ಕ್ಲೀನ್ ವಾರ್ಡ್, ಗ್ರೀನ್ ವಾರ್ಡ್ ಯೋಜನೆ ನನ್ನದು : ಸಿ.ಇಬ್ರಾಹಿಂ ಬಾಬು

ಬಳ್ಳಾರಿ, ಏ.22: ಜನಪ್ರತಿನಿಧಿಯಾಗಿ ಆಯ್ಕೆಯಾಗುವುದಷ್ಟೇ ಮುಖ್ಯವಲ್ಲ. ತಮ್ಮನ್ನು ಆಯ್ಕೆ ಮಾಡಿದವರಿಗೋಸ್ಕರ ಏನಾದರೂ ಮಾಡಬೇಕು ಎಂಬ ಯೋಜನೆಯೊಂದನ್ನು ಹೊಂದಿರಬೇಕು.ಆನಿಟ್ಟಿನಲ್ಲಿ ನನಗೆ ಈ ಬಾರಿ ಜನ ಆಶಿರ್ವಾದ ಮಾಡಿ ಗೆಲ್ಲಿಸಲಿದ್ದು ಅಷ್ಟೇ ಅಲ್ಲದೆ ಇಲ್ಲಿನ ಪಾಲಿಕೆಯಲ್ಲಿ ಈಬಾರಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದು. ನಾನು ಆ ಮೂಲಕ ಕ್ಲೀನ್ ವಾರ್ಡ್, ಗ್ರೀನ್ ವಾರ್ಡ್ ಮಾಡುವ ಯೋಜನೆ ಹೊಂದಿದ್ದೇನೆ ಎನ್ನುತ್ತಾರೆ. ಮಾಜಿ ಮೇಯರ್, 13 ವಾರ್ಡಿನ ಬಿಜೆಪಿ ಅಭ್ಯರ್ಥಿ ಸಿರಿವೇಲು ಇಬ್ರಾಹಿಂ ಬಾಬು.
ಪಾಲಿಕೆಗೆ 2007 ರಲ್ಲಿ ನಡೆದ ಚುನಾವಣೆಯಲ್ಲಿ ಸದಸ್ಯರಾಗಿ ಇದೇ ವಾರ್ಡಿನಿಂದ ಆಯ್ಕೆಯಾದರು.ಆಯ್ಕೆಯಾದ ಮೊದಲ ಅವಧಿಯಲ್ಲೇ ಲೆಕ್ಕ ಮತ್ತು ಆಯವ್ಯಯ ಸ್ಥಾಯಿ ಸಮಿತಿಗೆ ಅಧ್ಯಕ್ಷರಾದರು. ತದನಂತರ ಕಂದಾಯ ಸಮಿತಿ ಅಧ್ಯಕ್ಷರಾದರು, ಅದಾದ ನಂತರ ಉಪ ಮೇಯರ್, ಮೇಯರ್ ಆಗಿ ಕೆಲಸ ಮಾಡಿದರು.
ಮೇಯರ್ ಆಗಿ ಮಾಡಿದ್ದ ಇವರ ಗಮನಾರ್ಹ ಸಾಧನೆ ಎಂದರೆ. ಮಹಾನಗರ ಪಾಲಿಕೆಗೆ ಆದಾಯ ಹೆಚ್ಚಿಸಿದ್ದು. ಅಂದು ಪಾಲಿಕೆಗೆ ಕೇವಲ 6 ಕೋಟಿ ರೂಪಾಯಿ ಆದಾಯದ ಗುರಿ ಇತ್ತು. ಆದರೆ ಇವರು ಈ ಗುರಿಯನ್ನು 60ಕೋಟಿ ರೂಪಾಯಿಗೆ ಹೆಚ್ಚಿಸಿದ್ದು. ಅದಷ್ಟೇ ಅಲ್ಲದೆ ಕುಡಿಯುವ ನೀರಿನ ಸಂಪರ್ಕಗಳಿಂದ 13 ಲಕ್ಷ ರೂಪಾಯಿಗಳ ಆದಾಯ ಇತ್ತು ಅದನ್ನು 1 ಕೋಟಿ ರೂಪಾಯಿಗೆ ಹೆಚ್ಚಿಸಿದರು. ಹೆಚ್ಚಿಸಿದ್ದಷ್ಟೇ ಅಲ್ಲ. ಈ ಎರಡೂ ಆದಾಯದ ಮೂಲಗಳಿಂದ ಅವರು ಇಟ್ಟುಕೊಂಡ ಗುರಿಯ ಪ್ರಕಾರ ಶೇಕಡಾ 80ರಷ್ಟು ಸಾಧನೆ ಮಾಡಿದರು.
ಸದಸ್ಯತ್ವದಿಂದ ಮೇಯರ್‍ವರಗೆ :
