ಕ್ರೆಡಾಯ್ ಉತ್ತರ ಕರ್ನಾಟಕ ಅಧ್ಯಕ್ಷರಾಗಿ ರಾಠಿ ಆಯ್ಕೆ

ಕಲಬುರಗಿ:ಎ.23: ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಕ್ರೆಡಾಯ್) ಕರ್ನಾಟಕ ಘಟಕದ ಉಪಾಧ್ಯಕ್ಷರಾಗಿ (ಉತ್ತರ) ಉದ್ಯಮಿ ಸಂಜೋಗ್ ರಾಠಿ ಹಾಗೂ ಕಲಬುರಗಿ ಜಿಲ್ಲಾ ಕ್ರೆಡಾಯ್ ಅಧ್ಯಕ್ಷರಾಗಿ ಮಹ್ಮದ್ ಅಬ್ದುಲ್ ನಜೀಬ್ ಆಯ್ಕೆಯಾಗಿದ್ದಾರೆ.

ಸಲಹೆಗಾರರು ಮತ್ತು ಮೆಂಟರ್ ಆಗಿರುವ ಮಹ್ಮದ್ ರಫಿಯೋದಿನ್ ಹಾಗೂ ನಿರ್ಗಮಿತ ಅಧ್ಯಕ್ಷ ಸಂಜೋಗ್ ರಾಠಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚರ್ಚೆ ನಡೆಸಿ ಕಲಬುರಗಿ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

2021-23ನೇ ಅವಧಿಗಾಗಿ ನಜೀಬ್ ಅಧ್ಯಕ್ಷರಾದರೆ, ಉಪಾಧ್ಯಕ್ಷರಾಗಿ ಬಸವರಾಜ ಮಾಲಿಪಾಟೀಲ ಮತ್ತು ಮಹ್ಮದ್ ಶಫೀಕ್, ಕಾರ್ಯದರ್ಶಿಯಾಗಿ ನಾಗಾರ್ಜುನ ಮೈಲಾಪುರ, ಜಂಟಿ ಕಾರ್ಯದರ್ಶಿಯಾಗಿ ಕೃಷ್ಣಾಜಿ ಘನಾತೆ, ಖಜಾಂಚಿಯಾಗಿ ಇಫ್ತೇಕಾರ್ ಅಹ್ಮದ್ ಆಯ್ಕೆಯಾದರು.

ರಾಜ್ಯ ಉಪಾಧ್ಯಕ್ಷರಾಗಿ ರಾಠಿ ಅವರನ್ನು ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಕ್ರೆಡಾಯ್ ಶಾಖೆಗಳು ದೇಶದ 23 ರಾಜ್ಯಗಳ 203 ನಗರಗಳಲ್ಲಿವೆ. ರಿಯಲ್ ಎಸ್ಟೇಟ್ ಕ್ಷೇತ್ರದ ಮಹತ್ವದ ಸಂಘಟನೆಯಾಗಿದೆ.