ಕ್ಲಾರ್ಟ್ ಮೊಬೈಲ್ ಆಪ್ ಬಳಕೆ ಕುರಿತು ತರಬೇತಿ

ಸಿರವಾರ.ಅ೪- ತಾಲೂಕಿನ ಮಲ್ಲಟ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಜಿಲ್ಲಾ ಪಂಚಾಯತ್, ಎಫ್.ಇ.ಎಸ್ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ವೈಜ್ಞಾನಿಕ ಕ್ರಿಯಾಯೋಜನೆ ತಯಾರಿಸುವಲ್ಲಿ
ಕ್ಲಾರ್ಟ್ (ಸಿಎಲ್‌ಎಆರ್‌ಟಿ) ಮತ್ತು ಡಿಇಟಿ ಬಳಕೆ ಮತ್ತು ಉಪಯೋಗಗಳ ಕುರಿತು ನರೇಗಾ ತಾಂತ್ರಿಕ ಸಿಬ್ಬಂದಿಗಳಿಗೆ ತರಬೇತಿ ಹಮ್ಮಿಕೊಳ್ಳಲಾಯಿತು.
ಎಫ್.ಇ.ಎಸ್ ಸಂಸ್ಥೆ ಜಿಲ್ಲಾ ಸಂಯೋಜಕ ಖಾದರ್ ಬಾಷಾ ಅವರು ತರಬೇತಿ ನೀಡಿ,ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಹಾಗೂ ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ನರೇಗಾದಲ್ಲಿ ಜಾರಿಗೊಳಿಸಿರುವ ಅಂತರ್ಜಲ ಚೇತನ ಕಾಮಗಾರಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ಲಾರ್ಟ್ ಆಪ್ ಮೊಬೈಲ್ ಆಪ್ಲಿಕೇಶನ್ ಸೂಕ್ತ ರೀತಿಯಲ್ಲಿ ಬಳಸಬಹುದು. ನಿರ್ದಿಷ್ಟ ಮತ್ತು ಸೂಕ್ತ ಸ್ಥಳ ಗುರುತಿಸುವಿಕೆಯಲ್ಲಿ ಆಪ್ ಸಹಕಾರಿಯಾಗಲಿದೆ.
ಜಲನಯನ ಪ್ರದೇಶವನ್ನು ರೂಪಿಸುವಲ್ಲಿ ಗ್ರಾ.ಪಂಗಳಿಗೆ ಸಮುದಾಯ ತಾಂತ್ರಿಕ ಸಹಾಯಕರು, ತಾಂತ್ರಿಕ ಸಹಾಯಕರು ಅಗತ್ಯ ನೆರವು ನೀಡಬೇಕೆಂದರು.
ಈ ಸಂದರ್ಭದಲ್ಲಿ ಪಂಚಾಯತಿ ಕಾರ್ಯದರ್ಶಿ ವೀರೇಶ, ಐಇಸಿ ಸಂಯೋಜಕ ರಾಜೇಂದ್ರ ಕುಮಾರ್, ಬಿಎಫ್‌ಟಿ, ಜಿಕೆಎಂಗಳು ಇದ್ದರು.