ಕ್ಲೈಮ್ಯಾಕ್ಸ್ ತಲುಪಿದ ಅಮೆರಿಕಾ ಚುನಾವಣೆ

ವಾಷಿಂಗ್ಟನ್, ನ. ೬- ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೀಡೆನ್ ಗೆಲುವಿನ ಸನಿಹದಲ್ಲಿ ಇದ್ದರೂ ಇನ್ನು ಹಲವು ರಾಜ್ಯಗಳಲ್ಲಿ ಮತಎಣಿಕೆ ಬಾಕಿ ಇದೆ. ಹೀಗಾಗಿ ಮುಂದಿನ ಅಧ್ಯಕ್ಷರು ಯಾರು ಎನ್ನುವುದು ಜಾಗತಿಕ ಕುತೂಹಲ ಕೆರಳಿಸಿದೆ.

ಈ ನಡುವೆ ಜಾರ್ಜಿಯಾ ಮತ್ತು ಮಿಚಿಗನ್ ರಾಜ್ಯಗಳಲ್ಲಿ ಮತಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ದೂರಿ ಹಾಲಿ ಅಧ್ಯಕ್ಷ ಮತ್ತು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರಿಗೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲಿ ಅವರಿಗೆ ಸೋಲು ಎದುರಾಗಿದ್ದು ಫಲಿತಾಂಶಕ್ಕೂ ಮುನ್ನ ಹಿನ್ನಡೆಯಾಗಿದೆ

ಸದ್ಯದ ಸಂಖ್ಯಾಬಲ ನೋಡಿದರೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಗೆಲುವಿನ ಸನಿಹದಲ್ಲಿದ್ದಾರೆ.ಆದರೆ ಅಮೆರಿಕದ ನಿರ್ಣಾಯಕ ರಾಜ್ಯಗಳ ಮತಎಣಿಕೆ ಇನ್ನೂ ನಡೆಯಬೇಕಾಗಿದೆ. ಹೀಗಾಗಿ ಅಮೆರಿಕದ ಮುಂದಿನ ಅಧ್ಯಕ್ಷ ಯಾರು ಎನ್ನುವುದು ಸದ್ಯಕ್ಕಿರುವ ಪ್ರಶ್ನೆ.

೫೩೮ ಜನಪ್ರತಿನಿಧಿಗಳನ್ನು ಹೊಂದಿರುವ ಅಮೆರಿಕದಲ್ಲಿ ಅಧ್ಯಕ್ಷರಾಗಲು ೨೭೦ ಸದಸ್ಯರ ಅಗತ್ಯವಿದೆ ಇತ್ತೀಚಿನ ಮಾಹಿತಿ ಪ್ರಕಾರ ಜೋ ಬೀಡನ್ ಪರವಾಗಿ ೨೬೪ ಸದಸ್ಯರ ಬೆಂಬಲ ಸಿಕ್ಕಿದೆ ಇನ್ನು ಆರು ಸದಸ್ಯರ ಬೆಂಬಲ ಸಿಕ್ಕರೆ ಅವರು ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ.

ಹಾಲಿ ಅಧ್ಯಕ್ಷ ಹಾಗೂ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಪರವಾಗಿ ೨೧೩ ಜನಪ್ರತಿನಿಧಿಗಳ ಮತಗಳು ಬಂದಿವೆ.

ಜಾರ್ಜಿಯಾ ,ಪೆನ್ಸಿಲ್ವೇನಿಯಾ ,ನಾರ್ಥ್ ಕರೋಲಿನಾ ಮತ್ತು ನೇವಡಾ ರಾಜ್ಯಗಳ ಫಲಿತಾಂಶ ಇನ್ನೂ ಪ್ರಕಟವಾಗಬೇಕಾಗಿದೆ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಯಾದ ಬೇಕಾದರೆ ಈ ಎಲ್ಲ ರಾಜ್ಯಗಳಲ್ಲಿ ಗೆಲುವು ಸಾಧಿಸುವುದು ಅನಿವಾರ್ಯವಾಗಿದೆ ಆದರೆ ಜೋ ಬೀಡೆನ್ ಅವರು ನೇವಡಾ ಒಂದು ರಾಜ್ಯದಲ್ಲಿ ಗೆದ್ದರೆ ಸಾಕು ಅಧ್ಯಕ್ಷರಾಗಿ ಆಯ್ಕೆಯಾಗಲು ಸಹಕಾರಿಯಾಗಲಿದೆ.

