಗಡಿಗಳಲ್ಲಿ ದಾಸ್ತಾನು ಇದ್ದರೂ ಸಹ ಇಲ್ಲವೆಂದು ಕೃತಕ ಅಭಾವ ಸೃಷ್ಟಿಸುವುದು ಕಾಯ್ದೆ 1955 ಹಾಗೂ ಅಗತ್ಯ ವಸ್ತುಗಳ ಆದೇಶ 1981 ನಿಯಮವಳಿ ಜೊತೆಗೆ ಅಗತ್ಯ ವಸ್ತುಗಳು ಕಳಪೆ ಗುಣಮಟ್ಟ ವಿದ್ದಲ್ಲಿ 2006 ರ ಅಡಿಯಲ್ಲಿ ಪ್ರಕರಣ ದಾಖಲಿಸುವುದು ಹೆಚ್ಚಿನ ಬೆಲೆಗೆ ಮಾರಾಟ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಾಲೂಕು ದಂಡಾಧಿಕಾರಿ ಮತ್ತು  ಪೊಲೀಸ್ ಇಲಾಖೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಇಂಥ ಕೆಲಸ ಮಾಡುವ ಕಿರಣಿ ವ್ಯಾಪಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