ಹುಬ್ಬಳ್ಳಿ,ಜೂ9: ಕ್ರೆಡೈನ ನೂತನ ರಾಜ್ಯಾಧ್ಯಕ್ಷರಾಗಿ ಹುಬ್ಬಳ್ಳಿಯ ಉದ್ಯಮಿ ಪ್ರದೀಪ ರಾಯ್ಕರ್ ಅವರು ಆಯ್ಕೆಯಾಗಿದ್ದು, ಇವರ ಅಧಿಕಾರ ಸ್ವೀಕಾರ ಸಮಾರಂಭ ಹುಬ್ಬಳ್ಳಿಯ ಡೆನ್ನಿಸನ್ಸ್ ಹೋಟೆಲ್‍ನಲ್ಲಿ ಜೂನ್ 10ರಂದು ಸಂಜೆ 6 ಗಂಟೆಗೆ ನಡೆಯಲಿದೆ.
ಸಮಾರಂಭದಲ್ಲಿ ಕ್ರೆಡೈ ನಿಕಟಪೂರ್ವ ರಾಜ್ಯಾಧ್ಯಕ್ಷ ಚೈತನ್ಯ ಕುಲಕರ್ಣಿ ಅವರು ನೂತನ ಅಧ್ಯಕ್ಷ ಪ್ರದೀಪ ರಾಯ್ಕರ್ ಅವರಿಗೆ ಅಧಿಕಾರ ಹಸ್ತಾಂತರ ಮಾಡುವರು. ಇದೇ ವೇಳೆ ಹುಬ್ಬಳ್ಳಿ ಕ್ರೆಡೈ ಅಧ್ಯಕ್ಷರಾಗಿ ಆಯ್ಕೆಯಾದ ಸಂಜಯ ಕೊಠಾರಿ ಅವರೂ ಅಧಿಕಾರ ಸ್ವೀಕಾರ ಮಾಡುವರು. ಕ್ರೆಡೈನ ನಿಕಟಪೂರ್ವ ರಾಷ್ಟ್ರೀಯ ಅಧ್ಯಕ್ಷ ಇರ್ಫಾನ್ ರಜಾಕ್, ಸುನಿಲ್ ಮಂತ್ರಿ, ರಮಾಣಿ ಶಾಸ್ತ್ರಿ, ಶ್ರೀಧರನ್ ಸ್ವಾಮಿನಾಥನ್ ಸಮಾರಂಭದಲ್ಲಿ ಪಾಲ್ಗೊಳ್ಳುವರು.