ರಾಮದುರ್ಗ,ಏ.15: ಡಾ. ಬಿ.ಆರ್. ಅಂಬೇಡ್ಕರ ಜಯಂತ್ಯುತ್ಸವದ ಅಂಗವಾಗಿ ಇಲ್ಲಿನ ಜನಪರ ಟ್ರಸ್ಟ್ವತಿಯಿಂದ ರಾಮದುರ್ಗ ಕ್ರಿಕೆಟ್ಲೀಗ್ಪಂದ್ಯಾವಳಿಗಳನ್ನು ಹಮ್ಮಿಕೊಳ್ಳಲಾಗಿದೆ.
ಲೀಗ್ಪಂದ್ಯದಲ್ಲಿ ಒಟ್ಟು 10 ತಂಡಗಳು ಭಾಗವಹಿಸಲಿವೆ. ಲೀಗ್ವಿಜೇತರಿಗೆ ಪ್ರಥಮ ಬಹುಮಾನ ರೂ. 1.30 ಲಕ್ಷ ಮತ್ತು ದ್ವಿತೀಯ ಬಹುಮಾನ ರೂ. 70 ಸಾವಿರ ನೀಡಲಾಗುವುದು.
ಪಂದ್ಯಾವಳಿಯನ್ನು ಉದ್ಘಾಟಿಸಿದ ಪುರಸಭೆ ಮುಖ್ಯಾಧಿಕಾರಿ ರವಿ ಬಾಗಲಕೋಟಿ ಮಾತನಾಡಿ, ಪಂದ್ಯಗಳು ಮನುಷ್ಯನ ಸದೃಢತೆಗೆ ಪೂರಕವಾಗಿವೆ.
ಪಂದ್ಯಗಳಲ್ಲಿ ನಿರ್ಣಾಯಕರ ತಪ್ಪು ನಿರ್ಣಯಗಳು ಗೊಂದಲಗಳನ್ನು ಸೃಷ್ಠಿ ಮಾಡುತ್ತವೆ. ನಿರ್ಣಾಯಕರು ಯಾವುದೇ ಆಮಿಷಗಳಿಗೆ ಬಲಿಯಾಗದೇ ಸರಿಯಾದ ನಿರ್ಣಯ ನೀಡಬೇಕು. ಅಂದಾಗ ಕ್ರೀಡಾಪಟುಗಳಿಗೆ ಬಹುಮಾನಕ್ಕಿಂತ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಮೂಡುತ್ತದೆ ಎಂದು ಹೇಳಿದರು.
ಜನಪರ ಟ್ರಸ್ಟ್ಅಧ್ಯಕ್ಷ ಸುಭಾಸ ಘೋಡಕೆ ಮಾತನಾಡಿ, ಕ್ರೀಡೆಗಳನ್ನು ನಡೆಸುವುದು ಒಂದು ಕಡೆಯಾದರೆ ಕ್ರೀಡಾಪಟುಗಳಿಗೆ ಪ್ರೇರಣೆ ನೀಡುವುದು ಸಂಘದ ಉದ್ದೇಶವಾಗಿದೆ ಎಂದು ತಿಳಿಸಿದರು.
ವಕೀಲರಾದ ಪ್ರಭು ಬಾಳಿಕಾಯಿ, ಶ್ರೀನಿವಾಸ ಕುರುಡಗಿ, ರಾಜು ಹರ್ಲಾಪೂರ, ಬಿ.ಎಸ್. ಸಂಕನಗೌಡರ, ಆದರ್ಶ ಪೌಂಡೇಶನ್ಅಧ್ಯಕ್ಷ ನದಾಫ್, ಉದ್ಯಮಿ ದೀಪಕ ರಾಠಿ ಇತರರು ಇದ್ದರು.