ಕ್ರೈಸ್ತ ಸಮುದಾಯದವರಿಗೆ ನ್ಯಾಯ ಒದಗಿಸಲು ಬೃಹತ್ ಪ್ರತಿಭಟನಾ ರ್ಯಾಲಿ

ಬೀದರ:ಜು.11: ಜಿಲ್ಲಾ ಕ್ರೈಸ್ತ ಸಂಘಟನೆಗಳ ಒಕ್ಕೂಟ ವತಿಯಿಂದ ಬೀದರ ನಗರದ ಸಾಯಿ ಸ್ಕೂಲ್ ಆವರಣದಿಂದ ಬೀದರ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭನೆ ಮೂಲಕ ಮನವಿ ಪತ್ರವನ್ನು ಸಲ್ಲಿಸಲಾಯಿತು.

ನಮ್ಮ ಭಾರತ ಸಂವಿಧಾನ ಸಮಸ್ತ ಭಾರತೀಯರಿಗೆ ಪ್ರಜಾ ಪ್ರಭುತ್ವದ ದೀಕ್ಷೆಯನ್ನು ನೀಡಿದೆ. ಸರ್ವರು ಸಮಾನರು, ಸರ್ವರಿಗೂ ಸಮಾನ ಪ್ರಗತಿ , ಸರ್ವರಿಗೂ ಸಮಾನ ರಕ್ಷಣೆ ನೀಡಲು ಹೇಳಿದೆ. ಆದರೆ ಇತ್ತಿಚಿಗೆ ಮಣಿಪೂರ ರಾಜ್ಯದಲ್ಲಿ ಕ್ರೈಸ್ತ ಸಮುದಾಯದವರ ಮೇಲೆ ಧರ್ಮ, ಜಾತಿ ನಿಂದನೆಯನ್ನು ಮಾಡಿ ಹಲ್ಯೆಗಳನ್ನು ಮಾಡಿದ್ದಾರೆ. ಈ ಘಟನೆ ತಿರ್ವವಾಗಿ ಖಂಡಿಸುತ್ತೇವೆ. ಸುಮಾರು 100ಕ್ಕೂ ಅಧಿಕವಾಗಿ ಸಾವನ್ನಪ್ಪಿದಾರೆ. 300ರಕ್ಕೂ ಅಧಿಕವಾಗಿ ಚರ್ಚಗಳನ್ನು ಧ್ವಂಷವನ್ನು ಮಾಡಿದ್ದಾರೆ. ಐವತ್ತು ಸಾವಿರ ಕುಟುಂಬಗಳು ಬಿದಿಪಾಲಾಗಿವೆ. ಈ ಘಟನೆ ದೇಶದ ಎಲ್ಲಾ ಕ್ರೈಸ್ತ ಧರ್ಮದವರಿಗೆ, ಜಾತಿಯವರಿಗೆ ಭರಿಸಲಾಗದ ದುಃಖವನ್ನು ತಂದಿದೆ. ಮಣಿಪೂರದಲ್ಲಿ ಸರ್ಕಾರ ಮತ್ತು ಕೇಂದ್ರದಲ್ಲಿ ಡಬಲ್ ಇಂಜನ ಸರ್ಕಾರ ಸಭಕಾ ಸಾಥ ಸಭ್‍ಕಾ ವಿಕಾಸ, ಬೇಟಿ ಪಡಾವು ಬೇಟಿ ಬಚಾವು ಘೋಷಣೆ ಮಾನ್ಯ ಪ್ರಧಾನ ಮಂತ್ರಿಗಳಾದ ಘೋಷಣೆಯಾಗಿದೆ. ಈ ಘೋಷಣೆ ಘೋಷಣೆಯಾಗಿ ಉಳಿದಿದೆ. ಜಾರಿಗೆ ಬರುತ್ತಿಲ್ಲ. ಜಾರಿಯಾದರೆ ಒಂದು ಧರ್ಮ ಮತ್ತೊಂದು ಧರ್ಮದವರ ಮೇಲೆ ದೌರ್ಜನ್ಯವನ್ನು ಮಾಡುವುದಿಲ್ಲ. ಎಲ್ಲರ ಪ್ರಗತಿಯೊಂದಿಗೆ ಸಾಗುತ್ತದೆ. ದೇಶದ ಮಹಿಳೆಯರ ರಕ್ಷಣೆಯಾಗುತ್ತದೆ. ಈ ಕೆಲಸವನ್ನು ಮಾಡಲು ದೇಶದ ಪ್ರಧಾನ ಮಂತ್ರಿಗಳಿಗೆ ತಾವುಗಳು ಮಾರ್ಗದರ್ಶನ ಮಾಡಬೇಕ್ಕಾಗಿದೆ. ಕ್ರೈಸ್ತ ಧರ್ಮಿಯರ ಮೇಲೆ ಮಾಡಿರುವÀ ದೌರ್ಜನ್ಯವನ್ನು ತಡೆಯಲು, ಮಣಿಪೂರ ಬಿ ಜೆ ಪಿ ಸರ್ಕಾರ ಕಿತ್ತೊಗೆದು, ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕೆಂದು ಆಗ್ರವನ್ನು ಮಾಡುತ್ತಿದ್ದೇವೆ.

