ಕ್ರೀಡೆ ಆರೋಗ್ಯಕ್ಕೆ ಸಹಕಾರಿ

ಕೋಲಾರ,ಏ.೨೧: ಕ್ರೀಡೆಯಲ್ಲಿ ಹೆಚ್ಚಾಗಿ ಭಾಗವಹಿಸುವುದರಿಂದ ಆರೋಗ್ಯವಾಗಿರಲು ಸಹಕಾರಿ ಮತ್ತು ಪ್ರತಿಭೆಗಳನ್ನು ಹೊರಗೆ ತರಲು ಅವಕಾಶವಾಗಲಿದೆ ಎಂದು ಬಿಜೆಪಿ ಮುಖಂಡರು ಹಾಗೂ ಆರ್.ಕೆ. ಪ್ರತಿಷ್ಠಾನದ ಅಧ್ಯಕ್ಷರಾದ ವಿ.ಮೋಹನ್ ಕೃಷ್ಣ ಹೇಳಿದರು.
ಬೇತಮಂಗಲದ ಹೊಸ ಬಡವಾಣೆಯ ೨ನೇ ಬ್ಲಾಕ್‌ನಲ್ಲಿ ಶ್ರೀ ವಿಘ್ನೇಶ್ವರ ಯುವಕರ ಸಂಘದ ವತಿಯಿಂದ ಮೂರು ದಿನಗಳ ಕಾಲ ಕ್ರಿಕೆಟ್ ಟೂರ್ನಿ ಪಂದ್ಯಾವಳಿಯಲ್ಲಿ ಬಹುಮಾನ ವಿತರಣೆ ಮಾಡಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಯುವಕರು ಹೆಚ್ಚಾಗಿ ಮೊಬೈಲ್ ಬಳಕೆಯಿಂದ ಕ್ರೀಡಾ ಮೇಲೆ ಆಸಕ್ತಿಯನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ, ಅಂತಹ ದುಚ್ಚಟಗಳನ್ನು ದೂರಮಾಡಿ ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದರು.
ಈ ಕ್ರಿಕೆಟ್ ಪಂದ್ಯಾವಳಿಗೆ ಪ್ರಥಮ ಬಹುಮಾನವನ್ನು ಬಿಜೆಪಿ ಮುಖಂಡರು ಹಾಗೂ ಆರ್.ಕೆ. ಪೌಂಡೇಶನ್ ಅಧ್ಯಕ್ಷರಾದ ವಿ.ಮೋಹನ್‌ಕೃಷ್ಣ, ಎರಡನೇ ಬಹುಮಾನ ಜಿಪಂ ಸದಸ್ಯರಾದ ನಿರ್ಮಾಲ ಅಮರೇಶ್, ದ್ವೀತಿಯ ಬಹುಮಾನ ಪಿಡಿಒ ಮಹೇಶ್, ನಾಲ್ಕನೇ ಬಹುಮಾನ ಡಾ.ಮಲ್ಲೇಶ್ ಕೊಡುಗೆಯಾಗಿ ನೀಡಿದರು.
ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನವನ್ನು ಹುಲಿಬೆಳೆ ತಂಡ ೩೦ ಸಾವಿರ ನಗದು ಮತ್ತು ಟ್ರೋಪಿಯನ್ನು ಪಡೆದರು, ಎರಡನೇ ಬಹುಮಾನ ಕಾರಹಳ್ಳಿ ತಂಡ ೨೦ ಸಾವಿರ ನಗದು ಮತ್ತು ಆಕರ್ಶಕ ಟ್ರೋಪಿಯನ್ನು ಪಡೆದಕೊಂಡರು, ತೃತೀಯ ಬಹುಮಾನ ವಿಘ್ನೇಶ್ವರ ಯುವಕರ ತಂಡ ೧೦ ಸಾವರ ನಗದು ಹಾಗೂ ಆಕರ್ಶಕ ಟ್ರೋಪಿಯನ್ನು ಪಡೆದರು, ನಾಲ್ಕನೇ ಬಹುಮಾನ ಕಮ್ಮಸಂದ್ರ ಜಾಲಿಬ್ರದರ್ಸ್ ತಂಡ ೫ ಸಾವಿರ ನಗದು ಹಾಗೂ ಟ್ರೋಪಿಯನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯರಾದ ನಿರ್ಮಲ ಅಂಬರೀಶ್, ಗ್ರಾಪಂ ಅಧ್ಯಕ್ಷರಾದ ಮಮತ ಗಣೇಶ್, ಗ್ರಾಪಂ ಸದಸ್ಯರಾದ ರಾಧಮ್ಮ ಉದಯ್ ಕುಮಾರ್, ಗಂಗಮ್ಮ ಕೊಂಡಪ್ಪ, ಗಣೇಶ್, ಬಜೆಪಿ ಪ್ರಾಧನ ಕಾರ್ಯದರ್ಶಿ ಹೇಮಾರೆಡ್ಡಿ, ಯುವ ಮೋರ್ಚಾ ಅಧ್ಯಕ್ಷ ಅರುಣ್ ಕುಮಾರ್, ಅನಿಲ್ ಮುಖಂಡರಾದ ಕಿಟ್ಟಪ್ಪ, ಕೃಷ್ಣಪ್ಪ, ಗಂಗಿರಡ್ಡಿ, ತೇಜು ಸೇರಿದಂತೆ ಅನೇಕ ಯುವಕರು ಮತ್ತು ಕ್ರೀಡಾ ಅಭಿಮಾನಿಗಳು ಹಾಜರಿದ್ದರು.