ಕ್ರೈಸ್ತರ ಆಸ್ತಿ ಅಕ್ರಮ ಮಾರಾಟ ವಿರುದ್ಧ ಪ್ರತಿಭಟನೆ

ಕೋಲಾರ,ಜ,೨೨-ನಗರದ ಪ್ರತಿಷ್ಠಿತ ಇಟಿಸಿಎಂ ಆಸ್ಪತ್ರೆಯನ್ನು ೨೯ ವರ್ಷ ೧೧ ತಿಂಗಳು ಖಾಸಗಿಯವರಿಗೆ ಮಾರಾಟ ಮಾಡಲು ಮುಂದಾಗಿದ್ದಾರೆ ಇದರ ವಿರುದ್ದ ಹೋರಾಟದ ಮೂಲಕ ನ್ಯಾಯ ಪಡೆಯಲು ಮುಂದಾಗಿದ್ದೇವೆ ಎಂದು ಕ್ರೈಸ್ತ ಮುಖಂಡ ಜಯದೇವ್ ಪ್ರಸನ್ನ ತಿಳಿಸಿದರು.
ನಗರದ ಪತ್ರಕರ್ತರ ಭವನದಲಿ ಸುದ್ಧಿಗಾರರೊಂದಿಗೆ ಅವರು ಮಾತನಾಡಿ, ಇಟಿಸಿಎಂ ಆಸ್ಪತ್ರೆಯೂ ಸುಮಾರು ೧೯೧೦ ರಲ್ಲಿ ಪ್ರಾರಂಭವಾಗಿದ್ದು ಸುಮಾರು ಎಂಟು ಎಕರೆ ಜಾಗದಿಂದ ಸುಂದರವಾಗಿದೆ ನಗರದ ಪ್ರಮುಖವಾದ ಸ್ಥಳದಲ್ಲಿ ಇದ್ದು ತಿಂಗಳಿಗೆ ಕನಿಷ್ಠ ೬೦ ಲಕ್ಷ ಆದಾಯ ಬರುತ್ತದೆ ಅಂಥ ಆಸ್ಪತ್ರೆ ಮಾರಾಟ ಮಾಡಲು ಬೆಂಗಳೂರಿನ ಬಿಷಪ್ ಎನ್.ಎಲ್.ಕರ್ಕರೆ ಹಾಗೂ ಮೆಥೋಡಿಸ್ಟ್ ಚರ್ಚ್ ಮೇಲ್ವಿಚಾರಕ ಶಾಂತಕುಮಾರ್ ಮುಂದಾಗಿದ್ದಾರೆ. ಎಂದು ದೂರಿದರು.
ನಗರದಲ್ಲಿ ಬಡವರಿಗೆ ಅದರಲ್ಲೂ ಎಲ್ಲಾ ವರ್ಗದ ಜನರಿಗೆ ಆರೋಗ್ಯ ಸೇವೆ ನೀಡುವ ಇಟಿಸಿಎಂ ಆಸ್ಪತ್ರೆಗೆ ಆಡಳಿತಾಧಿಕಾರಿ ಶಾಂತಕುಮಾರ್ ಬಂದ ನಂತರ ಪ್ರಾರ್ಥನೆ ಮಾಡುವುದನ್ನು ಬಿಟ್ಟು ರಿಯಲ್ ಎಸ್ಟೇಟ್ ಮಾರಾಟಕ್ಕೆ ಇಳಿದಿದ್ದಾರೆ ನಗರದಲ್ಲಿ ಇರುವ ಮೆಥೋಡಿಸ್ಟ್ ಸಂಸ್ಥೆಯ ಶಾಲೆಯನ್ನೂ ಮಾರಲು ಹೊರಟಿದ್ದಾರೆ ಎಂದು ಅರೋಪಿಸಿದರು.
ಮೆಥೋಡಿಸ್ಟ್ ನಿಯಮಗಳ ಪ್ರಕಾರ ಆಸ್ತಿ ಮಾರಾಟ ಮಾಡುವಂತಿಲ್ಲ ಕೇವಲ ಅಭಿವೃದ್ಧಿಪಡಿಸಬಹುದಾಗಿತ್ತು ಅದರೆ ಇವರು ನಕಲಿ ದಾಖಲೆಗಳನ್ನು ಸೃಷ್ಠಿಸಿ ಆಸ್ತಿಗಳನ್ನು ಕಾನೂನು ಬಾಹಿರವಾಗಿ ಮಾಡುತ್ತಿದ್ದಾರೆ.ಅದರೆ ಪೊಲೀಸರಿಗೆ ದೂರು ನೀಡಿದರೂ ಸಹ ಯಾವೂದೇ ಕ್ರಮ ಜರುಗಿಸುತ್ತಿಲ್ಲ ಎಂದ ಅವರು ಇವರ ವಿರುದ್ದ ಮುಂದಿನ ಭಾನುವಾರದಂದು ಚರ್ಚ್ ಆವರಣದಲ್ಲಿ ಕಪ್ಪು ದಿನ ಆಚರಣೆ ಮಾಡುತ್ತೇವೆ ಜೊತೆಗೆ ಮುಂದಿನ ದಿನಗಳಲ್ಲಿ ಬೆಂಗಳೂರಿನ ಬಿಷಪ್ ಎನ್.ಎಲ್.ಕರ್ಕರೆ ಮನೆ ಮುಂದೆ ಅನಿರ್ದಿಷ್ಟ ಅವಧಿ ಸತ್ಯಾಗ್ರಹ ಹಮ್ಮಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ವಿವರಿಸಿದರು,
ಮುಖಂಡರಾದ ದೇವಕುಮಾರ್, ಬಂಗಾರಪೇಟೆ ಮೆಥೋಡಿಸ್ಟ್ ಸಂಸ್ಥೆಯ ಸದಸ್ಯೆ ಶಾಂತಮ್ಮ, ಜಾರ್ಜ್ ಮೈಕಲ್, ನಿರ್ಮಲ್ ಕುಮಾರ್ ಉಪಸ್ಥಿತರಿದ್ದರು.