ಕ್ಲಾಸಿಕ್ ಸ್ಟಡಿ ಸರ್ಕಲ್: ರಜತ ಮಹೋತ್ಸವ

ಧಾರವಾಡ, ನ18: ಕ್ಲಾಸಿಕ್ ಕೆಎಎಸ್ ಮತ್ತು ಐಎಎಸ್ ಸ್ಟಡಿ ಸರ್ಕಲ್ ಸಂಸ್ಥೆ ಸ್ಥಾಪನೆಗೊಂಡು 25 ವರ್ಷಗಳನ್ನು ಪೂರೈಸಿದ್ದು, ರಜತ ಮಹೋತ್ಸವದ ಪ್ರಯುಕ್ತ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆ ಸಂಸ್ಥಾಪಕ ಲಕ್ಷ್ಮಣ ಎಸ್. ಉಪ್ಪಾರ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 1997ರಲ್ಲಿ ಸ್ಥಾಪನೆಗೊಂಡ ಕ್ಲಾಸಿಕ್ ಸಂಸ್ಥೆ ಧಾರವಾಡವನ್ನು ಕೇಂದ್ರವಾಗಿಸಿಕೊಂಡು ಬೆಂಗಳೂರು ಮತ್ತು ಕಲಬುರಗಿಯಲ್ಲಿಯೂ ಶಾಖೆಗಳನ್ನು ತೆರೆಯುವ ಮೂಲಕ ಇಂದು ಹೆಮ್ಮರವಾಗಿ ಬೆಳೆದಿದೆ. ಇದರೊಂದಿಗೆ ಸಾವಿರಾರರು ಯುವಕ, ಯುವತಿಯರು ಉದ್ಯೋಗ ಪಡೆದು ಬದುಕು ಕಟ್ಟಿಕೊಳ್ಳಲು ಅನವು ಮಾಡಿಕೊಟ್ಟಿದೆ ಎಂದರು.
ನಿವೃತ್ತ ಪ್ರಾಧ್ಯಾಪಕ ಎಂ.ವೈ. ಸಾವಂತ ಮಾತನಾಡಿ, ಸಂಸ್ಥೆಯ ರಜತಮೋತ್ಸವದ ಹಿನ್ನಲೆಯಲ್ಲಿ 25 ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ.
ಅದೇ ರೀತಿಯಾಗಿ ನ. 20ರಂದು ರಸ್ತೆ ದುರಸ್ತಿ ಕಾರ್ಯಕ್ರಮ, 24ರಂದು ಯೋಗ ಶಿಬಿರ, 26ರಂದು ಗಾಳಿಪಟ ಉತ್ಸವ, 28ರಂದು ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ ಸೇರಿದಂತೆ ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ, ಆರೋಗ್ಯ ಶಿಬಿರ, ಕಿವುಡ ಮೂಕ ಮಕ್ಕಳ ಶಾಲೆಗೆ ಸಹಾಯ, ವೃದ್ಧಾಶ್ರಮ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ರಜತಮಹೋತ್ಸವವನ್ನು ಅರ್ಥಪೂರ್ಣ ಆಚರಣೆ ಮಾಡಲು ನಿರ್ಧರಿಸಲಾಗಿದೆ ಎಂದರು. ಸಾಹಿತಿ ಹರ್ಷ ಡಂಬಳ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿದ್ದರು.