ಕಲಬುರಗಿ.ಮೇ.31:ಕೆಆರ್‍ಐಡಿಎಲ್ ಅಧೀಕ್ಷಕ ಅಭಿಯಂತರರೊಬ್ಬರ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತರು ಬುಧವಾರ ಬೆಳಿಗ್ಗೆ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲಿಸಿದರು.
ಕಲಬುರ್ಗಿ ಮತ್ತು ಕೊಪ್ಪಳ್ ಲೋಕಾಯುಕ್ತರು ಕೆಆರಐಡಿಎಲ್ ಕಲಬುರ್ಗಿ ಮತ್ತು ಕೊಪ್ಪಳದ ಪ್ರಭಾರಿ ಅಧೀಕ್ಷಕ ಅಭಿಯಂತರ ಝರಣಪ್ಪ ಚಿಂಚೋಳಿಕರ್ ಅವರ ಮನೆ ಮತ್ತು ಕಚೇರಿ ಮೇಲೆ ದಾಳಿ ಮಾಡಿದರು.
ಝರಣಪ್ಪ ಚಿಂಚೋಳಿಕರ್ ಅವರ ನಗರದ ಜಯನಗರದ ನಿವಾಸದ ಮೇಲೆ ದಾಳಿ ಮಾಡಿದ ಲೋಕಾಯುಕ್ತರು, ಅದೇ ರೀತಿ ಲಕ್ಷ್ಮೀ ನಗರದ ಹೊಸ ಮನೆ ನಿರ್ಮಾಣದ ಕುರಿತೂ ಪರಿಶೀಲನೆ ಮಾಡಿದರು. ದಾಳಿಯ ವೇಳೆ ಹೊಸ ಮನೆಯ ಮೇಲ್ಮಹಡಿಯಲ್ಲಿ ಝರಣಪ್ಪ ಚಿಂಚೋಳಿಕರ್ ಅವರು ಕುಳಿತಿದ್ದರು.
ರಾಜ್ಯದಾದ್ಯಂತ ವಿವಿಧೆಡೆ ಲೋಕಾಯುಕ್ತರು ಭ್ರಷ್ಟ ಅಧಿಕಾರಿಗಳ ಮೇಲೆ ಏಕಕಾಲಕ್ಕೆ ದಾಳಿ ಮಾಡಿದ್ದು, ನಗರದಲ್ಲಿ ಕೆಆರ್‍ಐಡಿಎಲ್ ಅಧೀಕ್ಷಕ ಅಭಿಯಂತರರ ಅಕ್ರಮ ಆಸ್ತಿಯ ಮೇಲೂ ಸಹ ಲೋಕಾಯುಕ್ತ ಡಿವೈಎಸ್‍ಪಿ ಮಂಜುನಾಥ್ ಗಂಗಲ್ ಹಾಗೂ ಪಿಐ ಧೃವತಾರಾ ಅವರ ನೇತೃತ್ವದಲ್ಲಿನ ಹತ್ತು ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡರು. ಅಧಿಕಾರಿ ಝರಣಪ್ಪ ಚಿಂಚೋಳಿಕರ್ ಅವರು ಬೀದರ್ ಜಿಲ್ಲೆಯ ಚಿಟಗುಪ್ಪಾ ಮೂಲದವರು ಎಂದು ತಿಳಿದುಬಂದಿದೆ.