ತಮ್ಮ ಆಡಳಿತ ಅವಧಿಯ ಬಗ್ಗೆ ಕುರಿತು ಸಂಜೆವಾಣಿಯೊಂದಿಗೆ ಮಾತನಾಡಿದ ಇಬ್ರಾಹಿಂ ಬಾಬು ಅವರು, ಪಾಲಿಕೆ ಸದಸ್ಯನಾಗಿ, ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷನಾಗಿ, ಉಪಮೇಯರ್ ಹಾಗೂ ಮೇಯರ್ ಆದ ಸಂದರ್ಭದಲ್ಲಿ ಬಳ್ಳಾರಿ ನಗರದಲ್ಲಿ ಕೈಗೊಂಡ ಎಲ್ಲಾ ಅಭಿವೃದ್ಧಿ ಕಾಮಗಾರಿಗಳಲ್ಲೂ ನನ್ನ ಪಾತ್ರ ಇದೆ, 13ನೇ ವಾರ್ಡ್ ನ ಮಿಲ್ಲರ್ ಪೇಟೆಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಆಗಿನ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ನೀಡಿದ ಅನುದಾನದಲ್ಲಿ ಯಾವುದೇ ಖಾಸಗಿ ಆಸ್ಪತ್ರೆಯಂತೆ ಅಭಿವೃದ್ಧಿಪಡಿಸಿದೆ, ನಗರದ ಬಹುತೇಕ ರಸ್ತೆಗಳ ಅಗಲೀಕರಣ ಮತ್ತು ಅಭಿವೃದ್ದಿ, ಪಾರ್ಕ್‍ಗಳ ನಿರ್ಮಾಣ, ಅನೇಕ ಕಾಲೋನಿಗಳಲ್ಲಿ ಬೀದಿ ದೀಪ ಇರಲಿಲ್ಲ ಅಲ್ಲಿ ಬೀದಿದೀಪಗಳ ಅಳಡವಿಕೆ, ಸರ್ಕಲ್‍ಗಳ ನಿರ್ಮಾಣ, ನಿರಂತರ ಕುಡಿಯುವ ನೀರಿನ ಯೋಜನೆ(24/7), ಅದರಲ್ಲೂ ಡಾ.ರಾಜ್ ಕುಮಾರ್ ಪಾರ್ಕ್ ನಿರ್ಮಾಣ ಹೀಗೆ ಅನೇಖ ಅಭಿವೃದ್ಧಿ ಕೆಲಸಗಳು ಮಾಡಿದ್ದನ್ನು ಸ್ಮರಿಸುತ್ತಾರೆ ಅವರು.
ನಾನು ಸದಸ್ಯನಾದ ಅವಧಿಯೂ ಹಾಗೆ ಇತ್ತು. ಏಕೆಂದರೆ ನನ್ನೊಂದಿಗೆ ಕೆಲಸ ಮಾಡಿದ ಮಾಜಿ ಮೇಯರ್ ಬಿಸಲಳ್ಳಿ ಬಸವರಾಜ್, ಪಾರ್ವತಿ ಇಂದುಶೇಖರ್, ಉಪ ಮೇಯರ್‍ಗಳಾದ ಎಂ.ಗೋವಿಂದರಾಜುಲು, ಶಶಿಕಲಾ ಕೃಷ್ಣಮೋಹನ್, ಸದಸ್ಯ ಚಂದ್ರ ಮೊದಲಾದವರು ನಾನು ಕೈಗೊಂಡ ಅಭಿವೃದ್ಧಿ ಕಾರ್ಯಗಳಿಗೆ ಬೆಂಬಲಿಸಿದರು. ಈಗ ನಗರ ಶಾಸಕರಾಗಿರುವ ಮತ್ತು ಅಂದು ಶಾಸಕರಾಗಿದ್ದ ಜಿ.ಸೋಮಶೇಖರರೆಡ್ಡಿ ಅವರ ನೇತೃತ್ವ ಮತ್ತು ಮಾರ್ಗದರ್ಶನ ನಮಗೆಲ್ಲ ಇತ್ತು. ಬಳ್ಳಾರಿ ನಗರದ ಅಭಿವೃದ್ಧಿಯಲ್ಲಿ ಅವರೆಲ್ಲರ ಹೆಜ್ಜೆ ಗುರುತುಗಳು ಇವೆ. ಮುಖ್ಯವಾಗಿ ನಮ್ಮ ಆ ವಧಿಯಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇತ್ತು. ಬಳ್ಳಾರಿ ಜಿಲ್ಲೆಯಲ್ಲಿ ಮೂರು ಜನ ಸಚಿವರಿದ್ದರು. ಹಾಗಾಗಿಯೂ ಅವರ ಬೆಂಬಲವೂ
ಕೂಡ ನಮ್ಮ ಯಶಸ್ಸಿಗೆ ಕಾರಣ ಆಯಿತು ಎನ್ನುವನ್ನು ಹೇಳಲು ಅವರು ಮರೆಯಲಿಲ್ಲ.
ಹಾಗಾಗಿ ಈಗ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಅದಕ್ಕಾಗಿ ಬಳ್ಳಾರಿ ಪಾಲಿಕೆಯಲ್ಲಿಯೂ ಬಿಜೆಪಿ ಆಡಳಿತಕ್ಕೆ ಬಂದರೆ ನಗರದ ಅಭಿವೃದ್ದಿ ಮತ್ತಷ್ಟು ವೇಗವಾಗಿ ನಡೆಯಲಿದೆಂದರು.

