ಕ್ರೈಸ್ತ ಬಾಂಧವರಿಂದ ಚರ್ಚುಗಳಲ್ಲಿ ಪರಸ್ಪರ ಶುಭಾಶಯ ವಿನಿಮಯ

ಹನೂರು, ಡಿ.26: ಶಾಂತಿಧೂತ ಯೇಸುಕ್ರಿಸ್ತನ ಜನ್ಮದಿನ ಹಿನ್ನೆಲೆ ಕ್ರೈಸ್ತ ಬಾಂಧವರು ಚರ್ಚುಗಳಲ್ಲಿ ಪ್ರಾರ್ಥನೆ ನೆರವೇರಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುವ ಮೂಲಕ ಕ್ರಿಸ್‍ಮಸ್ ಹಬ್ಬವನ್ನು ಆಚರಣೆ ಮಾಡಲಾಯಿತು.
ಹನೂರು ಪಟ್ಟಣದ ಸಂತ ಅಂಥೋಣಿಯಮ್ಮಾಳ್ ಚರ್ಚಿನಲ್ಲಿ ಗುರುವಾರ ತಡರಾತ್ರಿ ಮತ್ತು ಶುಕ್ರವಾರ ಬೆಳಗ್ಗೆ ವಂದನೀಯ ಧರ್ಮಗುರು ರೋಷನ್ ಉಪಸ್ಥಿತಿಯಲ್ಲಿ ಸಾಮಾಹಿಕ ಪ್ರಾರ್ಥನೆ ಸೇರಿದಂತೆ ಕ್ರೈಸ್ತ ಧರ್ಮಗುರುಗಳು ದಿವ್ಯ ಪೂಜೆ ನೆರವೇರಿಸಿದರಲ್ಲದೆ ಪವಿತ್ರ ಪ್ರಸಾದವನ್ನು ವಿತರಿಸಲಾಯಿತು.
ಕ್ರಿಸ್‍ಮಸ್ ಹಿನ್ನೆಲೆ ಚರ್ಚಿನ ಮುಂಭಾಗದಲ್ಲಿ ನಿರ್ಮಿಸಿದ್ದ ಗೋದಲಿ ಹಾಗೂ ಚರ್ಚನ್ನು ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿ ಕ್ರೈಸ್ತ ಬಾಂಧವರು ತಮ್ಮ ಮನೆಯ ಮುಂಭಾಗದಲ್ಲಿ ನಕ್ಷತ್ರ ದೀವ ನೆರೆದಿದ್ದ ಎಲ್ಲರ ಕಣ್ಮನ ಸೆಳೆಯಿತು.
ಇದೆ ವೇಳೆ ಕ್ರಿಸ್ ಮಸ್ ಹಿನ್ನಲೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ವಿವಿಧ ಗ್ರಾಮಗಳಲ್ಲಿ ಕ್ರಿಸ್ ಮಸ್ ಆಚರಣೆ: ಹನೂರು ಪಟ್ಟಣ ಮಾತ್ರವಲ್ಲದೆ ತಾಲೂಕಿನ ಮಾರ್ಟಳ್ಳಿ, ವಡ್ಡರದೊಡ್ಡಿ, ವಡಕೆಹಳ್ಳ, ತೋಮಿಯರ್‍ಪಾಳ್ಯ, ಪುಷ್ಪಾಪುರ, ಪಿ.ಜಿ.ಪಾಳ್ಯ ಸೇರಿದಂತೆ ವಿವಿಧೆಡೆ ಸಾಮೂಹಿಕ ಪ್ರಾರ್ಥನೆ ನೆರವೇರಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಮಾರ್ಟಳ್ಳಿಯಲ್ಲಿ ಧರ್ಮಗುರು ಕ್ರಿಸ್ಟೋಫರ್, ಸೆಬಾಸ್ಟಿನ್, ಜಾನ್‍ಪೀಟರ್ ಬಲಿಪೂಜೆ ನೆರವೇರಿಸಿದರು.
ಅಲ್ಲದೆ ಇನ್ನು ಕೆಲವರು ತಮ್ಮ ಮನೆಯಲ್ಲಿಯೇ ಗೋದಲಿ ನಿರ್ಮಾಣ ಮಾಡಿ ಕ್ರಿಸ್ ಮಸ್ ಆಚರಣೆ ಮಾಡಿದರು.