ಕ್ಲಬ್‍ಗೆ ಬಂದ ಕೇರೆಹಾವುಗಳ ರಕ್ಷಣೆ

ಕಲಬುರಗಿ,ಜೂ 8: ನಗರದ ನಾಗನಹಳ್ಳಿ ರಸ್ತೆ ಜಸ್ಟ್ ಕ್ಲಬ್‍ನಲ್ಲಿ ಇಂದು ಬೆಳಿಗ್ಗೆ ಇಬ್ಬರು ಅಪರೂಪದ ಅತಿಥಿಗಳ ಆಗಮನವಾಗಿದೆ.
ಆ ಅತಿಥಿಗಳು ಬೇರಾರೂ ಅಲ.್ಲ 9 ಅಡಿ ಉದ್ದದ,ಭಾರಿ ಗಾತ್ರದ ಎರಡು ಕೇರೆ ಹಾವುಗಳು.
ಇಂಡಿಯನ್ ರ್ಯಾಟ್ ಸ್ನೇಕ್ ಎಂದು ಕರೆಯಲಾಗುವ ಈ ನಿರುಪದ್ರವಿ ಜೋಡಿಹಾವುಗಳನ್ನು ಸ್ನೇಕ್ ಪ್ರಶಾಂತ ಪಾಟೀಲ ಅವರು ರಕ್ಷಿಸಿ, ಸುರಕ್ಷಿತ ಸ್ಥಳದಲ್ಲಿ ಬಿಟ್ಟು ಬಂದಿದ್ದಾರೆ.
ಹಾವು ಕೊಲ್ಲಬೇಡಿ:
ಹಾವುಗಳನ್ನು ಕಂಡರೆ ಅವನ್ನು ಕೊಲ್ಲಬೇಡಿ.ತಕ್ಷಣ 7411431430 ಅಥವಾ 7411431414 ಈ ಸಂಖ್ಯೆಗೆ ಕರೆ ಮಾಡಬಹುದು ಎಂದು ಅವರು ಮನವಿ ಮಾಡಿದ್ದಾರೆ.