ಕ್ಲೋಸರ್ ಕಾಮಗಾರಿ ಗೋಲ್‍ಮಾಲ್ ಲೋಕಾಯುಕ್ತ ತನಿಖೆಗೆ ಒತ್ತಾಯ

ವಿಜಯಪುರ, ಡಿ.8-ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ ವಿಜಯಪುರ ವತಿಯಿಂದ ಕ್ಲೋಸರ್ ಕಾಮಗಾರಿಯ ಬಿಲ್ಲನ್ನು ತಡೆಹಿಡಿಯುವ ಕುರಿತು ಕೆಂಬಾವಿಯಿಂದ ಇಂಡಿಯವರೆಗೆ ಕಾಲುವೆಗಳಲ್ಲಿನ ಹೂಳು ಹಾಗೂ ಗಿಡಗಂಟಿಗಳನ್ನು ತೆರವುಗೊಳಿಸಲು ಕೈಗೊಂಡ ಕ್ಲೋಸರ್ ಕಾಮಗಾರಿ ಅಪೂರ್ಣವಾಗಿದ್ದರು ಗುತ್ತಿಗೆದಾರರಿಗೆ ಸಂಪೂರ್ಣ ಕಾಮಗಾರಿ ಬಿಲ್ ನೀಡಲು ಮುಂದಾಗಿರುವುದು ಸರಿಯಲ್ಲ. ಮತ್ತು ಅಧಿಕಾರಿಗಳು ತಮ್ಮ ಸಂಬಂಧಿಕರಿಗೆ 40-50 ಬಿಲಾವ ಹೋಗಿ ಕೆಲಸ ಕೊಟ್ಟಿದ್ದಾರೆಂದು ಗುಮಾನಿ ಇದೆ.
ಕಾಮಗಾರಿ ಸಂಪೂರ್ಣಗೊಳಿಸದೆ ಸಂಪೂರ್ಣ ಬಿಲ್ ಪಾವತಿಸಿದರೆ ಕೆ.ಬಿ.ಜೆ.ಎನ್.ಎಲ್. ಕಚೇರಿಯ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು 2-3 ಬಾರಿ ಮನವಿ ಸಲ್ಲಿಸಿದರೂ ಕಿಮ್ಮತ್ತು ನೀಡದೆ ರಾಜಕೀಯ ಒತ್ತಡದಿಂದ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮಿಲಾಗಿ ನೂರಕ್ಕೆ ನೂರರಷ್ಟು ಬಿಲ್ ಪಾವತಿಸಲು ಮುಂದಾಗಿರುವುದು ತಿಳಿದು ಬಂದಿದೆ. ಆದ್ದರಿಂz ಕ್ಲೋಸರ್ ಕಾಮಗಾರಿ ಮುಗಿಯುವವರೆಗೂ ಸಂಪೂರ್ಣ ಬಿಲ್ ಕೊಡಬಾರದು.
ಎಷ್ಟೂ ಕ್ಲೋಸರ್ ಕಾಮಗಾರಿ ಮಾಡಿದ್ದಾರೆ ಅಷ್ಟೇ ಬಿಲ್ ಪಾವತಿಸಲಿ. ಅದನ್ನು ಬಿಟ್ಟು ಯಾರದೋ ಒತ್ತಡಕ್ಕೆ ಮಣಿದು ಅಥವಾ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬಿಲ್ ನೀಡಿದರೆ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ. ಸರ್ಕಾರದ ಹಣವನ್ನು ಬೇಕಾಬಿಟ್ಟ ಲೂಟಿ ಮಾಡಲು ಮುಂದಾದರೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬ್ರಷ್ಟಚಾರ ಸಹಿಸುವುದಿಲ್ಲ. ಸರ್ಕಾರದ ಹಣ ಎಂದರೆ ಸಾರ್ವಜನಿಕರಿಂದ ಸಂಗ್ರಹಿಸಿದ್ದ ತೆರೆಗೆ ಹಣ. ಆದ್ದರಿಂದ ಅಧಿಕಾರಿಗಳು ಅದಕ್ಕೆ ಅವಕಾಶ ನೀಡದೆ ಪ್ರಾಮಾಣಿಕವಾಗಿ ಕೆಲಸ ಮಾಡಿದ ನಂತರ ಸಂಪೂರ್ಣ ಬಿಲ್ ನೀಡಬೇಕು. ಅಲ್ಲದೇ ಕ್ಲೋಸರ್ ಕಾಮಗಾರಿಯಲ್ಲಿ ನಡೆಯುತ್ತಿರುವ ಗೋಲ್‍ಮಾಲ್ ಲೋಕಾಯುಕ್ತ ತನಿಖೆಗೆ ಹೋಗಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಅಧ್ಯಕ್ಷರಾದ ಚಂದ್ರಗೌಡ ಪಾಟೀಲ ಎಚ್ಚರಿಗೆ ನೀಡಿದ್ದಾರೆ.