ರಾಜಕೀಯ ಪ್ರವೇಶ:
ಇಬ್ರಾಹಿಂ ಅವರನ್ನು ಜನರು ಗುರುತಿಸುವುದೇ ಬಾಬು ಎಂದು 48 ವರ್ಷ ವಯಸ್ಸಿನ ಇವರು ಬಿಕಾಂ ಪದವೀಧರರು,
ಮಾಜಿ ಸಚಿವ ಎಂ.ದಿವಾಕರಬಾಬು ಅವರು ಮೊದಲು ಸಲ ನಗರಸಭೆ ಅಭ್ಯರ್ಥಿಯಾಗಿ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿದಾಗ ಅವರ ಚುನಾವಣೆಯಲ್ಲಿ ಸಾಮಾನ್ಯ ಕಾಂಗ್ರೆಸ್ ಕಾರ್ಯಕರ್ತನಾಗಿ ತಮ್ಮ ರಾಜಕೀಯ ಜೀವನ ಆರಂಭಿಸಿದ ಇಬ್ರಾಹಿಂ(ಬಾಬು) ಅವರ ತಂದೆ ಸಿ.ಖಾದರ್ ಅವರು ಅರಣ್ಯ ಇಲಾಖೆಯಲ್ಲಿ ನೌಕರರಾಗಿದ್ದರು, ಕೌಟುಂಬಿಕವಾಗಿ ರಾಜಕೀಯ ಹಿನ್ನೆಲೆ ಇರದ ಬಾಬು ರಾಜಕೀಯ ಪ್ರವೇಶ ಮಾಡಿದ ಸಿರಿವೇಲು ಮನೆತನದ ಮೊದಲ ವ್ಯಕ್ತಿಯಾಗಿದ್ದರು.

ಕಾಂಗ್ರೆಸ್‍ನಿಂದ ಬಿಜೆಪಿಗೆ:
ಪ್ರಾಥಮಿಕ, ಪ್ರೌಢ ಶಿಕ್ಷಣದಿಂದ ಪದವಿಯವರೆಗೆ ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರ ಸಹಪಾಠಿ, ಜೊತೆಗೆ ಓದಿದವರು. ಇದೇ ವೇಳೆ ಹಾಲಿ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರ ಜೊತೆಗೂ ಸ್ನೇಹ ಬೆಳೆಯಿತು. ಮುಂದೆ ಇದೇ ಗೆಳೆತನ ಬದಲಾದ ರಾಜಕೀಯ ಸನ್ನಿವೇಶದಲ್ಲಿ 2007ರಲ್ಲಿ ಬಿಜೆಪಿ ಸೇರ್ಪಡೆಯಾಗಲು ಕಾರಣವಾಯ್ತು. ಆಗಲೇ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಇದೇ 13 ನೇ ವಾರ್ಡ್ ನಿಂದ ಸ್ಪರ್ಧೆ ಮಾಡಿ ಗೆದ್ದು ಪಾಲಿಕೆ ಪ್ರವೇಶ ಮಾಡಿದ್ದರು.

