ಕ್ರೀಡೆ ಯುವಕರಿಗೆ ಸ್ಪೂರ್ತಿ ನೀಡುತ್ತದೆ

ಶಹಾಪುರ :ನ.8: ನಗರದ ಕ್ರೀಡಾಂಗಣದಲ್ಲಿ ನಡೆದ ಬ್ಯಾಡ್ಮಿಂಟ ಟೂರ್ನಮೆಂಟರಲ್ಲಿ ಭಾಗವಹಿಸಿ ಮಾತನಾಡಿದ ಬಾಪುಗೌಡ ದರ್ಶನಾಪುರವರು ಪ್ರತಿಯೊಂದು ಕ್ರೀಡೆಗಳು ಯುವಕರಿಗೆ ಸ್ಪೂರ್ತಿ ನೀಡುತ್ತವೆ ಯುವಕರು ಸದೃಢವಾಗಲು ಪ್ರತಿಯೊಬ್ಬರು ಕ್ರೀಡೆಯಲ್ಲಿ ಭಾಗವಹಿಸಿದಾಗ ದೈಹಿಕವಾಗಿ ಮಾನಸಿಕವಾಗಿ ಸಾಮಥ್ರ್ಯ ಹೊಂದುತ್ತಾರೆ ಅದಕ್ಕಾಗಿ ಹೆಚ್ಚಿನ ಯುವಕರು ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಬಾಪು ಗೌಡ ದರ್ಶನಾಪುರ ಹೇಳಿದರು.

ಶಹಾಪುರ ಕ್ರೀಡಾಂಗಣದ ಒಳಾಂಗಣದಲ್ಲಿ ಏರ್ಪಡಿಸಿದ
ದಿ / ಬಾಪುಗೌಡ ದರ್ಶನಾಪುರ ಅವರ ಸವಿ ನೆನಪಿಗಾಗಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಬ್ಯಾಡ್ಮಿಂಟನ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಮಾತನಾಡುತ್ತಾ ಇಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿರಲು ಕ್ರೀಡೆಗಳು ಸಹಕರಿಸುತ್ತವೆ
ಅದಕ್ಕೆ ಕ್ರೀಡಾಕೂಟಗಳು ಮನ್ನಣೆ ಪಡೆದು ಪಡೆದುಕೊಳ್ಳುತ್ತಿವೆ ಸದೃಢವಾದೈ ದೆಹದಲ್ಲಿ ಸದೃಢವಾದ ಮನಸಿರಬೇಕಾದರೆ ಇಂತಹ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಸದೃಢವಾಗುತ್ತಾರೆ ಇಂದಿನ ದೇಶಿಯ ಆಟಗಳು ಕಣ್ಮರೆಯಾಗುತ್ತಿರುವ ಸಂದರ್ಭದಲ್ಲಿ ಮತ್ತೆ ಅವುಗಳನ್ನು ಮುನ್ನೆಲೆಗೆ ತರುತ್ತಿರುವುದು ತುಂಬಾ ಸಂತೋಷವಾಗಿದೆ ಕಬ್ಬಡಿ ಕೋಕೋ ಕ್ರಿಕೆಟ್ ಬ್ಯಾಡ್ಮಿಂಟನ್ ವಾಲಿಬಾಲ್ ಕುಸ್ತಿ ಇವುಗಳು ಯುವಕರು ಹೆಚ್ಚಿನ ರೀತಿಯಲ್ಲಿ ಆಸಕ್ತಿ ಹೊಂದಿದ್ದಾರೆ ಎಂದು ಹೇಳಿದರು.
ಬ್ಯಾಡ್ಮಿಂಟನ್ ಮಟ್ಟದಲ್ಲಿ ಬೆಳಗ್ಗೆಯಿಂದ ಪ್ರಾರಂಭವಾದ ಸ್ಪರ್ಧೆಯಲ್ಲಿ ಜಿಲ್ಲೆಯಾದ್ಯಂತ 44 ತಂಡಗಳು ಭಾಗವಹಿಸಿದವು ಆದರೆ ಪ್ರಥಮ ಸ್ಥಾನ ಶಹಾಪುರದ ತಂಡದ ನಾಯಕರಾದ ಸಂತೋಷ್ ವಟರಾ ಮತ್ತು ವೆಂಕಟೇಶ್ ಪ್ರಥಮ ಸ್ಥಾನ ಪಡೆದುಕೊಂಡರು ದ್ವಿತೀಯ ಸ್ಥಾನವನ್ನು ಯಾದಗಿರಿ ತಂಡದವರು ಪಡೆದುಕೊಂಡರು ಎಂದು ಬ್ಯಾಡ್ಮಿಂಟನ್ ಆಯೋಜಕರಾದ ಶರಣಗೌಡ ಪಾಟೀಲ್ ಹೇಳಿದರು ಈ ಸಂದರ್ಭದಲ್ಲಿ ಪ್ರಶಸ್ತಿ ಪ್ರಧಾನವನ್ನು ಯುವ ನಾಯಕರಾದ ಬಾಪೂಗೌಡ ದರ್ಶನಾಪುರ ವಿತರಿಸಿದರು ದರ್ಶನಾಪುರವರ ಆಪ್ತ ಸಹಾಯಕರಾದ ಶಿವಶರಣ ಇಟಗಿ ,ಕಾಂಗ್ರೆಸ್ ಪಕ್ಷದ ಯುವ ಘಟಕದ ತಾಲೂಕ ಅಧ್ಯಕ್ಷರಾದ ಮೌನೇಶ್ ನಾಟೇಕರ್, ಸದಾಶಿವ ಮುಧೋಳ, ಹಲವಾರು ಜನರು ಭಾಗವಹಿಸಿದರು.