ಮಣಿಪೂರು ರಾಜ್ಯದಲ್ಲಿ ನಡೆದಿರುವ ಕ್ರೈಸ್ತರ ಮೇಲಿನ ದೌರ್ಜನ್ಯ ಹಾಗೂ ಚರ್ಚುಗಳ ಧ್ವಂಷ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿ ಕ್ರೈಸ್ತ ಜನಾಂಗ ಧರ್ಮದವರಿಗೆ ರಕ್ಷಣೆಯನ್ನು ನೀಡಬೇಕ್ಕಾಗಿತ್ತು. ಆದರೆ ಆ ಕೆಲಸವನ್ನು ಇಲ್ಲಿವರಿಗೂ ಮಾಡದಿರುವ ಕಾರಣಕ್ಕಾಗಿ ಮಣಿಪೂರು ಸರ್ಕಾರ ವಜಾಗೋಳಿಸಿ, ರಾಷ್ಟ್ರಪತಿ ಆಡಳಿತವನ್ನು ಜಾರಿಗೋಳಿಸಿ, ಕ್ರೈಸ್ತ ಧರ್ಮಿಯರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ರಾಜ್ಯದಲ್ಲಿ ಶಾಂತಿ-ಸುವ್ಯವಸ್ಥೆಯನ್ನು ಕಾಪಾಡಲು ಈ ಮೂಲಕ ವಿನಂತಿ ಮಾಡುತ್ತಿದ್ದೇವೆ. ಕ್ರೈಸ್ತ ಧರ್ಮದವರು ಇರುವ ವಿವಿಧ ರಾಷ್ಟ್ರಗಳಿಗೆ ದೇಶದ ಪ್ರಧಾನ ಮಂತ್ರಿಗಳು ಬೇಟಿಕೊಟ್ಟ ಸಮಯದಲ್ಲಿ ಭವ್ಯವಾದ ಸ್ವಾಗತ ಮತ್ತು ಸನ್ಮಾನ ಮಾಡಿರುವ ದೃಷ್ಯಗಳನ್ನು ನಾವು ಮಾಧ್ಯಮಗಳಲ್ಲಿ ನೋಡಿದ್ದೇವೆ. ಭಾರತದ ಪ್ರಧಾನಿಯಾಗಿದ್ದುಕೊಂಡು ಆ ಘನತೆ ಗೌರವವನ್ನು ತಾವು ಪಡೆದುಕೊಳ್ಳಬೇಕ್ಕಾದರೆ, ದೇಶದೊಳಗೆ ಕ್ರೈಸ್ತ ಜನಾಂಗ ಮತ್ತು ಧರ್ಮದವರಿಗೆ ರಕ್ಷಣೆ, ಸಮಾನತೆ, ಸ್ವಾಭಿಮಾನದ ಬದುಕು ನೀಡಬೇಕ್ಕಾಗಿದೆ.