ಹಣಕ್ಕಾಗಿ ಹಪಹಪಿ ಇಲ್ಲ:
ಬಹುತೇಕರು ರಾಜಕೀಯಕ್ಕೆ ಬರುವುದೆಂದರೆ ಹಣ ಮಾಡಲು ಎಂಬ ಅಭೀಪ್ರಾಯ ಇದೆ. ಆದರೆ ಟ್ರಾನ್ಸ್ ಪೋರ್ಟರ್ ಆಗಿ ಉದ್ಯಮದಲ್ಲಿ ವೃತ್ತಿ ಬದುಕು ಆರಂಭಿಸಿ. ನಂತರ ಜೀನ್ಸ್ ಉದ್ಯಮದಲ್ಲೂ ತೊಡಗಿಸಿಕೊಂಡ ಇವರು. ರಾಜಕೀಯದಿಂದ ಹಣ ಸಂಪಾದನೆ ಮಾಡುವ ಅನಿವಾರ್ಯತೆ ನನಗಿಲ್ಲ. ಕಮೀಷನ್ ಗಾಗಿ ಕಾಂಟ್ರಾಕ್ಟರ್ ಗಳಿಗೆ ತೊಂದರೆ ಕೊಡಬೇಕು ಅನ್ನೋದು ಇರಲಿಲ್ಲ, ನಮಗೆಲ್ಲ ನಮ್ಮದೇ ಆದ ವಿವಿಧ ಉದ್ಯಮಗಳು ಇರುವುದರಿಂದ ಹಣಕ್ಕಾಗಿ ಹಪಹಪಿಸುವ ಬುದ್ದಿ ಇರಲಿಲ್ಲ. ಅಂದು 2007 ರಲ್ಲಿ ಆಯ್ಕೆಯಾಗಿದ್ದ ನಮ್ಮ ಗುಂಪಿನ ಬಹುತೇಕ ಸದಸ್ಯರಿಗೆ ಜನರಿಗೆ ಉತ್ತವ ಸೇವೆ ಮಾಡಿ ಅವರ ಮನದಲ್ಲಿ ಉಳಿದುಕೊಳ್ಳಬೇಕು. ಒಳ್ಳೆಯ ಹೆಸರು ಮಾಡಬೇಕು ಅನ್ನೋದಷ್ಟೇ ನಮ್ಮ ಗುರಿ ಆಗಿತ್ತು. ಯಾರೂ ರಾಜಕೀಯವನ್ನು ವ್ಯವಹಾರ ಮಾಡ್ಕೊಂಡಿರರಿಲಿಲ್ಲ ಎನ್ನುತ್ತಾರೆ ಬಾಬು.

ಸಹಾಯದ ಮನ:
ಇಬ್ರಾಹಿಂ(ಬಾಬು) ಅವರು ಡಾಟ್ಸ್ ಎಂಬ ಚಾರಿಟೇಬಲ್ ಟ್ರಸ್ಟ್ ಹೊಂದಿದ್ದು. ಇದು ರಾಜಕೀಯೇತರ ವ್ಯಕ್ತಿಗಳನ್ನೇ ಒಳಗೊಂಡಿರುವ ಒಂದು ಸೇವಾ ಸಂಸ್ಥೆಯಾಗಿದ್ದು. ಅದರ ಮೂಲಕ ಆರೋಗ್ಯ ಶಿಬಿರ, ಕಣ್ಣಿನ ಪರೀಕ್ಷೆ, ಚಿಕಿತ್ಸಾ ಶಿಬಿರ, ಆಯುರ್ವೇದ ಮಾತ್ರೆಗಳ ವಿತರಣೆ, ಕೋವಿಡ್‍ನ ಮೊದಲ ಅಲೆ ಬಂದಾಗ ಸಂಕಷ್ದಲ್ಲಿದ್ದ ಬಡ ಜನತೆಗೆ ರೇಷನ್ ಕಿಟ್ ಪೂರೈಸಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಕೊಡಿಸಿದ್ದಾರೆ.

