ಕ್ಲಾಸ್ ಭತ್ತ ಕಟಾವು ಯಂತ್ರ ರೈತರಿಗೆ ಹಸ್ತಾಂತರ

ದಾವಣಗೆರೆ.ಅ.೨೮; ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ರೈತರೊಬ್ಬರಿಗೆ ಕ್ಲಾಸ್ ಕಂಪನಿಯ ಭತ್ತ ಕಟಾವು ಯಂತ್ರವನ್ನು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪನವರು ಹಸ್ತಾಂತರಿಸಿದರು. ನಗರದ ಲೋಕಿಕೆರೆ ರಸ್ತೆಯ ಕೈಗಾರಿಕೆ ಪ್ರದೇಶದ ಕ್ಲಾಸ್ ಕಂಪನಿಯ ಶೋ ರೂಂನಲ್ಲಿ ಯಂತ್ರವನ್ನು ಹಸ್ತಾಂತರ ಮಾಡಿದ ಶಾಮನೂರು ಶಿವಶಂಕರಪ್ಪನವರು ದೇಶದ ಕೃಷಿವಲಯದಲ್ಲಿ ಇತ್ತೀಚಿನ ದಿನಗಳಲ್ಲಿ ಯಂತ್ರೋಪಕರಣ ಬಳಕೆ ಹೆಚ್ಚಾಗಿದ್ದು, ಇದನ್ನು ಅರಿತ ಕ್ಲಾಸ್ ಕಂಪನಿ ಕೃಷಿವಲಯಕ್ಕೆ ಬೇಕಾದ ಅನೇಕ ಯಂತ್ರಗಳನ್ನು ತಯಾರಿಸಿ ಮಾರುಕಟ್ಟೆ ಮಾಡುತ್ತಿರುವುದು ಶ್ಲಾಘನೀಯವೆಂದರು.ಕೃಷಿ ಯಂತ್ರೋಪಕರಣಗಳನ್ನು ಸದ್ಬಳಕ್ಕೆ ಮಾಡಿಕೊಳ್ಳುವ ಮೂಲಕ ರೈತರು ಅನುಕೂಲ ಪಡೆಯಬೇಕೆಂದು ಕರೆ ನೀಡಿ ಸಣ್ಣ ರೈತರಿಗೆ ಅನುಕೂಲವಾಗುವಂತೆ ಯಂತ್ರೋಪಕರಣ ಬಳಕೆ ಆಗಲಿ ಎಂದು ಆಶಿಸಿದರು.ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಸಾಲಕಟ್ಟೆ ಗ್ರಾಮದ ವಿ.ಭೀಮರಾಜ್ ಅವರು ಭತ್ತ ಕಟಾವು ಯಂತ್ರ ಪಡೆದ ರೈತರು.
ಈ ಸಂದರ್ಭದಲ್ಲಿ ಕ್ಲಾಸ್ ಕಂಪನಿಯ ಶೋ ರೂಂನ ರಮೇಶ್ ಬಾಬು, ಅನಿಲ್ ಬಾಬು, ಶ್ರೀಶೈಲ ಪೆಟ್ರೋಲ್ ಬಂಕ್ ಮಾಲೀಕರಾದ ಎಂ.ಎಂ.ಚಂದ್ರಶೇಖರ್ ತುರ್ಚಘಟ್ಟ, ಲಕ್ಷ್ಮೀ ವೆಂಕಟೇಶ್ವರ ಗ್ರಾನೈಟ್‌ನ ಮಹಾದೇವ್, ನರೇಂದ್ರ, ಡಾ|| ಸುರೇಂದ್ರ, ಶಿವಣ್ಣ, ಶ್ಯಾಗಲೆ ಗ್ರಾಮ ಪಂಚಾಯ್ತಿ ಸದಸ್ಯ ನರೇಶ್, ಕುರುಡಿ ಗಿರೀಶ್ ಮತ್ತಿತರರಿದ್ದರು.
ಪೋಟೋ-೧