ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಂದ 2024ನೇ ಕ್ಯಾಲೆಂಡರ್ ಬಿಡುಗಡೆ

ಸಂಜೆವಾಣಿ ವಾರ್ತೆ

ದಾವಣಗೆರೆ. ಜ ೧೧; ಬೆಂಗಳೂರಿನ ಅಬ್ಬಾಯಿನಾಡು ಸ್ಟುಡಿಯೋದಲ್ಲಿ ಅಖಿಲ ಕರ್ನಾಟಕ ರವಿಚಂದ್ರನ್ ಅಭಿಮಾನಿಗಳ ಸಂಘದ ವತಿಯಿಂದ 2024ರ ನೂತನ ಹೊಸ ವರ್ಷದ ಕ್ಯಾಲೆಂಡರ್ ರನ್ನು ಹಿರಿಯ ನಟ ನಿರ್ಮಾಪಕ ನಿರ್ದೇಶಕ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕ್ರೇಜಿಸ್ಟಾರ್ ಡಾ .ವಿ ರವಿಚಂದ್ರನ್ ರವರು ಬಿಡುಗಡೆ ಮಾಡಿದರು ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಈ ವರ್ಷವೂ ರಾಜ್ಯದಲ್ಲಿ ಉತ್ತಮ ಮಳೆ ಬೆಳೆಯಾಗಲಿ ರಾಜ್ಯದ ರೈತರ ಹಾಗೂ ಜನರ ಸಮಸ್ಯೆಗಳ ಬಗ್ಗೆ ಅರಿಯಲಿ ನಾಡಿಗೆ ತಾಯಿ ಚಾಮುಂಡೇಶ್ವರಿ ಒಳ್ಳೆಯದನ್ನು ಮಾಡಲಿ ಸುಖ ಶಾಂತಿ ನೆಮ್ಮದಿ ತರಲಿ ನಾಡಿಗೆ ಯಾವುದೇ ಕೋಯಿಡ್ ಅಂತ ಮಾರಕ ವೈರಸ್ಗಳು ಬರದೇ ಇರಲಿ ಹಾಗೂ ನಾಡಿನ ಸಮಸ್ತ ಜನತೆಗೆ ಹೊಸ ವರ್ಷ ಹಾಗೂ ಸಂಕ್ರಾAತಿಯ ಶುಭಾಶಯಗಳು ಕೋರಿದರು ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರದ ಜೆ.ಕೆ ಮೋಹನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಚಂದ್ರಶೇಖರ್ ರಾಜ್ಯ ಉಪಾಧ್ಯಕ್ಷರಾದ ಎಸ್ ಸದಾಶಿವ ಜಂಟಿ ಕಾರ್ಯದರ್ಶಿ ಜಿ ಶಂಕರ್ ಎಂ ಕೆ ಶಿವಕುಮಾರ್ ದಾವಣಗೆರೆ ಜಿಲ್ಲಾ ಗೌರವ ಅಧ್ಯಕ್ಷರಾದ ಡಾ. ಬಿ ವಾಸುದೇವ್ ಜಿಲ್ಲಾಧ್ಯಕ್ಷ ಎಂ ಮನು ಮೈಸೂರು ಜಿಲ್ಲಾಧ್ಯಕ್ಷರಾದ ಸತೀಶ್ ಆರಾಧ್ಯ ಇನ್ನಿತರ ಉಪಸ್ಥಿತರಿದ್ದರು