ದೂರ ಆಗಲಿಲ್ಲ:
ಕಳೆದ ಚುನಾವಣೆಯಲ್ಲಿ ಸೋತರೂ ಜನರಿಂದ ದೂರ ಆಗಲಿಲ್ಲ. ತಮಗೆ ಅಧಿಕಾರ ಇರದಿದ್ದರೂ ಜನರ ಮಧ್ಯೆ ಇದ್ದು ತಮ್ಮಿಂದ ಜನರಿಗಾಗುವ ಕೆಲಸ ಮಾಡುತ್ತ ಬಂದಿದ್ದಾರೆ. ಹಾಗಾಗಿ ಈ ಸಲ ಮತ್ತೆ ಸ್ಪರ್ಧೆ ಮಾಡಿರುವ ತಮಗೆ, ಖಂಡಿತ ನನ್ನ ವಾರ್ಡ್ ನ ಜನ ನನಗೆ ಆಶೀರ್ವಾದ ನೀಡ್ತಾರೆ ಎಂಬ ಭರವಸೆ ಇದೆ ಎನ್ನುತ್ತಾರೆ ಇಬ್ರಾಹಿಂ ಅವರು.
ಪ್ರಚಾರ:
ಈಗಾಗಲೇ ವಾರ್ಡಿನ ಪ್ರತಿ ಮನೆ. ಮನೆಗೆ ತೆರಳಿ ಮತಯಾಚನೆ ಮಾಡಿದ್ದಾರೆ. ಸಚಿವ ಶ್ರೀರಾಮುಲು, ಶಾಸಕ ಸೋಮಶೇಖರ ರೆಡ್ಡಿ ಸೇರಿದಂತೆ ಅನೇಕ ಮುಖಂಡರು ಸಹ ಬಂದು ಪ್ರಚಾರ ಮಾಡಿದ್ದಾರೆ. ಜಾತಿ ಮತ ಬೇಧವಿಲ್ಲದೆ ಎಲ್ಲಾ ಸಮುದಾಯದ ಜನತೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎನ್ನುತ್ತಾರೆ.


ಗೆದ್ದರೆ ಏನು ಮಾಡುತ್ತೇನೆ:

ಹಾಲಿ ಭಾರತೀಯ ಜನತಾ ಪಕ್ಷದ ಅಲ್ಪಸಂಖ್ಯಾತ ಮೋರ್ಚಾದ ಬಳ್ಳಾರಿ ಜಿಲ್ಲಾ ಅಧ್ಯಕ್ಷರಾಗಿರುವ ನಾನು ಮತ್ತೆ ಗೆಲ್ಲುವ ವಿಶ್ವಾಸ ಹೊಂದಿದ್ದೇನೆ. ಗೆದ್ದು ಕ್ಲೀನ್ ವಾರ್ಡ್, ಗ್ರೀನ್ ವಾರ್ಡ್ ಅಂತ ಮಾದರಿ ವಾರ್ಡ್ ಮಾಡುವ, ವಾರ್ಡ್ ನಲ್ಲಿ ಮುಸ್ಲಿಂ ಮತದಾರರು ಹೆಚ್ಚಿದ್ದು. ಈ ವಾರ್ಡ್ ಗೆ ಸಂಬಂಧಿಸಿ ವಕ್ಫ್ ಆಸ್ತಿ 3 ಎಕರೆ ಜಾಗ ಇದೆ, ಆ ಜಾಗದಲ್ಲಿ ಮುಸ್ಲಿಂ ಶಾದಿ ಮಹಲ್ ನಿರ್ಮಿಸಿ ಬಡವರಿಗೆ ಅತ್ಯಂತ ಕಡಿಮೆ ಶುಲ್ಕದಲ್ಲಿ ಬಾಡಿಗೆ ನೀಡುವುದು, ಅರಬಿ ಮದ್ರಸಾ ಜೊತೆಗೆ ಇಂಗ್ಲೀಷ್ ಮೀಡಿಯಂ ಶಾಲೆಯನ್ನು ನಮ್ಮ ವಾರ್ಡ್‍ನ ಬಡ ಮಕ್ಕಳಿಗಾಗಿ ನಿರ್ಮಾಣ ಮಾಡುವ ಇದೇ ಜಾಗದಲ್ಲಿ ಐಟಿಐ ಕಾಲೇಜನ್ನೂ ಸ್ಥಾಪಿಸುವ ಯೋಜನೆ ಇದೆ, ಐಟಿಐ ಕಾಲೇಜ್ ಕಟ್ಟಡಕ್ಕಾಗಿ ಸಂಪೂರ್ಣ ಹಣ ನೀಡವುದಾಗಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಈಗಾಗಲೇ ಭರವಸೆ ನೀಡಿದ್ದಾರೆ. ವಾರ್ಡಿನಲ್ಲಿ ಸಂಪೂರ್ಣ ಒಳಚರಂಡಿ ವ್ಯವಸ್ಥೆ ಬದಲಿಸಬೇಕಿದೆ. 24/7 ನಿರಂತರ ಕುಡಿಯುವ ನೀರಿನ ಯೋಜನೆ 80ರಷ್ಟು ಪೂರ್ಣಗೊಂಡಿದೆ. ಅದನ್ನು ಸಂಪೂರ್ಣ ಪೂರ್ಣಗೊಳಿಸಿ ಆ ನಲ್ಲಿಯಲ್ಲಿ ನೀರು ಬರುವುದನ್ನು ನೋಡುವ ಆಸೆ ನನ್ನದು


ಸಿ.ಇಬ್ರಾಹಿಂ(ಬಾಬು)
13 ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