ಅಂಚೆ ಮತಗಳ ಎಣಿಕೆ ಯಲ್ಲಿ ಪೆನ್ಸಿಲ್ವೇನಿಯ ಮತ್ತು ಜಾರ್ಜಿಯದಲ್ಲಿ ಆರಂಭದಲ್ಲಿ ಡೊನಾಲ್ಡ್ ಟ್ರಂಪ್ ಮುನ್ನಡೆ ಕಾಯ್ದುಕೊಂಡರು ಆನಂತರ ಅವರ ಅಂತರ ಕಡಿಮೆಯಾಗಿದೆ ಆದರೆ ನಾರ್ಥ್ ಕರೊಲಿನಾದಲ್ಲಿ ಮಾತ್ರ ಡೊನಾಲ್ಡ್ ಟ್ರಂಪ್ ಅವರಿಗೆ ಅಲ್ಪ ಮುನ್ನಡೆ ಇದೆ.

೨೦೧೬ ರ ಚುನಾವಣೆಯಲ್ಲಿ ಪೆನ್ಸಿಲ್ವೇನಿಯ ಮತ್ತು ಜಾರ್ಜಿಯದಲ್ಲಿ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಿದ್ದರು. ಟ್ರಂಪ್ ಅವರ ಪ್ರತಿಸ್ಪರ್ಧಿಯಾಗಿದ್ದರು ಕ್ಲಿಂಟನ್ ಅವರು ನೆವಾಡದಲ್ಲಿ ಮಾತ್ರ ಗೆಲುವು ಸಾಧಿಸಿದ್ದರು. ಹೀಗಾಗಿ ನೀರು ಡೆಮಾಕ್ರಟಿಕ್ ಪಕ್ಷದ ಪರವಾಗಿ ವಾಲುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ.

ಪ್ರತಿಭಟನೆ:

ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಡೊನಾಲ್ಡ್ ಟ್ರಂಪ್ ,ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ ಆದರೆ ಎರಡು ರಾಜ್ಯಗಳಲ್ಲಿ ಅವರಿಗೆ ನ್ಯಾಯಾಲಯದಲ್ಲಿ ಹಿನ್ನಡೆಯಾಗಿದೆ.

ಆರಿಜೋನ ಫೀನಿಕ್ಸ್ ಮತಎಣಿಕೆ ಕೇಂದ್ರದವರೆಗೆ ಡೊನಾಲ್ಡ್ ಟ್ರಂಪ್ ಪರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರ ಪೈಕಿ ೨೦೦ ಜನರಲ್ಲಿ ಬಂದೂಕುಗಳು ಇದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧನ:
ಮತ್ತೆ ಹೇಳಿಕೆ ಪೂರ್ಣಗೊಳ್ಳುವ ಮುನ್ನವೇ ತಾವು ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಹೇಳಿಕೆ ನೀಡಿದ್ದ ಡೊನಾಲ್ಡ್ ಟ್ರಂಪ್ ವಿರುದ್ಧ ಹಲವು ರಾಜ್ಯಗಳಲ್ಲಿ ಪ್ರತಿಭಟನೆ ನಡೆದಿದೆ ನೆಲೆಯಲ್ಲಿ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ.

ಗೆಲುವು ನಮ್ಮದೇ

ಅಮೆರಿಕ ಅಧ್ಯಕ್ಷ ಚುನಾವಣೆಯಲ್ಲಿ ಗೆಲವು ನಮ್ಮದೇ. ಪ್ರಜಾಪ್ರಭುತ್ವವನ್ನು ಯಾರು ನಮ್ಮಿಂದ ಕಸಿದುಕೊಳ್ಳಲು ಸಾಧ್ಯವಿಲ್ಲ ಈಗ ಮತ್ತು ಎಂದೆಂದೂ ಇದು ಸಾಧ್ಯವಾಗದ ಸಂಗತಿ

  • ಜೋ ಬೀಡೆನ್, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ

>

ಜನರ ಅಲೆ ನಮ್ಮಕಡೆ

ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಜನರ ಪರ ಅಲೆ ನಮ್ಮ ಕಡೆ ಇದೆ ಪೆನ್ಸಿಲ್ವೇನಿಯಾ, ವಿಸ್ಕಾನ್ಸಿನ್ , ಮಿಚಿಗನ್ ಸೇರಿದಂತೆ ಎಲ್ಲಾ ಕಡೆ ಜನರು ನಮ್ಮ ಪರವಾಗಿ ಮತಚಲಾಯಿಸಿದ್ದಾರೆ

  • ಡೋನಾಲ್ಡ್ ಟ್ರಂಪ್, ರಿಪಬ್ಲಿಕನ್ ಅಭ್ಯರ್ಥಿ