ಕ್ರೈಸ್ತ ಸಮುದಾಯದ ಕಷ್ಟ ಸುಖಗಳಿಗೆ ಸ್ಪಂದನೆ: ಎಂ.ಪಿ.ಲತಾ ಭರವಸೆ

ಹರಪನಹಳ್ಳಿ.ಡಿ.೨೬; ಪಟ್ಟಣದ ಹೊಸಪೇಟೆ ರಸ್ತೆಯಲ್ಲಿರುವ ಚರ್ಚ್ ನಲ್ಲಿ  ಕ್ರಿಸ್‌ಮಸ್‌ ಹಬ್ಬದ ಅಂಗವಾಗಿ ಕ್ರಿಶ್ಚಿಯನ್ ಸಮುದಾಯದ ಆರಾಧ್ಯ ದೈವ ಜೀಸಸ್ ಅವತರಿಸಿದ ಪ್ರತೀಕವಾಗಿ ಅತ್ಯಂತ ಸಾಂಪ್ರದಾಯಿಕ ಬದ್ಧವಾಗಿ ವೈವಿಧ್ಯ ರೀತಿಯ ಅಲಂಕಾರ ಮಾಡಲಾಗಿತ್ತು. ಯೇಸುಕ್ರಿಸ್ತನ ಮೂರ್ತಿಯ ಮುಂದೆ ಪ್ರಾರ್ಥನೆ ಸಲ್ಲಿಸುವ ಮೂಲಕ ಶಾಂತಿ  ನೆಮ್ಮದಿ ಕೋರಲಾಯಿತು. ನಂತರ ಕ್ರಿಸ್ತನ ಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ  ಎಂ.ಪಿ.ಲತಾ ಮಲ್ಲಿಕಾರ್ಜುನ ಅವರು ಕೇಕ್ ಕತ್ತರಿಸಿ ಮಾತನಾಡಿ, ಕೊರೊನಾ ಸಂಕಷ್ಟದಿಂದ ಸಾಕಷ್ಟು ಕಷ್ಟನಷ್ಟಗಳು ಜನ ಎದುರಿಸುವಂತಾಗಿದೆ. ಇಂತಹ ಸಂಕಷ್ಟದ ಸಮಯದಲ್ಲೂ ಕ್ರಿಸ್ ಮಸ್ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಈ ಸಮುದಾಯದ  ಆಗೂ ಹೋಗುಗಳಿಗೂ ಸ್ಪಂದಿಸುತ್ತೇನೆ ಎಂದು ಭರವಸೆ ನೀಡಿದ ಅವರು ಶುಭಾಶಯ ಕೋರಿದರು. ಕ್ರಿಸ್‌ಮಸ್ ಹಬ್ಬ ಅಂಗವಾಗಿ ಕೇಕ್ ಕತ್ತರಿಸುವ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡರು. ಫಾದರ್ ನೀಲಂ ಅಹಂಸ್ಟ್ರಾಂಗ್ ನೇತೃತ್ವದಲ್ಲಿ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರಿಗೆ ಕ್ಷೇತ್ರದಲ್ಲಿ ಅಧಿಕಾರ ದೊರೆತು ಜನ ಸೇವೆ ಮಾಡಲು ಅವಕಾಶ ಕಲ್ಪಿಸುವಂತೆ ಜೀಸಸ್ ಬಳಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ  ಎಂ.ಪಿ.ಲತಾ ಮಲ್ಲಿಕಾರ್ಜುನ ಅವರು ಮಕ್ಕಳಿಗೆ ಪೇನ್‌ ಶೀಲ್ ಹಾಗೂ ಸಿಹಿ ವಿತರಿಸಿದರು. ತಾ.ಪಂ ಮಾಜಿ ಸದಸ್ಯೆ ಜಯಲಕ್ಷ್ಮಿ, ಉದಯಶಂಕರ್, ಶಮೀವುಲ್ಲಾ, ಫಿಲಿಪ್ಸ್ ದೊಡ್ಡಮನಿ, ಸೋಲ್ ದೊಡ್ಡಮನೆ, ಪುಷ್ಪ, ಸರಳಾ ಮತ್ತಿತರರು ಉಪಸ್ಥಿತರಿದ್ದರು.