ಕ್ರೀಡೆ ಮನುಷ್ಯನಲ್ಲಿ ಉತ್ಸಾಹ ಚೈತನ್ಯವನ್ನು ತುಂಬುತ್ತದೆ:ಶ್ರೀಧರ

ತಾಳಿಕೋಟೆ:ಸೆ.23: ಕ್ರೀಡೆಯು ಮನಸ್ಥೈರ್ಯ ತುಂಬುವದರೊಂದಿಗೆ ಉತ್ಸಾಹ ಚೈತನ್ಯವನ್ನು ಇಮ್ಮಡಿಗೊಳಿಸುತ್ತದೆ ಎಂದು ತಾಲೂಕಾ ತಹಶಿಲ್ದಾರ ಶ್ರೀಧರ ಗೋಟೂರ ಅವರು ನುಡಿದರು.
ಗುರುವಾರರಂದು ಪುರಸಭೆ ಆವರಣದಲ್ಲಿ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘ ಹಾಗೂ ಪುರಸಭೆ ತಾಳಿಕೋಟೆ ಇವರ ಸಹಯೋಗದಲ್ಲಿ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಪೌರಕಾರ್ಮಿಕರಿಗಾಗಿ ಏರ್ಪಡಿಸಲಾದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಪೌರ ಕಾರ್ಮಿಕರು ದೈನಿಂದ ಸ್ವಚ್ಚತೆ ಅಲ್ಲದೇ ಇನ್ನಿತರ ಕೆಲಸ ಕಾರ್ಯಗಳಲ್ಲಿ ತೋಡಗಿಕೊಳ್ಳುತ್ತಾ ಸಾಗುತ್ತಾರೆ ಆದರೆ ದೈನಂದಿನ ಕೆಲಸದ ನಡುವೆಯೂ ಕೆಲವು ಚಟುವಟಿಕೆಗಳು ನಡೆಯುತ್ತಿದ್ದರೆ ಹೊಸ ಚೈತನ್ಯವೆಂಬುದು ಹುಟ್ಟುಕೊಳ್ಳುತ್ತದೆ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಪೌರ ಕಾರ್ಮಿಕರಿಗಾಗಿ ಕ್ರೀಡಾಕೂಟ ಆಯೋಜಿಸಿರುವದು ಸಂತಸದ ಸಂಗತಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರಸಭಾ ಉಪಾಧ್ಯಕ್ಷ ಮುಸ್ತಫಾ ಚೌದ್ರಿ ಅವರು ವಹಿಸಿದ್ದರು.
ಈ ಸಮಯದಲ್ಲಿ ಸದಸ್ಯರುಗಳಾದ ಅಣ್ಣಾಜಿ ಜಗತಾಪ, ಜೈಸಿಂಗ್ ಮೂಲಿಮನಿ, ಮಹಿಬೂಬ ಲಾಹೋರಿ, ಬಸವರಾಜ ಹೊಟ್ಟಿ, ಮಂಜೂರ ಬೇಪಾರಿ, ಮಕಾಂದಾರ, ಶರಣಗೌಡ ಗೊಟಗುಣಕಿ, ಪುರಸಭಾ ಮುಖ್ಯಾಧಿಕಾರಿ ಸುರೇಶ ನಾಯಕ, ಶಿವಾನಂದ ಜುಮನಾಳ, ಆರ್.ವಾಯ್.ನಾರಾಯಣಿ, ಸಿದ್ದಾರ್ಥ ಕಟ್ಟಿಮನಿ, ಆಯ್.ಎಚ್.ಮಕಾಂದಾರ, ಶಂಕರಗೌಡ ಬಿರಾದಾರ, ಚಂದು ಕಾಲೇಬಾಗ, ಶ್ರೀಪಾದ ಜೋಶಿ, ಸಿದ್ದಲಿಂಗ ಚೊಂಡಿಪಾಟೀಲ, ಎಸ್.ಎ.ಘತ್ತರಗಿ, ಸಿದ್ದಪ್ಪ ಕೊಳ್ಳಿ, ಡಿ.ಬಿ.ಜಾನ್ವೇಕರ, ಶಂಕರಗೌಡ ಪಾಟೀಲ, ಶ್ರೀಮತಿ ಎಸ್.ಎ.ಕುಲಕರ್ಣಿ, ಪ್ರಭು ನಾಲತವಾಡ, ಮೊದಲಾದವರು ಇದ್ದರು.
ಮಹಿಳಾ ಪೌರಕಾರ್ಮಿಕರಿಗಾಗಿ ಲಿಂಬು ಚಮಚ, ಮಿಜಕಲ್ ಚೇರ್, ಗುಂಡು ಏಸೇತ, ಸ್ಕೀಪಿಂಗ್, ರನ್ನಿಂಗ್, ಕ್ರೀಡೆಗಳು ನಡೆದವು, ಪುರುಷರಿಗಾಗಿ ಗುಂಡು ಏಸೇತ, ಕ್ರೀಕೇಟ್, ಅಲ್ಲದೇ ಪೌರಕಾರ್ಮಿಕರು ಮತ್ತು ಪೊಲೀಸ್‍ರ ನಡುವೆ ಕಬ್ಬಡ್ಡಿ ಕ್ರೀಡಾಕೂಟಗಳು ನಡೆದವು.