ಒಂದುವಾರದೊಳಗಾಗಿ ಕ್ರೈಸ್ತ ಧರ್ಮಿಯರ, ಜನಾಂಗದವರ ಮೇಲೆ ಮಾಡಿರುವ ದೌರ್ಜನ್ಯ, ಹಾಗೂ ಚರ್ಚುಗಳ ಧ್ವಂಷ ಪ್ರಕರಣಕ್ಕೆ ಕಾರಣಕರ್ತರಾಗಿರುವ ಕಿಡಿಗೆಡಿಗಳನ್ನು ಬಂಧಿಸಿ, ದೇಶದ್ರೋಹಿ ಪ್ರಕರಣ ದಾಖಲಿಸಿ, ದೇಶದಿಂದ ತಡಿಪಾರು ಮಾಡಬೇಕು. ಐವತ್ತು ಸಾವಿರÀ ಕುಟುಂಬಗಳಿಗೆ ರಕ್ಷಣೆ ನೀಡಿ, ಪುನರ ವಸತಿ ಕಲ್ಪಿಸಿಕೊಡಬೇಕು. ಅಪರಾದ ಮಾಡಿದರನ್ನು ಬಂಧಿಸಿ ಶಿಕ್ಷೆ ನೀಡಲು ವಿಳಂಬವಾಗಿದಲ್ಲಿ ದೇಶವ್ಯಾಪ್ತಿ ನಿರಂತರ ಹೋರಾಟ ಮಾಡಲಾಗುವುದು. ಕೇಂದ್ರವನ್ನು ಪ್ರತಿನಿಧಿಸುವ ಮಂತ್ರಿಗಳಿಗೆ ಗೇರಾವು ಹಾಕಲಾಗುವುದು. ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದ ಹಾಗೆ ಕೇಂದ್ರ ಸರ್ಕಾರ ಮಾಡಬೇಕು. ತಾವು ಮಣಿಪೂರು ಕ್ರೈಸ್ತ ಮೇಲೆ ಆಗಿರುವ ದೌರ್ಜನ್ಯವನ್ನು ಮಾನವಿಯತೆ ದೃಷ್ಠಿಯಿಂದ ನೊಡಿ ಮಣಿಪೂರು ಸರ್ಕಾರ ವಜಾ ಮಾಡಿ ರಾಷ್ಟ್ರಪತಿ ಆಡಳಿತ ಜಾತಿಗೊಳಿಸಲು ವಿನಂತಿ ಮಾಡುತ್ತಿದ್ದೇವೆ. .

ಸಂವಿಧಾನದ ಆಶಯದಂತೆ ಎಲ್ಲಾ ಧರ್ಮ ಜಾತಿಯವರಂತೆ ಸಮಾನತೆ ಬದುಕು ಸ್ವಾಭಿಮಾನದ ಬದುಕು ಕ್ರೈಸ್ತ ಧರ್ಮಿಯರಿಗೆ ನೀಡಬೇಕೆಂದು ಬೀದರ ಜಿಲ್ಲಾ ಕ್ರೈಸ್ತ ಸಂಘಟನೆಗಳ ಒಕ್ಕೂಟ ಮನವಿ ಮೂಲಕ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂರ್ಭದಲ್ಲಿ ರಾಜು ಕೊಳಾರ, ಅನೀಲ ನಿಡೋದಾ, ಜಾನವೇಸ್ಲಿ, ಅನೀಲ ಜಾಧವ, ಮೋಜಸ್ ನಿರ್ಣಾಕರ್, ಅರುಣ ಆಣದೂರ, ಏಸುದಾದ ಆಣದೂರ, ಜಗ್ನಾಥ ಕೌಠಾ, ಅಶೊಕ ವಗ್ಗೆ, ಸುಧಾಕರ ರಾಜಗೀರಾ, ಶಿವಕುಮಾರ ತುಂಗಾ, ಸ್ವಾಮಿದಾಸ ಗುಮ್ಮೆ, ಎಸುದಾಸ ಮನ್ನಳ್ಳಿ, ಇಮಾನೇಲ್ ಮಂದಕನಳ್ಳಿ, ಅಮರ ಭಾಂಗೆ, ಸುರೇಸ ರಾಯ, ದೇವಿಂದ್ರ, ಅಭಿ ಕಾಳೆ, ಬಂಟಿ ದರಬಾರೆ, ಸ್ವಾಮಿದಾಸ ಕೆಂಪೇನೋರ, ಸಂಜಯ ಜಾಗೀರದಾರ ಸೇರಿದಂತೆ ಅನೇಕರು ಇದ್ದರು.